ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಲಿವೆ ಹಾರ್ಲೆ ಡೇವಿಡ್ಸನ್

Written By:

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮಾದರಿಯ ಎಂಜಿನ್‌ಗಳನ್ನು ಪರಿಚಯಿಸಲು ಮುಂದಾಗಿರುವ ಹಾರ್ಲೆ ಡೇವಿಡ್ಸನ್ ಸಂಸ್ಧೆಯು ಮುಂಬರುವ ಹೊಸ ಬೈಕ್ ಮಾದರಿಗಳಲ್ಲಿ ಸುಧಾರಿತ ತಂತ್ರಜ್ಞಾನ ಪರಿಚಯಿಸುವ ಬಗ್ಗೆ ಸುಳಿವು ನೀಡಿದೆ.

ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಲಿವೆ ಹಾರ್ಲೆ ಡೇವಿಡ್ಸನ್

ಐಷಾರಾಮಿ ಬೈಕ್ ಮಾದರಿಗಳಲ್ಲಿ ತನ್ನದೇ ಆದ ಬೇಡಿಕೆಯನ್ನು ಹೊಂದಿರುವ ಹಾರ್ಲೆ ಡೇವಿಡ್ಸನ್ ಉತ್ಪನ್ನಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಠ ಎಂಜಿನ್‌ಗಳೊಂದಿಗೆ ಅಭಿವೃದ್ದಿ ಹೊಂದಲಿದ್ದು, ಮಿಲ್ವಾಕೀ-8 ವಿ-ಟ್ವಿನ್ ಎಂಜಿನ್ ಪಡೆದುಕೊಳ್ಳಲಿವೆ.

ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಲಿವೆ ಹಾರ್ಲೆ ಡೇವಿಡ್ಸನ್

ಹಾರ್ಲೆ ಡೇವಿಡ್ಸನ್ ನಿರ್ಮಾಣದ ಎಲ್ಲ ಬೈಕ್ ಮಾದರಿಗಳಲ್ಲೂ ಮಿಲ್ವಾಕೀ-8 ವಿ-ಟ್ವಿನ್ ಎಂಜಿನ್ ಲಭ್ಯವಿರಲಿದ್ದು, ಈ ಹಿಂದಿನ ಸಾಂಪ್ರದಾಯಿಕ ವೈಶಿಷ್ಟ್ಯತೆಗಳನ್ನು ಕೂಡಾ ಮುಂದುವರಿಸಲಿದೆ ಎನ್ನಲಾಗಿದೆ.

ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಲಿವೆ ಹಾರ್ಲೆ ಡೇವಿಡ್ಸನ್

ಇಲ್ಲದೇ ಪ್ರತಿಯೊಂದು ಸಿಲಿಂಡರ್ ನಾಲ್ಕು ಕವಾಟಗಳಿದ್ದು, 'ಟ್ವಿನ್-ಕೂಲ್ಡ್' ಆವೃತ್ತಿಗಳು ವಾಟರ್ ಕೂಲ್ಡ್ ಸಿಲಿಂಡರ್ ಹೆಡ್‌ಗಳನ್ನು ಹೊಂದಿರಲಿವೆ.

ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಲಿವೆ ಹಾರ್ಲೆ ಡೇವಿಡ್ಸನ್

ಹೀಗಾಗಿ ಮಿಲ್ವಾಕೀ-8 ವಿ-ಟ್ವಿನ್ ಎಂಜಿನ್‌ನೊಂದಿಗೆ ಅಭಿವೃದ್ದಿ ಹೊಂದಲಿರುವ ಬೈಕ್‌ಗಳನ್ನು ಪ್ರಮುಖ ಮೂರು ವಿಭಾಗಳನ್ನಾಗಿ ಗುರುತಿಸಲಾಗಿದ್ದು, 107,114 ಮತ್ತು 117 ಎಂಬುವುದಾಗಿ ವಿಂಗಡಿಸಲಾಗಿದೆ.

Recommended Video
TVS Jupiter Classic Launched In India | In Kannada - DriveSpark ಕನ್ನಡ
ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಲಿವೆ ಹಾರ್ಲೆ ಡೇವಿಡ್ಸನ್

ಇದರಿಂದಾಗಿ 107 ವಿಭಾಗದಲ್ಲಿ ಬರುವ 1,746 ಸಿಸಿ ಸಾಮರ್ಥ್ಯದ ಬೈಕ್‌ಗಳು 92-ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಹೊಂದಿರಲಿದ್ದು, 114 ವಿಭಾಗದ 1,868 ಸಿಸಿ ಸಾಮರ್ಥ್ಯದ ಬೈಕ್‌ಗಳು 101-ಬಿಎಚ್‌ಪಿ ಮತ್ತು 117 ವಿಭಾಗದಲ್ಲಿನ 1,923-ಸಿಸಿ ಸಾಮರ್ಥ್ಯದ ಬೈಕ್‌ಗಳು 105-ಬಿಎಚ್‌ಪಿ ಉತ್ಪಾದಿಸಬಲ್ಲವು.

ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಲಿವೆ ಹಾರ್ಲೆ ಡೇವಿಡ್ಸನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಾರ್ಲೆ ಡೆವಿಡ್ಸನ್ ಸಂಸ್ಥೆಯು ಬೈಕ್ ಉತ್ಪಾದನೆಯಲ್ಲಿ 115ನೇ ವರ್ಷಾಚರಣೆ ಹಿನ್ನೆಲೆ ಇಂತದ್ದೊಂದು ಮಹತ್ವಹ ಯೋಜನೆಗೆ ಚಾಲನೆ ನೀಡಿದ್ದು, 2018ಕ್ಕೆ ಬಿಡುಗಡೆಯಾಗಲಿರುವ ಪ್ರತಿ ಮಾದರಿಯಲ್ಲೂ ಮಿಲ್ವಾಕೀ-8 ವಿ-ಟ್ವಿನ್ ಎಂಜಿನ್ ಪರಿಚಯಿಸುವ ಮೂಲಕ ಉತ್ತಮ ಕಾರ್ಯಕ್ಷಮತೆಗೆ ಅನುವು ಮಾಡಿಕೊಡುತ್ತಿದೆ.

English summary
Read in Kannada about 2018 Harley-Davidson Range To Get New Engines.
Please Wait while comments are loading...

Latest Photos