ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

Written By:

ಬೈಕ್ ತಯಾರಕ ಕಂಪನಿ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಸ್ಟ್ರೀಟ್ ರಾಡ್ 750 ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಉತ್ತಮ ತಂತ್ರಜ್ಞಾನ ಮತ್ತು ಶಕ್ತಿಯೊಂದಿಗೆ ಗ್ರಾಹಕರ ಮನ ಗೆಲ್ಲಲು ಬರುತ್ತಿದೆ.

To Follow DriveSpark On Facebook, Click The Like Button
ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ದುಬಾರಿ ಬೈಕ್ ತಯಾರಿಕೆಗೆ ಹೆಸರು ವಾಸಿಯಾಗಿರುವ ಹಾರ್ಲೆ ಡೇವಿಡ್ಸನ್ ಕಂಪನಿ ತನ್ನ ಹೊಚ್ಚ ಹೊಸ ಸ್ಟ್ರೀಟ್ ರಾಡ್ 750 ಬೈಕನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಈ ಮೂಲಕ ತನ್ನ ಸಾಮ್ರಾಜ್ಯ ಮತ್ತಷ್ಟು ವಿಸ್ತರಿಸುವ ಇರಾದೆ ಹೊಂದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಈ ನವೀನ ಮಾದರಿಯ ಅತಿ ಹೆಚ್ಚಿನ ಮಟ್ಟದ ಶಕ್ತಿ ಹೊಂದಿದ್ದು, ಉತ್ತಮ ಗುಣಮಟ್ಟದ ಯಂತ್ರಾಂಶ ಪಡೆದುಕೊಂಡಿರುವ ಕಾರಣ ಹೆಚ್ಚು ಬಲಿಷ್ಠತೆ ಹೊಂದಿರಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಭಾರತದ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಈ ಸ್ಟ್ರೀಟ್ ರಾಡ್ 750 ಬೈಕನ್ನು ನಿರ್ಮಿಸಲಾಗಿದೆ ಎಂದು ಹಾರ್ಲೆ ಡೇವಿಡ್ಸನ್ ಕಂಪನಿ ತಿಳಿಸಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ನಗರದ ಜನರ ಮನಸ್ಥಿತಿಗೆ ಅನುಗುಣವಾಗಿ ಈ ಬೈಕ್ ಉತ್ಪಾದಿಸಲಾಗಿದ್ದು, ಕ್ರೀಡಾ ಮಾದರಿಯ ಲುಕ್ ಮತ್ತು ಡ್ರ್ಯಾಗ್ ಸ್ಟೈಲ್ ಹ್ಯಾಂಡಲ್ ಬಾರ್ ಹೊಂದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಭಾರತ ದೇಶದ ನಂ.1 ಪ್ರೀಮಿಯಂ ಮೋಟಾರ್ ಸೈಕಲ್ ಬ್ರಾಂಡ್ ಆಗಿರುವ ಹಾರ್ಲೆ ಡೇವಿಡ್ಸನ್, ತನ್ನ ಸ್ಟ್ರೀಟ್ ರಾಡ್ 750 ಅಲ್ಯೂಮಿನಿಯಂ ಫುಟ್ ರೆಸ್ಟ್ ಪಡೆದುಕೊಂಡಿದ್ದು, ಬಾಗಿದ ಬ್ರೇಕ್ ಹಿಡಿ ಹೊಂದಿದೆ. ಸದ್ಯ ತಿಂಗಳಿಗೆ 180 ರಿಂದ 200 ಬೈಕುಗಳನ್ನು ಮಾರುವ ಗುರಿ ಹೊಂದಲಾಗಿದ್ದು, ಈ ಮೂಲಕ ತನ್ನ ಪ್ರತಿಸ್ಪರ್ಧಿಗಳೊಂದಿಗೆ ಸೆಣೆಸಲು ಅಕಾಡಕ್ಕಿಳಿದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಹಾರ್ಲೆ ಡೇವಿಡ್ಸನ್ ಕಂಪನಿ ಬಿಡುಗಡೆ ಮಾಡಿರುವ ಸ್ಟ್ರೀಟ್ ರಾಡ್ 750 ಬೈಕ್ ವಿವಿಡ್ ಬ್ಲಾಕ್, ಚಾರ್ಕೋಲ್ ಡೆನಿಮ್ ಮತ್ತು ಆಲಿವ್ ಗೋಲ್ಡ್ ಎಂಬ ಹೊಚ್ಚ ಹೊಸ ಮೂರು ಬಣ್ಣಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಈ ಹೊಸ ಬೈಕ್, ಕಳೆದ ಮಾದರಿಯಾದ ಸ್ಟ್ರೀಟ್ 750 ಬೈಕಿಗಿಂತ ಹೆಚ್ಚು ಕಡಿಮೆ ರೂ. 80,000 ರಷ್ಟು ಹೆಚ್ಚಿಗೆ ಇರಲಿದ್ದು, ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಬೈಕಿನ ಬೆಲೆ ರೂ. 4.30 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಹಾರ್ಲೆ ಡೇವಿಡ್ಸನ್ ಕಂಪನಿಯ ಎಚ್.ಡಿ 750 ಬೈಕಿಗೆ ಹೋಲಿಸಿದರೆ ಸ್ಟ್ರೀಟ್ ರಾಡ್ 750 ನವೀನ ಆಕಾರದ ಆಸನ ಪಡೆದುಕೊಳ್ಳಲಿದ್ದು ಇದರಿಂದಾಗಿ ಬೈಕಿನ ಮೇಲೆ ಹೆಚ್ಚು ಹಿಡಿತ ಸಾಧಿಸಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಆಕ್ರಮಣಕಾರಿ ಚಾಲನಾ ಅನುಭವ ನೀಡುವ ಸಲುವಾಗಿ ಮಡಿಕೆ ಮಾಡಬಹುದಾದ ಹೊಸ ರಿಯರ್ ವ್ಯೂ ಕನ್ನಡಿಗಳನ್ನು ಬಾರ್ ಕೊನೆಯಲ್ಲಿ ಅಳವಡಿಸಲಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಈ ಬೈಕಿನ ಎಲ್ಲಾ ಮಾದರಿಗಳಲ್ಲಿ ಎಬಿಎಸ್ ಅಳವಡಿಸಲಾಗಿದ್ದು ಇದರಿಂದಾಗಿ ಸವಾರ ತನ್ನ ಎಷ್ಟೇ ವೇಗವಾಗಿ ಬೈಕ್ ಓಡಿಸುತ್ತಿದ್ದರೂ ಸಹ ತನ್ನ ಹತೋಟಿಗೆ ಬೈಕ್ ತೆಗೆದುಕೊಳ್ಳಬಹುದಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಬೈಕಿಗೆ ಎಂ.ಆರ್.ಎಫ್ ಚಕ್ರಗಳನ್ನು ಅಳವಡಿಸಲು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಭಾರತೀಯ ಮೂಲದ ಎಂ.ಆರ್.ಎಫ್ ಕಂಪನಿ ಚಕ್ರಗಳನ್ನು ಒದಗಿಸಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ

ಮಾರ್ಚ್ 15 ರಿಂದಲೇ ಬೈಕನ್ನು ಬುಕ್ ಮಾಡಲು ಕಂಪನಿ ಅನುವು ಮಾಡಿಕೊಟ್ಟಿದ್ದು, ನಿಮಗೆ ಈ ಬೈಕಿನ ಟೆಸ್ಟ್ ಡ್ರೈವ್ ಮಾಡಬೇಕೆಂಬ ಅಸೆ ಇದ್ದರೆ, ಮುಂದಿನ ತಿಂಗಳು ಏಪ್ರಿಲ್ 21ರ ವರೆಗೂ ಕಾಯಲೇಬೇಕು.

ಅತಿ ಹೆಚ್ಚು ಜನರು ವೀಕ್ಷಿಸಿದ ಲೇಖನಗಳು ಈ ಕೆಳಗಿನಂತಿವೆ...

ಇದೇ ವರ್ಷ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ 2017 ಕಾರಿನ ಚಿತ್ರಗಳನ್ನು ವೀಕ್ಷಿಸಿ.

ಬಜಾಜ್ ಡೋಮಿನಾರ್ ಚಿತ್ರಗಳು

ಟಾಟಾ ಹೆಕ್ಸಾ ಚಿತ್ರಗಳನ್ನು ವೀಕ್ಷಿಸಿ

ಮಾರುತಿ ಇಗ್ನಿಸ್ ಚಿತ್ರಗಳು

ಟಾಟಾ ಟಿಗೋರ್ ಚಿತ್ರಗಳು

English summary
Harley-Davidson Street Rod 750 launched in India. The Harley-Davidson Street Rod 750 gets more power and better hardware than the Street 750 and is around Rs. 80,000 expensive than the latter.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್‌ಸ್ಪಾರ್ಕ್‌ನಲ್ಲಿ ಪಡೆದುಕೊಳ್ಳಿ- Kannada DriveSpark