ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್

Written By:

ವಿನೂತನ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ BS-IV ಎಂಜಿನ್ ಸಾಮರ್ಥ್ಯದ ಟಿವಿಎಸ್ ಜೂಪಿಟರ್ ಸ್ಕೂಟರ್ ಬಿಡುಗಡೆಗಡೆಗೊಂಡಿದ್ದು, ಜಡೆ ಗ್ರೀನ್ ಮತ್ತು ಮೈಸ್ಟಿಕ್ ಗೊಲ್ಡ್ ಬಣ್ಣಗಳೊಂದಿಗೆ ಗ್ರಾಹಕರನ್ನು ಸೆಳೆಯುವ ತವಕದಲ್ಲಿವೆ.

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

BS-IV ಎಂಜಿನ್‌ನೊಂದಿಗೆ ಬಿಡುಗಡೆಯಾಗಿರುವ ವಿನೂತನ ಟಿವಿಎಸ್ ಜೂಪಿಟರ್ ಸ್ಕೂಟರ್, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಠಿಸುವ ನೀರಿಕ್ಷೆಯಲ್ಲಿದೆ. ಪ್ರಮುಖ ಎರಡು ಬಣ್ಣಗಳಲ್ಲಿ ಲಭ್ಯವಿರುವ ಜೂಪಿಟರ್ ಸ್ಕೂಟರ್, ಜಡೆ ಗ್ರೀನ್ ಮತ್ತು ಮೈಸ್ಟಿಕ್ ಗೊಲ್ಡ್ ಬಣ್ಣಗಳಲ್ಲಿ ಮಿಂಚುತ್ತಿದೆ.

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

ಹೊಚ್ಚ ಹೊಸ ಮಾದರಿಯಲ್ಲಿ ಸಿದ್ಧಗೊಂಡಿರುವ 2017ರ ಟಿವಿಎಸ್ ಜೂಪಿಟರ್, 110 ಸಿಸಿ ಸಾಮರ್ಥ್ಯದೊಂದಿಗೆ BS-IV ಎಂಜಿನ್ ಹೊಂದಿದೆ. ಜೊತೆಗೆ ಕೇಂದ್ರ ಸರ್ಕಾರ ಎಪ್ರಿಲ್ 1 ರಿಂದ ಜಾರಿ ತರಲಿರುವ AHO(ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆ ಕೂಡಾ ಹೊಂದಿದೆ.

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

ಜಡೆ ಗ್ರೀನ್ ಮತ್ತು ಮೈಸ್ಟಿಕ್ ಗೊಲ್ಡ್ ಬಣ್ಣಗಳಲ್ಲಿ ಮಿಂಚುತ್ತಿರುವ ಟಿವಿಎಸ್ ಜೂಪಿಟರ್, ಕೇವಲ ಬಣ್ಣಗಳಿಂದಷ್ಟೇ ಅಲ್ಲದೇ ಹೊರ ವಿನ್ಯಾಸದಲ್ಲೂ ಸಾಕಷ್ಟು ಗಮನಸೆಳೆಯುತ್ತಿದೆ. ಇದಲ್ಲದೇ ಜೂಪಿಟರ್ ZX ಆವೃತ್ತಿಯಲ್ಲಿ ಸಿಂಕ್ ಬ್ರೇಕಿಂಗ್ ವ್ಯವಸ್ಥೆ (SRS) ಕೂಡಾ ಲಭ್ಯವಿದೆ.

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

ಜೂಪಿಟರ್ ನೂತನ ಆವೃತ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟಿವಿಎಸ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್, "ಸಾಕಷ್ಟು ನೀರಿಕ್ಷೆಯೊಂದಿಗೆ ನಾವು ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಕೈಗೆಟುಕುವ ದರದಲ್ಲಿ ಲಭ್ಯವಿರುವ ಜೂಪಿಟರ್ ಸ್ಕೂಟರ್ ಗ್ರಾಹಕರನ್ನು ಸೆಳೆಯುವ ವಿಶ್ವಾಸವಿದೆ" ಎಂದಿದ್ದಾರೆ.

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

ಸದ್ಯಕ್ಕೆ ಎರಡು ಬಣ್ಣಗಳಲ್ಲಿ ಮಾತ್ರ ಲಭ್ಯವಿರುವ ನೂತನ ಟಿವಿಎಸ್ ಜೂಪಿಟರ್ ಸ್ಕೂಟರ್, ಕೆಲ ದಿನಗಳ ನಂತರ 10 ಬಣ್ಣಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಜೂಪಿಟರ್ ಸ್ಕೂಟರ್ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

BS-IV ಎಂಜಿನ್ ಹೊಂದಿರುವ ಟಿವಿಎಸ್ ಜೂಪಿಟರ್ ಸ್ಕೂಟರ್ ಪರಿಸರ ಸ್ನೇಹಿ ವಿನ್ಯಾಸಗಳನ್ನು ಕೂಡಾ ಹೊಂದಿದೆ. ಕೆಲ ಮಾದರಿಗಳು 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8ಬಿಎಚ್‌ಪಿ ಮತ್ತು 8ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. ಇದಲ್ಲದೇ ಆಟೋಮೆಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದ್ದು, ಎಕೋ ಮೂಡ್ ಮತ್ತು ಪವರ್ ಮೂಡ್ ಬದಲಾವಣೆಗೆ ಅವಕಾಶವಿದೆ.

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

ಹತ್ತು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಟಿವಿಎಸ್ ಜೂಪಿಟರ್ ಸ್ಕೂಟರ್ ಬೆಲೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆ ರೂ.49,666 ಗಳಿದ್ದು, ಟಾಪ್ ಟ್ರಿಮ್ ಹಾಗೂ ಡಿಸ್ಕ್ ಬ್ರೇಕ್ ಹೊಂದಿರುವ ಮಾದರಿಗಳು ರೂ.53,666ಕ್ಕೆ ಲಭ್ಯವಿರಲಿವೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ:

ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್..!!

ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್‌ನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

ಇದೇ ವರ್ಷ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ 2017 ಕಾರಿನ ಚಿತ್ರಗಳನ್ನು ವೀಕ್ಷಿಸಿ.

Read more on ಟಿವಿಎಸ್ tvs
English summary
The TVS Jupiter is now available in two new colours - Jade Green and Mystic Gold along with BS-IV compliant engine and AHO.
Please Wait while comments are loading...

Latest Photos