ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೊ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

Written By:

ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆ ಹೀರೊ ಮೊಟೊಕಾರ್ಪ್ ಬಿಎಸ್-IV ಎಂಜಿನ್ ಮತ್ತು ಫ್ಯುಯೆಲ್ ಇಂಜೆಕ್ಷನ್(ಎಫ್ಐ) ತಂತ್ರಜ್ಞಾನ ಪಡೆದಿರುವ ಗ್ಲಾಮರ್ 2017 ಬೈಕ್ ಅನಾವರಣಗೊಳಿಸಿದೆ.

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಹೊರ ಕಂಪನಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಮೊತ್ತ ಮೊದಲ ಬಾರಿಗೆ ಪ್ರತಿಯೊಂದು ಬಿಡಿಭಾಗವನ್ನು ತಾನೇ ಸ್ವತಃ ಅಭಿವೃದ್ಧಿಪಡಿಸಿ ನಿರ್ಮಿಸಿದ ಮೊದಲ ಬೈಕ್ ಎಂಬ ಖ್ಯಾತಿಗೆ ಗ್ಲಾಮರ್ ಬೈಕ್ ಪಾತ್ರವಾಗಿದೆ. ಈ ಹಿಂದೆ ಹೋಂಡಾ ಕಂಪನಿಯೊಂದಿಗೆ ಹೊಂದಾಣಿಕೆಯನ್ನು ಹೀರೊ ಮೊಟೊಕಾರ್ಪ್ ಮಾಡಿಕೊಂಡಿತ್ತು.

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಆಟೋ ಹೆಡ್ ಲ್ಯಾಂಪ್ ಮತ್ತು ಬಿಎಸ್-4 ಎಂಜಿನ್ ಹೊಂದಿರುವ ಈ ಬೈಕ್ ನಾಲ್ಕು ಸ್ಪೀಡ್ ಹೊಂದಿರುವ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಈ ಬೈಕಿನ ಮುಂಭಾಗ ಸ್ನಾಯುವಿನ ಶೈಲಿಯನ್ನು ಪಡೆದುಕೊಂಡಿದ್ದು, ಯುವ ಸಮೂಹ ಸೆಳೆಯುವ ಗ್ರಾಫಿಕ್ಸ್ ಹೊಂದಿರುವ ಸ್ಟಿಕರ್ ನೀಡಲಾಗಿದೆ.

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಇನ್ನು ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಹೊಂದಿರುವ ಬೈಕುಗಳಲ್ಲಿ ಎಂದಿನಂತೆ ಆಧುನಿಕಗೊಳಿಸಲಾಗಿರುವ ಕಾರ್ಬ್ಯುರೇಟರ್ ಇರಿಸಲಾಗಿದ್ದು, ಮತ್ತೊಂದು ಎಫ್ಐ ಮಾದರಿಯಲ್ಲಿ ಕಾರ್ಬ್ಯುರೇಟರ್ ಬದಲು ಎಲೆಕ್ಟ್ರಿಕ್ ಫ್ಯುಯೆಲ್ ಇಂಜಕ್ಷನ್ ತಂತ್ರಜ್ಞಾನ ನೀಡಲಾಗಿದೆ.

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಈ ಹೊಚ್ಚ ಹೊಸ ಗ್ಲಾಮರ್ 2017 ಡ್ರಮ್ ಬೆಲೆ ರೂ. 57,775 ನಿಗದಿಪಡಿಸಲಾಗಿದ್ದು, ಡಿಸ್ಕ್ ಬ್ರೇಕ್ ಗ್ಲಾಮರ್ ಬೈಕಿನ ಬೆಲೆ ರೂ. 59.755 ನಿಗದಿಪಡಿಸಲಾಗಿದೆ (ಎಕ್ಸ್ ಷೋ ರೂಂ ದೆಹಲಿ).

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಇನ್ನು ಗ್ಲಾಮರ್ 2017 ಬೈಕ್ ಹೊಸ ತಂತ್ರಜ್ಞಾನ ಪಡೆದುಕೊಂಡಿದ್ದು, ಎಫ್ಐ ಮಾದರಿಯ ಬೈಕಿನ ಬೆಲೆ ತುಸು ಹೆಚ್ಚಿಗೆ ಇದ್ದು, ರೂ. 66,580 ನಿಗದಿಪಡಿಸಲಾಗಿದೆ (ಎಕ್ಸ್ ಷೋ ರೂಂ ದೆಹಲಿ).

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಈ ಹೊಚ್ಚ ಹೊಸ ಗ್ಲಾಮರ್ ಬೈಕ್ ಭಾರತ ಸರ್ಕಾರದ ಆದೇಶದಂತೆ ಆಟೋ ಹೆಡ್ ಲ್ಯಾಂಪ್ ಪಡೆದುಕೊಂಡಿದ್ದು, ವೇಗಸೂಚಕ ಮಾಪನ ಹೆಚ್ಚಿನ ಮಟ್ಟದ ಡಿಜಿಟಲೀಕರಣ ಹೊಂದಿದ್ದು, ಸ್ವಲ್ಪ ಭಾಗ ಅನಲಾಗ್ ಹೊಂದಿರಲಿದೆ.

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಎಂಜಿನ್ ವಿಷಯಕ್ಕೆ ಸಂಬಂಧಿಸಿದಂತೆ, ಈ ಹೊಸ ಹೀರೊ ಗ್ಲಾಮರ್ ಬೈಕು 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 11 ಏನ್ಎಂ ತಿರುಗುಬಲದಲ್ಲಿ 11.5 ಅಶ್ವಶಕ್ತಿ ಉತ್ಪಾದಿಸಲಿದೆ.

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೋ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ಈ ಗ್ಲಾಮರ್ 2017 ಬೈಕ್ ತನ್ನ ಸಮಾನ ಪ್ರತಿಸ್ಪರ್ದಿಗಳಾದ ಹೋಂಡಾ ಕಂಪನಿಯ ಸಿಬಿ ಶೈನ್, ಟಿವಿಎಸ್ ಫೀನಿಕ್ಸ್ ಮತ್ತು ಯಮಹ ಸಲುಟೊ ಬೈಕುಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸೆಣೆಸಲಿದೆ.

English summary
Read in Kannada about Hero MotoCorp Glamour 2017 with BS-IV engine and FI technology bike Launched in India. Get more details about new Glamour 2017 price, mileage, specifications and more.
Please Wait while comments are loading...

Latest Photos