ಬಿಎಸ್-4 ಎಂಜಿನ್ ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಐ ಬಿಡುಗಡೆ

Written By:

ಭಾರತೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹೊಚ್ಚ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿರುವ ಹೋಂಡಾ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ಹೊಂದಿರುವ ಆಕ್ಟಿವಾ ಐ ಸ್ಕೂಟರ್ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಸ್ಕೂಟರ್ ಬೆಲೆ ರೂ.47,913ಕ್ಕೆ ಲಭ್ಯವಿದೆ.

To Follow DriveSpark On Facebook, Click The Like Button
ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಬೇಡಿಕೆಯಲ್ಲಿರುವ ಬಿಎಸ್-4 ಎಂಜಿನ್ ಆಧರಿತ ವಾಹನಗಳು ಚಾಲ್ತಿಯಲ್ಲಿದ್ದು, ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹೋಂಡಾ ಸಂಸ್ಥೆಯು ವಿನೂತನ ಆಕ್ಟಿವಾ ಐ ಮಾದರಿಯನ್ನು ಪರಿಚಯಿಸಿದೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ಹೊಸ ಮಾದರಿ ಆಕ್ಟಿವಾ ಐ ಸ್ಕೂಟರ್‌ನಲ್ಲಿ ಬಿಎಸ್-4 ಹಾಗೂ ಎಎಚ್ಒ( ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಯಿದ್ದು, ಬೆಲೆಗಳು ಕೂಡಾ ಕೈಗೆಟುಕುವಂತಿವೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಸದ್ಯ ಪ್ರಥಮ ಸ್ಥಾನದಲ್ಲಿರುವ ಹೋಂಡಾ ಆಕ್ಟಿವಾ ಸ್ಕೂಟರ್, ಐ ಆವೃತ್ತಿ ಮೂಲಕ ಮತ್ತೊಮ್ಮೆ ಗ್ರಾಹಕರನ್ನು ಸೆಳೆಯಲು ಸಜ್ಜುಗೊಂಡಿದೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ಹೊಸ ಮಾದರಿ ಆಕ್ಟಿವ್ ಐ ಸ್ಕೂಟರ್‌ಗಳಲ್ಲಿ ಡ್ಯುಯಲ್ ಟೋನ್ ಕಲರ್ ಕಾಂಬಿನೇಷನ್ ಇದ್ದು, ಹೊರ ವಿನ್ಯಾಸಗಳು ಸ್ಕೂಟರ್ ಪ್ರಿಯರಿಗೆ ಹೊಸ ಅನುಭುತಿ ನೀಡಲಿವೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ಸುಪ್ರೀಂಕೋರ್ಟ್ ಆದೇಶದಂತೆ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಯಾಗಿರುವ ಬಿಎಸ್-4 ಮತ್ತು ಎಎಚ್ಓ ವ್ಯವಸ್ಥೆಗಳಿದ್ದು, ಖರೀದಿಗೆ ಅತ್ಯುತ್ತಮ ವಾಹನವಾಗಿದೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ಹೊರ ವಿನ್ಯಾಸ ಮತ್ತು ಸ್ಕೂಟರ್ ತೂಕದಲ್ಲಿ ಭಾರೀ ಬದಲಾವಣೆ ತರಲಾಗಿದ್ದು, ಹಿಂದಿನ ಮಾದರಿಗಿಂತ ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

110ಸಿಸಿ ಸಾಮರ್ಥ್ಯದ ಹೆಚ್‌ಇಟಿ ಎಂಜಿನ್ ಹೊಂದಿರುವ ಆಕ್ಟಿವಾ ಐ ಸ್ಕೂಟರ್, 8ಬಿಎಚ್‌ಪಿ ಮತ್ತು 8.74ಎಂಎನ್ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಹೀಗಾಗಿ ಉತ್ತಮ ಮೈಲೇಜ್ ಸಿಗಲಿದೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ಡ್ಯುಯಲ್ ಟೋನ್ ಕಲರ್ ಕಾಂಬಿನೇಷನ್ ಹೊಂದಿರುವ ಹೊಸ ಆಕ್ಟಿವ್ ಐ ಸ್ಕೂಟರ್, ಒಟ್ಟು 5 ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಎಸ್-4 ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಬಿಡುಗಡೆ

ಆರ್ಚಿಡ್ ಪರ್ಪಲ್ ಮೆಟಾಲಿಕ್, ಲಶ್ ಮ್ಯಾಗ್ನೆಟಾ ಮೆಟಾಲಿಕ್, ನಿಯೋ ಆರೇಂಜ್ ಮೆಟಾಲಿಕ್, ಬ್ಲ್ಯಾಕ್ ಮತ್ತು ಇಂಪೀರಿಲ್ ರೆಡ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರಿಗೆ ಮತ್ತೊಮ್ಮೆ ಮೋಡಿ ಮಾಡಲಿದೆ.

Read more on ಹೋಂಡಾ honda
English summary
Honda Activa i with BS-IV engine launched in India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark