ಝಡ್900 ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಕವಾಸಕಿ

Written By:

ಸದ್ಯ ಸೂಪರ್ ಬೈಕ್ ವಿಭಾಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಝಡ್900 ಆವೃತ್ತಿಯನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಲಾಗಿದ್ದು, ಬೈಕ್ ಎಂಜಿನ್ ಸೇರಿದಂತೆ ಹೊಸ ಬಣ್ಣದ ಆಯ್ಕೆಯ ಮಾಹಿತಿಗಳು ಇಲ್ಲಿವೆ ನೋಡಿ.

To Follow DriveSpark On Facebook, Click The Like Button
ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್‌ನಲ್ಲಿ ಲಭ್ಯ ಕವಾಸಕಿ ಝಡ್900

ಈ ಹಿಂದೆ ಜೂನ್ ಆರಂಭದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶ ಪಡೆದಿದ್ದ ಝಡ್900 ಬೈಕ್ ಮಾದರಿಯೂ ಹಲವು ವಿಶೇಷತೆಗಳಿಂದಾಗಿ ಸೂಪರ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಹಿನ್ನೆಲೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಎಡಿಷನ್ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ.

ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್‌ನಲ್ಲಿ ಲಭ್ಯ ಕವಾಸಕಿ ಝಡ್900

ಹೊಸ ಬಣ್ಣದ ಆಯ್ಕೆಯಿಂದಾಗಿ ಈ ಹಿಂದಿನ ಆವೃತ್ತಿಗಳಿಂತಲೂ ಝಡ್900 ಸಾಕಷ್ಟು ಆಕರ್ಷಣೆಗೆ ಕಾರಣವಾಗಿದ್ದು, ಬೈಕ್ ರೇಸ್ ಪ್ರಿಯರಿಗೆ ಇಷ್ಟುವಾಗುವ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣದೊಂದಿಗೆ ಪೂರ್ಣ ಪ್ರಮಾಣದ ಹೊಸತನ ನೀಡಲಾಗಿದೆ.

Recommended Video
Benelli TNT 300 ABS Now Avaliable In India - DriveSpark
ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್‌ನಲ್ಲಿ ಲಭ್ಯ ಕವಾಸಕಿ ಝಡ್900

ಹೀಗಾಗಿಯೇ ಹೊಸ ಬಣ್ಣ ಆಯ್ಕೆ ನೀಡಿರುವ ಹಿನ್ನೆಲೆ ಝಡ್900 ಬೆಲೆಗಳನ್ನು ಪರಿಷ್ಕರಣೆ ಮಾಡಿರುವ ಕವಾಸಕಿ ಸಂಸ್ಥೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.68 ಲಕ್ಷಕ್ಕೆ ನಿಗದಿಗೊಳಿಸಲಾಗಿದ್ದು, ಕೆಲವು ಅನಗತ್ಯ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್‌ನಲ್ಲಿ ಲಭ್ಯ ಕವಾಸಕಿ ಝಡ್900

ಎಂಜಿನ್ ಸಾಮರ್ಥ್ಯ

948ಸಿಸಿ ಎಂಜಿನ್ ಹೊಂದಿರುವ ಝಡ್900 ಬೈಕ್ ಆವೃತ್ತಿಯು 123-ಬಿಎಚ್‌ಪಿ ಮತ್ತು 98.6-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಹಲವು ಸುರಕ್ಷಾ ಕ್ರಮಗಳನ್ನು ಒದಗಿಸಲಾಗಿದೆ.

ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್‌ನಲ್ಲಿ ಲಭ್ಯ ಕವಾಸಕಿ ಝಡ್900

ಇನ್ನು ಈ ಹಿಂದಿನ ಝಡ್800 ಮಾದರಿಯನ್ನು ಮಾರುಕಟ್ಟೆಯಿಂದ ವಾಪಸ್ ಪಡೆದಿದ್ದ ಕವಾಸಕಿ ಸಂಸ್ಥೆಯು ಭಾರತೀಯ ಗ್ರಾಹಕರ ಬೇಡಿಕೆ ಮೇರೆಗೆ ಝಡ್900 ಆವೃತ್ತಿಯನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಹೊಸ ಬಣ್ಣದ ಆಯ್ಕೆ ಮತ್ತಷ್ಟು ಜನಪ್ರಿಯತೆಗೆ ಕಾರಣವಾಗಲಿದೆ.

ಫ್ಯೂರ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್‌ನಲ್ಲಿ ಲಭ್ಯ ಕವಾಸಕಿ ಝಡ್900

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಝಡ್900 ಬೈಕ್ ಸದ್ಯ ಸೂಪರ್ ಬೈಕ್ ಮಾರುಕಟ್ಟೆ ತನ್ನದೇ ಆದ ಬೇಡಿಕೆ ಹೊಂದಿದ್ದು, ಈ ಹಿಂದಿನ ಹಸಿರು ಬಣ್ಣದ ಹೊರತಾಗಿ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಎಡಿಷನ್ ಪರಿಚಯಿಸಿರುವುದು ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Kawasaki Z900 Pure Metallic Spark Black Colour Introduced In India.
Story first published: Tuesday, October 3, 2017, 11:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark