ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿವೆ ಜನಪ್ರಿಯ ಯಜ್ದಿ ಮೋಟಾರ್‌ಸೈಕಲ್‌ಗಳು..!

Written By:

1980-90ರ ದಶಕದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡು ಇತ್ತೀಚೆಗೆ ಉತ್ಪಾದನೆ ಸ್ಥಗಿತಗೊಂಡಿದ್ದ ಜಾವಾ ಎಜ್ಡಿ ಮೋಟಾರ್‌ಸೈಕಲ್‌ಗಳು ಹೊಸ ರೂಪದೊಂದಿಗೆ ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

To Follow DriveSpark On Facebook, Click The Like Button
ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿದೆ ಜನಪ್ರಿಯ ಎಜ್ಡಿ ಬೈಕ್

1978ರಲ್ಲಿ ಮೈಸೂರು ಮೂಲದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಐಡಿಯಲ್ ಜಾವಾ ಸಂಸ್ಥೆಯಿಂದ ನಿರ್ಮಾಣಗೊಂಡಿದ್ದ ಯಜ್ದಿ ಮೋಟಾರ್ ಸೈಕಲ್ ಮಾದರಿಗಳು 1996ರಲ್ಲಿ ಕಾರಣಾಂತರಗಳಿಂದ ಉತ್ಪಾದನೆ ನಿಂತುಹೊಗಿತ್ತು. ಆದ್ರೆ ಯಜ್ದಿ ರೋಡ್‌ಕಿಂಗ್ ಬೈಕ್‌ಗಳ ಜನಪ್ರಿಯತೆ ಮಾತ್ರ ಇದುವರೆಗೂ ಕಡಿಮೆಯಾಗಿಲ್ಲ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿದೆ ಜನಪ್ರಿಯ ಎಜ್ಡಿ ಬೈಕ್

ಈ ಹಿನ್ನೆಲೆ ಐಡಿಯಲ್ ಜಾವಾ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದಿರುವ ದೇಶದ ಪ್ರತಿಷ್ಠಿತ ಮಹಿಂದ್ರಾ ಸಂಸ್ಥೆಯು, ಪ್ರಸ್ತುತ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ತಂತ್ರಜ್ಞಾನಗಳೊಂದಿಗೆ ಯಜ್ದಿ ಬೈಕ್‌ಗಳ ಉತ್ಪಾದನೆಯನ್ನು ಪುನಾರಂಭ ಮಾಡಲಿದೆ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿದೆ ಜನಪ್ರಿಯ ಎಜ್ಡಿ ಬೈಕ್

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯ ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಚಿಕೊಂಡಿದ್ದು, ಹೊಸ ತಂತ್ರಜ್ಞಾನಗಳೊಂದಿಗೆ ಶೀಘ್ರದಲ್ಲೇ ಯಜ್ದಿ ಬೈಕ್ಗ್ರಾಹಕರ ಕೈ ಸೇರಲಿವೆ ಎಂದಿದೆ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿದೆ ಜನಪ್ರಿಯ ಎಜ್ಡಿ ಬೈಕ್

ಆದ್ರೆ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡದ ಮಹೀಂದ್ರಾ, 350 ಸಿಸಿ ಸಾಮರ್ಥ್ಯದ ಎಂಜಿನ್‌ಗಳೊಂದಿಗೆ ಗ್ರಾಹಕರಿಗ ಬೇಡಿಕೆ ತಕ್ಕಂತೆ ವಿವಿಧ ಯಜ್ದಿ ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿದೆ ಜನಪ್ರಿಯ ಎಜ್ಡಿ ಬೈಕ್

ಯಜ್ದಿ ಕ್ಲಾಸಿಕ್, ಯಜ್ದಿ ಕ್ಲಾಸ್ 2, ಯಜ್ದಿ ಡಿಲಕ್ಸ್, ಯಜ್ದಿ ಮೋನಾರ್ಚ್ ಮತ್ತು ಯಜ್ದಿ 175 ಉತ್ಪಾದನೆ ಮಾಡಲಿರುವ ಮಹೀಂದ್ರಾ ಸಂಸ್ಥೆಯು 2018ರ ಆಟೋ ಎಕ್ಸ್‌ ಪೋದಲ್ಲಿ ಪ್ರದರ್ಶನ ಮಾಡುವ ಬಗ್ಗೆ ಯೋಜನೆ ರೂಪಿಸಿದೆ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿದೆ ಜನಪ್ರಿಯ ಎಜ್ಡಿ ಬೈಕ್

ತದನಂತರವಷ್ಟೇ ಯಜ್ದಿ ಕ್ಲಾಸಿಕ್ ಬೈಕ್‌‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಚ್ಚ ಹೊಸ ಬೈಕ್‌ಗಳ ಅಭಿವೃದ್ಧಿ ಕಾರ್ಯವನ್ನು ಮಹೀಂದ್ರಾ ಮೋಟಾರ್ಸ್ ಸಂಸ್ಥೆಯು ಈಗಾಗಲೇ ತ್ವರಿತಗೊಳಿಸಿದೆ. ಆದ್ರೆ ಹೊಸ ಬೈಕ್‌ಗಳ ಬೆಲೆಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಮರಳಿಬರಲಿದೆ ಜನಪ್ರಿಯ ಎಜ್ಡಿ ಬೈಕ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶದಲ್ಲಿ ಕ್ಲಾಸಿಕ್ ಮೋಟಾರ್‌‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್‌ಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಯಜ್ದಿ ಬೈಕ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, 2018ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಖರೀದಿಗೆ ಲಭ್ಯವಿರಲಿವೆ.

English summary
Read in Kannada about Mahindha Launches New Yezdi Bikes With Current Modification Soon.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark