ಯುರೋ 4 ವೈಶಿಷ್ಟ್ಯತೆಗಳನ್ನು ಪಡೆದುಕೊಂಡ 2018ರ ಎಂವಿ ಅಗಸ್ಟಾ

Written By:

ಇಟಾಲಿಯನ್ ಐಕಾನಿಕ್ ಸೂಪರ್ ಬೈಕ್ ಉತ್ಪಾದನೆ ಮಾಡುವ ಎಂವಿ ಅಗಸ್ಟಾ ತನ್ನ ಎಲ್ಲ ಬೈಕ್ ಮಾದರಿಗಳನ್ನು ಯುರೋ 4 ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದ್ದು, ತಾಂತ್ರಿಕ ಅಂಶಗಳಲ್ಲೂ ಕೂಡಾ ಬದಲಾವಣೆ ತರಲಾಗಿದೆ.

ಯುರೋ 4 ವೈಶಿಷ್ಟ್ಯತೆಗಳನ್ನು ಪಡೆದುಕೊಂಡ 2018ರ ಎಂವಿ ಅಗಸ್ಟಾ

2018ರ ಎಲ್ಲಾ ಸೂಪರ್ ಬೈಕ್ ಆವೃತ್ತಿಗಳನ್ನು ಯುರೋ 4 ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಮಾಡಲಾಗಿದ್ದು, ಯುರೋ 3 ಮಾದರಿಗಳಿಂತದ ಶೇ.42ರಷ್ಟು ಶಬ್ದ ಉತ್ಪತ್ತಿಯನ್ನು ನಿಯಂತ್ರಣ ಮಾಡಿರುವುದು ಮತ್ತೊಂದು ವಿಶೇಷ.

ಯುರೋ 4 ವೈಶಿಷ್ಟ್ಯತೆಗಳನ್ನು ಪಡೆದುಕೊಂಡ 2018ರ ಎಂವಿ ಅಗಸ್ಟಾ

ಇದಲ್ಲದೇ ಯುರೋ 4 ತಾಂತ್ರಿಕ ವಿನ್ಯಾಸಗಳಿಂದಾಗಿ ಹಿಂದಿನ ಮಾದರಿಗಳಿಂತ ಶೇ.50 ವಾಯು ಮಾಲಿನ್ಯ ಹೊರಸೂಸುವಿಕೆ ಮೇಲೆ ನಿಯಂತ್ರಣ ಸಾಧಿಸಲಾಗಿದ್ದು, ಪರಿಸರ ಸ್ನೇಹಿ ಅಂಶಗಳನ್ನು ಸೇರಿಸಲಾಗಿದೆ.

ಯುರೋ 4 ವೈಶಿಷ್ಟ್ಯತೆಗಳನ್ನು ಪಡೆದುಕೊಂಡ 2018ರ ಎಂವಿ ಅಗಸ್ಟಾ

ಸದ್ಯ ಎಂವಿ ಅಗಸ್ಟಾ ಸೂಪರ್ ಬೈಕ್‌ಗಳಾದ ಎಫ್3 675, ಎಫ್3 800 ಮತ್ತು ಡ್ರ್ಯಾಸ್ಟರ್ 800 ಆರ್‌ಆರ್ ಆವೃತ್ತಿಗಳು ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಎಫ್3 800, ಎಫ್3 800 ಆರ್‌ಸಿ ಬೈಕ್‌ಗಳು ಮಾತ್ರ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿವೆ.

ಯುರೋ 4 ವೈಶಿಷ್ಟ್ಯತೆಗಳನ್ನು ಪಡೆದುಕೊಂಡ 2018ರ ಎಂವಿ ಅಗಸ್ಟಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೊಂದಿರುವ ಎಂವಿ ಅಗಸ್ಟಾ ಎಫ್300 ಆವೃತ್ತಿಯು ಕೂಡಾ ಯುರೋ 4 ಜೊತೆ ಅಭಿವೃದ್ಧಿ ಹೊಂದಿದ್ದು, 798ಸಿಸಿ ಇನ್‌ಲೈನ್ ತ್ರಿ ಸಿಲಿಂಡರ್ ಎಂಜಿನ್‌ನೊಂದಿಗೆ 144-ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಯುರೋ 4 ವೈಶಿಷ್ಟ್ಯತೆಗಳನ್ನು ಪಡೆದುಕೊಂಡ 2018ರ ಎಂವಿ ಅಗಸ್ಟಾ

ಇದರ ಜೊತೆ ಎಂವಿ ಅಗಸ್ಟಾ ಉನ್ನತ ಬೈಕ್ ಮಾದರಿಗಳಲ್ಲಿ ರೈಡ್ ಬೈ ವೈರ್ ತಂತ್ರಜ್ಞಾನವನ್ನು ಕೂಡಾ ಅಳವಡಿಸಲಾಗಿದ್ದು, ಎಕ್ಸಾಸ್ಟ್, ಗೇರ್ ಶಿಫ್ಟ್, ರೀವೈಸ್ಡ್ ಕ್ಲಚ್ ವಿಭಾಗಗಳಲ್ಲಿ ಭಾರೀ ಬದಲಾವಣೆ ತಂದಿರುವುದು ಹೊಸ ಬೈಕ್‌ಗಳನ್ನು ಅಂದವನ್ನು ಹೆಚ್ಚಿಸಿವೆ.

ಯುರೋ 4 ವೈಶಿಷ್ಟ್ಯತೆಗಳನ್ನು ಪಡೆದುಕೊಂಡ 2018ರ ಎಂವಿ ಅಗಸ್ಟಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಜಾರಿಯಿರುವ ಬಿಎಸ್ 4 ಮಾರ್ಗಸೂಚಿಯಂತೆ ಯುರೋಪ್ ರಾಷ್ಟ್ರಗಳಲ್ಲಿ ಕೂಡಾ ಯುರೋ 4 ನಿಯಮ ಕಡ್ಡಾಯ ಮಾಡಲಾಗಿದ್ದು, ಈ ಹಿನ್ನೆಲೆ ಪರಿಸರ ಸ್ನೇಹಿ ತಂತ್ರಜ್ಞಾನ ವ್ಯವಸ್ಥೆಯನ್ನು ಎಂವಿ ಅಗಸ್ಟಾ ಸಂಸ್ಥೆಯು ತನ್ನ ಉತ್ಪನ್ನಗಳಲ್ಲಿ ಒದಗಿಸುತ್ತಿದೆ.

English summary
Read in Kannada about MV Agusta Reveals Updates For The 2018 Models.
Story first published: Thursday, August 17, 2017, 14:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark