ಆರಾಮಾಗಿ ನಿಂತಿದ್ದ ರಾಯಲ್ ಎನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ !!

Written By:

ಅದೇನೋ ಗೊತ್ತಿಲ್ಲ, ಇತ್ತೀಚಿಗೆ ಭಾರತದ ರಸ್ತೆಗಳ ಮೇಲೆ ಧಡ್ ಧಡ್ ಸಡ್ಡು ಹೆಚ್ಚಾಗುತ್ತಿದೆ, ಯುವ ಜನತೆಯ ನೆಚ್ಚಿನ ಬೈಕ್ ಎನ್ನಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಮತ್ತು ಕೆಟಿಎಂ ಬೈಕುಗಳು ರಸ್ತೆಗಳನ್ನು ಆಳುತ್ತಿವೆ ಎನ್ನಬಹುದು.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ಆದ್ರೆ, ಇತ್ತೀಚಿನ ಘಟನೆಯೊಂದು ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಖಂಡಿತ ಕೊಂಚ ಮಟ್ಟಿನ ಭಯ ಹುಟ್ಟಿಸದೆ ಇರಲಾರದು. ಹೌದು, ಈ ವಿಚಾರದ ಬಗ್ಗೆ ರಾಯಲ್ ಎನ್‌ಫೀಲ್ಡ್ ಬೈಕಿನ ಮಾಲೀಕ ಸುಮಿತ್ ಮಂತ್ರಿ ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ಸುಮಿತ್ ಮಂತ್ರಿ ಗುಹಾಹಾಟಿಯಲ್ಲಿ ವಾಸಿಸುತ್ತಿದ್ದು, ಎಲ್ಲರಂತೆ ರಾಯಲ್ ಎನ್‌ಫೀಲ್ಡ್ ಬೈಕನ್ನು ಕೊಳ್ಳಬೇಕು ಎಂದು ಕನಸು ಕಂಡಿದ್ದವರು. ಕೊನೆಗೆ ಸುಮಿತ್ ಈ ಬೈಕನ್ನು ಇತ್ತೀಚಿಗೆ ತಮ್ಮದಾಗಿಸಿಕೊಂಡಿದ್ದರು.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ಆದರೆ, ಅದೇನಾಯಿತೋ ಏನೋ ಸುಮಿತ್ ಕೊಂಡ ಕ್ಲಾಸಿಕ್ 350 ಬೈಕು ಇದ್ದಕ್ಕಿದಂತೆ ಅವರ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ವೇಳೆ ಬೆಂಕಿಗೆ ಆಹುತಿಯಾಗಿದ್ದು, ಸುಟ್ಟು ಕರಕಲಾಗಿದೆ.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ಚಿತ್ರದಲ್ಲಿ ಗಮನಿಸಿದಂತೆ ಕ್ಲಾಸಿಕ್ 350 ಬೈಕ್ ಸಂಪೂರ್ಣವಾಗಿ ಸುಟ್ಟಿದ್ದು, ಈ ಮೋಟಾರ್ ಸೈಕಲ್ ಕೇವಲ ಮೂರು ತಿಂಗಳ ಹಿಂದೆ ಕೊಳ್ಳಲಾಗಿತ್ತು ಎಂದು ಮಾಲೀಕರು ತಿಳಿಸಿದ್ದಾರೆ. ಜೂನ್ 9 ರಂದು ಮಾಲೀಕ ನಾಲ್ಕು ಕಿ.ಮೀ ಮಾತ್ರ ಕ್ರಮಿಸಿದ ನಂತರ ತಂದು ಗ್ಯಾರೇಜ್‌ನಲ್ಲಿ ಪಾರ್ಕ್ ಮಾಡಿದ್ದರು ಎನ್ನಲಾಗಿದೆ.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ಜೂನ್ 9 ರಂದೇ ಈ ದುರ್ಘಟನೆ ನೆಡೆದಿದೆ ಮತ್ತು ಈ ವಿಚಾರವನ್ನು ಸುಮಿತ್ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಹೆಚ್ಚು ಜನ ಈ ವಿಚಾರವನ್ನು ಶೇರ್ ಮಾಡಿದ್ದಾರೆ.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ಕೆಲವು ನಿಮಿಷಗಳ ನಂತರ, ಮಾಲೀಕತನ್ನ ಅಚ್ಚುಮೆಚ್ಚಿನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಬೆಂಕಿ ಬಿದ್ದಿರುವುದು ತಿಳಿದು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೈಕ್ ಸ್ಥಿತಿಯನ್ನು ಕಂಡು ಆಘಾತಕ್ಕೊಳಗಾದ ತಕ್ಷಣ ಷೋ ರೂಂಗೆ ಈ ವಿಚಾರ ಮುಟ್ಟಿಸಿದ್ದಾರೆ.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ಆದರೆ ಚಾಲನಾ ಸ್ಥಿತಿಯಲ್ಲಿ ಬೆಂಕಿ ಹತ್ತಿಕೊಂಡಿದ್ದರೆ ಮಾತ್ರ 'ಉತ್ಪಾದನೆ ವೈಫಲ್ಯ' ಎಂದು ಪರಿಗಣಿಸಲಾಗುತ್ತದೆ ಮತ್ತು ಈ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲವಾದ ಕಾರಣ ವಿಮ ಸಂಸ್ಥೆಯನ್ನು ಸಂಪರ್ಕ ಮಾಡಿ ಎಂದು ತಮ್ಮ ಜವಾಬ್ದಾರಿಯಿಂದ ರಾಯಲ್ ಎನ್‌ಫೀಲ್ಡ್ ನುಣುಚಿಕೊಂಡಿದೆ.

ಆರಾಮಾಗಿ ನಿಂತಿದ್ದ ರಾಯಲ್ ಏನ್‌ಫೀಲ್ಡ್‌ಗೆ ಯಾವ್ ಸ್ಥಿತಿ ಬಂತು ನೋಡಿ

ನನ್ನ ಊಹೆ...

ಸಾಮಾನ್ಯವಾಗಿ ಬೈಕು ಅತ್ವ ಕಾರುಗಳಲ್ಲಿ ಇರುವಂತಹ ಎಲೆಕ್ಟ್ರಿಕ್ ಪ್ರಸರಣೆ ಕೈಕೊಟ್ಟಾಗ ಈ ರೀತಿಯ ಅವಘಡಗಳು ಸಂಭವಿಸಲಿದೆ. ಇದು ಉತ್ಪಾದನಾ ನ್ಯೂನತೆಯಾಗಿರಲಿ ಅಥವಾ ಆಗಿರದೆ ಇರಲಿ, ಸಮಸ್ಯೆಯ ಬಗ್ಗೆ ಕಂಪನಿ ಅಥವಾ ವಿತರಕರು ಗಮನಹರಿಸಿ ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದನ್ನು ಕಂಡುಕೊಳ್ಳಬೇಕು.

English summary
Sumit Mantri claims that his Royal Enfield Classic 350 was burnt to ashes when it was parked in his garage, parked! The particular incident happened in Gauhati.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark