Subscribe to DriveSpark

ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ 2017ರ ಮಹೀಂದ್ರಾ ಮೊಜೊ ಬೈಕ್

Written By:

ಹೊಸ ವಿನ್ಯಾಸಗಳನ್ನ ಹೊಂದಿರುವ ಮಹೀಂದ್ರಾ 2017ರ ಮೊಜೊ ಬೈಕ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ಬೈಕ್ ವಿನ್ಯಾಸಗಳು ಬಹಿರಂಗಗೊಂಡಿವೆ.

ಹಿಂದಿನ ಮಾದರಿಗಿಂತಲೂ ಹೆಚ್ಚು ಬದಲಾವಣೆ ಕಂಡಿರುವ ಮಹೀಂದ್ರಾ ಮೊಜೊ ಬೈಕ್, ಬಿಎಸ್-4 ಜೊತೆ ಡ್ಯುಯಲ್ ಬದಲಾಗಿ ಸಿಂಗಲ್ ಎಕ್ಸಾಸ್ಟ್ ವೈಶಿಷ್ಟ್ಯತೆ ಹೊಂದಿದೆ.

ಇದಲ್ಲದೇ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ವಿನ್ಯಾಸದಲ್ಲೂ ಹೆಚ್ಚಿನ ಬದಲಾವಣೆ ತರಲಾಗಿದ್ದು, 295 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ.

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಮಹೀಂದ್ರಾ ಮೊಜೊ ಬೈಕ್, 27ಬಿಎಚ್‌ಪಿ ಮತ್ತು 30ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಹಿಂದಿನ ಮಾದರಿಗಿಂತಲೂ ಹೆಚ್ಚಿನ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದ್ದು, ಹೊಸ ಮಾದರಿಯಲ್ಲಿ 21-ಲೀಟರ್ ಫ್ಯೂಲ್ ಟ್ಯಾಂಕ್ ಇರಿಸಲಾಗಿದೆ.

ಇನ್ನು ಸದ್ಯ ಮಾರುಕಟ್ಟೆಯಲ್ಲಿ ಹಳೆಯ ದರಗಳ ಪ್ರಕಾರ ಮಹೀಂದ್ರಾ ಮೊಜೊ ಬೆಲೆ ರೂ. 1.65 ಲಕ್ಷ ಇದ್ದು, ಇತ್ತೀಚೆಗೆ ಜಾರಿಯಾದ ಜಿಎಸ್‌ಟಿ ಹಿನ್ನೆಲೆ ಬೆಲೆ ಹೆಚ್ಚಳವಾಗಬಹುದಾದ ಸಾಧ್ಯತೆಗಳಿವೆ.

ಕೆಟಿಎಂ 250, ಬಜಾಜ್ ಡೋಮಿನಾರ್ 400 ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾದರಿಗಳನ್ನು ಹಿಂದಿಕ್ಕಲು ಮಹೀಂದ್ರಾ ಮೊಜೊ ಸಿದ್ಧಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿವೆ.

English summary
Read in Kannada about New Mahindra Mojo Spotted Testing.
Please Wait while comments are loading...

Latest Photos