ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

ಜಪಾನ್ ದೇಶದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ತನ್ನ ಹೊಚ್ಚ ಹೊಸ ಜಿಎಸ್‌ಎಕ್ಸ್ -ಎಸ್750 ದ್ವಿಚಕ್ರ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಈ ವಾಹನದ ಮಾಹಿತಿ ಬಹಿರಂಗವಾಗಿದೆ.

By Girish

ಭಾರತದಲ್ಲಿ 2018ರಂದು ನೆಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಸುಜುಕಿ ಸಂಸ್ಥೆಯು ಈ ವಿಶೇಷ ರೀತಿಯ ಜಿಎಸ್ಎಕ್ಸ್-ಎಸ್750 ವಾಹನವನ್ನು ಪ್ರಾರಂಭಿಸಲಿದೆ ಎಂಬ ಮಾಹಿತಿ ಇದ್ದು, ಈ ವಾಹನದ ಜೊತೆಗೆ ಭಾರತದಲ್ಲಿ ಪ್ರಥಮಭಾರಿಗೆ ವಿ-ಸ್ಟಾರ್ಮ್ 650 ಸಹ ಪ್ರದರ್ಶನವಾಗಲಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

ಭಾರತದಲ್ಲಿ ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ವಿ-ಸ್ಟ್ರೋಮ್ 650 ಹೆಸರಿನ ಮಿಡಲ್ ವೇಟ್ ಸಾಹಸ ಮೋಟಾರ್‌ಸೈಕಲ್ ಪ್ರಾರಂಬಿಸಿಸುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

ಈ ಎರಡೂ ಮೋಟಾರ್ ಸೈಕಲ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಹೆಸರು ಪಡೆದುಕೊಂಡಿರುವ 750ಸಿಸಿ ವಾಹನಗಳ ಕಡೆ ಕೇಂದ್ರೀಕರಿಸುವ ಮೂಲಕ ಈ ವಿಭಾಗದ ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಸುಜುಕಿ ಮಾಡುತ್ತಿದೆ ಎನ್ನಬಹುದು.

ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

ಸುಜುಕಿ ಸಂಸ್ಥೆಯ ಜಿಎಸ್ಎಕ್ಸ್-ಎಸ್750 ಬೈಕ್ ತನ್ನ ಸಹೋದರನಾದ ಜಿಎಸ್ಎಕ್ಸ್-ಎಸ್1000 ಬೈಕಿನ ವಿನ್ಯಾಸ ಮತ್ತು ಶೈಲಿಯನ್ನು ಪಡೆಯಲಿದ್ದು, ಡಿಟ್ಯೂನ್ಡ್ ಆವೃತ್ತಿಯಾಗಿ ಬಿಡುಗಡೆಯಾಗಲಿದೆ. ಇನ್ನು, ಈ ಬೈಕ್ 749ಸಿಸಿ ಲಿಕ್ವಿಡ್ ಕೋಲ್ಡ್, ಇನ್ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 113 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.

ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿರುವ ಈ ಬೈಕ್, ತನ್ನ ಹಿರಿಯ ಸಹೋದರನಂತೆಯೇ ಕಾಣಿಸಲಿದ್ದು, ಶ್ರೇಷ್ಠ ರೀತಿಯ ಎಳೆತ ನಿಯಂತ್ರಣ ವ್ಯವಸ್ಥೆ, ಕೆವೈಬಿ ಸಸ್ಪೆನ್‌ಷನ್, ನಿಸ್ಸಿನ್ ಬ್ರೇಕ್‌ಗಳು ಮತ್ತು ಎಬಿಎಸ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

ವಿ-ಸ್ಟ್ರೋಮ್ 650 ಬೈಕ್, 645ಸಿಸಿ ಲಿಕ್ವಿಡ್ ಕೋಲ್ಡ್ ವಿ-ಟ್ವಿನ್ ಎಂಜಿನ್‌ನಿಂದ ಶಕ್ತಿ ಪಡೆಯಲಿದ್ದು, ಸಾಹಸ ಕ್ರೀಡೆಗೆ ಬಳಸುವಂತಹ ವಿಶೇಷತೆಗಳು, ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಆಯ್ಕೆಗಳನ್ನು ಪಡೆಯುತ್ತದೆ. ಸ್ಟ್ಯಾಂಡರ್ಡ್ ಮತ್ತು ಎಕ್ಸ್‌ಟಿ ಎಂಬ ಎರಡೂ ರೀತಿಯ ಆವೃತಿಗಳಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಕೈಗವಸುಗಳು, ಇಂಜಿನ್ ರಕ್ಷಕ ಮತ್ತು ಸ್ಪೋಕ್ ಚಕ್ರಗಳು ಹೊಂದಿರಲಿದೆ. 2018ರಲ್ಲಿ ನೆಡೆಯುವ ಆಟೋ ಎಕ್ಸ್‌ಪೋನಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ವಿಶ್ಲೇಷಿಸಿದ ನಂತರ ಎಕ್ಸ್‌ಟಿ ಆವೃತ್ತಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎನ್ನಲಾಗಿದೆ.

ಭಾರತದಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750 ಬಿಡುಗಡೆ ಮಾಹಿತಿ ಬಹಿರಂಗ

ಸುಜುಕಿ ಸಂಸ್ಥೆಯು ಜಿ ಎಸ್‌ಎಕ್ಸ್ ಎಸ್750 ಮತ್ತು ವಿ-ಸ್ಟ್ರೋಮ್ 650 ಬೈಕುಗಳೊಂದಿಗೆ ಮಿಡಲ್ ವೇಯ್ಡ್ ಮತ್ತು ಸಾಹಸ ಮೋಟಾರ್ ಸೈಕಲ್ ವಿಭಾಗವನ್ನು ಪ್ರವೇಶಿಸುವ ಗುರಿಯನ್ನು ಹೊಂದಿದೆ. ನೇಕೆಡ್ ಸ್ಟ್ರೀಟ್ ಬೈಕ್ ಮತ್ತು ವಿ-ಸ್ಟ್ರೋಮ್ ಬೈಕುಗಳು ಕ್ರಮವಾಗಿ ಕಾವಸಾಕಿ ನಿಂಜಾ Z900 ಮತ್ತು ಕಾವಸಾಕಿ Versys 650 ಸೂಪರ್ ಬೈಕುಗಳೊಂದಿಗೆ ಸ್ಪರ್ಧೆ ನೆಡೆಸಲಿವೆ.

Most Read Articles

Kannada
Read more on suzuki ಸುಜುಕಿ
English summary
Japanese two-wheeler manufacturer Suzuki is all set to introduce a new middleweight naked motorcycle, the GSX-S750 in the Indian market.
Story first published: Friday, October 27, 2017, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X