ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.62ರಷ್ಟು ಪ್ರಗತಿ ಸಾಧಿಸಿದ ಸುಜುಕಿ

Written By:

ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡ ನಂತರ ದ್ವಿಚಕ್ರ ವಾಹನಗಳ ಮಾರಾಟ ಪ್ರಕ್ರಿಯೆ ಚುರುಕುಗೊಂಡಿದ್ದು, ಸುಜುಕಿ ಸಂಸ್ಥೆಯು ಕೂಡಾ ಜುಲೈ ಅವಧಿಯಲ್ಲಿ ಶೇ.62 ಪ್ರಗತಿ ಸಾಧಿಸುವ ಮೂಲಕ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.62ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಜಿಎಸ್‌ಟಿ ಜಾರಿ ಬಳಿಕ ದ್ವಿಚಕ್ರ ವಾಹನ ಬೆಲೆಗಳಲ್ಲಿ ಇಳಿಕೆಯಾಗಿದ್ದು, ಬೈಕ್ ಖರೀದಿ ಪ್ರಕ್ರಿಯೆ ಜೋರಾಗಿದೆ. ಈ ನಡುವೆ ಉತ್ತಮ ಯೋಜನೆಗಳನ್ನು ಕೈಗೊಂಡ ಸುಜುಕಿ ಕೂಡಾ ಜುಲೈ ತಿಂಗಳಲ್ಲಿ 40,038 ಬೈಕ್‌ಗಳನ್ನು ಮಾರಾಟ ಮಾಡಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.62ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಈ ಮೂಲಕ ಸುಜುಕಿ ಸಂಸ್ಥೆಯು ಜುಲೈನಲ್ಲಿ ಶೇ.62ರಷ್ಟು ಮಾರಾಟ ಪ್ರಗತಿಯನ್ನು ಸಾಧಿಸಿದ್ದು, ದೇಶಿಯ ಬೈಕ್ ಉತ್ಪಾದನೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದೆ.

Recommended Video - Watch Now!
Jeep Compass Launched In India - DriveSpark
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.62ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಅದಲ್ಲದೇ ಜೂನ್ ಅವಧಿಯಲ್ಲಿ 24,703 ಬೈಕ್‌ಗಳನ್ನು ಮಾರಾಟ ಮಾಡಿ ಶೇ.52ರಷ್ಟು ಪ್ರಗತಿ ಸಾಧಿಸಿದ್ದ ಸುಜುಕಿ ಸಂಸ್ಥೆಯು, ಏಪ್ರಿಲ್-ಜುಲೈನಲ್ಲಿ ಒಟ್ಟು ಶೇ.40.6ರಷ್ಟು ಮಾರಾಟ ಪ್ರಗತಿ ಸಾಧಿಸಿರುವುದು ಗಮನಾರ್ಹ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.62ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಸುಜುಕಿ ದ್ವಿಚಕ್ರ ಮಾದರಿಗಳಾದ ಆಕ್ಸೆಸ್ 125 ಸ್ಕೂಟರ್‌ಗಳಿಗೆ ದೇಶದಲ್ಲೇ ಅತಿಹೆಚ್ಚು ಬೇಡಿಕೆಯಿದ್ದು, ನಂತರದ ಸ್ಥಾನದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಜಿಕ್ಸರ್ ಬೈಕ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.62ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಹೀಗಾಗಿಯೇ 2017-18ರ ಆರ್ಥಿಕ ವರ್ಷದ ಅವಧಿಯಲ್ಲಿ ಒಟ್ಟು 5 ಲಕ್ಷ ದ್ವಿಚಕ್ರ ವಾಹನಗಳ ಮಾರಾಟ ಗುರಿ ಹೊಂದಿರುವ ಸುಜುಕಿ ಈಗಾಗಲೇ 3 ಲಕ್ಷಕ್ಕೂ ಅಧಿಕ ಬೈಕ್‌ಗಳನ್ನು ಮಾರಾಟ ಮಾಡಿದ್ದು, ನಿರ್ದಿಷ್ಟ ಗುರಿಸಾಧನೆಗಾಗಿ ಮತ್ತಷ್ಟು ಹೊಸ ಯೋಜನೆಗಳನ್ನು ರೂಪಿಸುವ ತವಕದಲ್ಲಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.62ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸುಜುಕಿ ದ್ವಿಚಕ್ರ ವಾಹನಗಳ ವಿಭಾಗದಲ್ಲೂ ತನ್ನದೇ ಆದ ಬೇಡಿಕೆ ಹೊಂದಿದ್ದು, ಈ ಹಿನ್ನೆಲೆ ಮತ್ತಷ್ಟು ಹೊಸ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿರುವ ಸುಜುಕಿ ಪ್ರಮುಖ ಸಂಸ್ಥೆಗಳಿಗೆ ತ್ರೀವ ಸ್ಪರ್ಧೆ ಒಡ್ಡುವ ತವಕದಲ್ಲಿದೆ.

Read more on ಸುಜುಕಿ suzuki
English summary
Read in Kannada about Suzuki Two-Wheelers Posts 62 Percent Growth In July 2017.
Story first published: Wednesday, August 2, 2017, 10:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark