ಟಿವಿಎಸ್ ಅಪಾಚೆ 200 ಎಫ್‌ಐ4ವಿ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ; ಬೆಲೆ ರೂ.1.07 ಲಕ್ಷ

Written By:

ಟಿವಿಎಸ್ ಅಪಾಚೆ 200 ಎಫ್‌ಐ4ವಿ ಆವೃತಿಯು ಭಾರತದಲ್ಲಿ ಬಿಡುಗಡೆಯಾಗಿದೆ. ಹೊಚ್ಚ ಹೊಸ ಟಿವಿಎಸ್ ಅಪಾಚೆ ಎಫ್‌ಐ4ವಿ ದ್ವಿಚಕ್ರ ವಾಹನವು ರೂ.1,07,005 (ಎಕ್ಸ್ ಶೋ ರೂಂ) ದರದಲ್ಲಿ ಲಭ್ಯವಿದೆ.

ಟಿವಿಎಸ್ ಅಪಾಚೆ 200 ಫೈ4ವಿ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ; ಬೆಲೆ ರೂ.1.07 ಲಕ್ಷ

ಬಿಡುಗಡೆಗೊಂಡಿರುವ ಈ ನವೀನ 200 ಎಫ್‌ಐ4ವಿ ಬೈಕ್, ಟಿವಿಎಸ್ ಸಂಸ್ಥೆಯ ಪ್ರಮುಖ ಬ್ರಾಂಡ್ ಅಪಾಚೆ ಮಾದರಿಯ ಫ್ಯುಯೆಲ್ ಇಂಜೆಕ್ಟ್ ಆವೃತ್ತಿಯಾಗಿದೆ ಮತ್ತು ಹೊಸ Twin-Spray-Twin-Port EFI ತಂತ್ರಜ್ಞಾನ ಪಡೆದ ಮೋಟಾರ್‌ಸೈಕಲ್ ಸದ್ಯ ಭಾರತದಲ್ಲಿ ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದೆ.

ಟಿವಿಎಸ್ ಅಪಾಚೆ 200 ಫೈ4ವಿ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ; ಬೆಲೆ ರೂ.1.07 ಲಕ್ಷ

ಎಫ್‌ಐ4ವಿ ಫ್ಯುಯೆಲ್ ಇಂಜೆಕ್ಟ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಯಾಗಿರುವ ಟಿವಿಎಸ್ ಅಪಾಚೆ 197.75 ಸಿಸಿ ಬೈಕ್, 18.1 ಎನ್ಎಂ ತಿರುಗುಬಲದಲ್ಲಿ 20.71 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಟಿವಿಎಸ್ ಅಪಾಚೆ 200 ಫೈ4ವಿ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ; ಬೆಲೆ ರೂ.1.07 ಲಕ್ಷ

ಈ ಹೊಸ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ ಮತ್ತು ಕೇವಲ 3.9 ಸೆಕೆಂಡುಗಳಲ್ಲಿ 60 ಕಿಲೋಮೀಟರ್ ಗರಿಷ್ಠ ವೇಗ ತಲುಪುವಷ್ಟು ಬಲಿಷ್ಠ ಮತ್ತು 129 ಕಿಲೋಮೀಟರ್ ಗರಿಷ್ಠ ವೇಗ ಮಿತಿಯ ಎಂಜಿನ್ ಪಡೆದುಕೊಂಡಿದೆ ಎಂದು ಕಂಪನಿ ತಿಳಿಸಿದೆ.

ಟಿವಿಎಸ್ ಅಪಾಚೆ 200 ಫೈ4ವಿ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ; ಬೆಲೆ ರೂ.1.07 ಲಕ್ಷ

ಹೊಸ ಅಪಾಚೆ 200 Fi4V ಟ್ವಿನ್-ಸ್ಪ್ರೇ-ಟ್ವಿನ್-ಪೋರ್ಟ್ ಇಎಫ್ಐ ತಂತ್ರಜ್ಞಾನವನ್ನು ಬಳಸುತ್ತದೆ, ಇದು ಟಿವಿಎಸ್ ಉತ್ತಮ ಚಾಲನ ಸಾಧ್ಯತೆ, ವೇಗವಾದ ಥ್ರೊಟಲ್ ಪ್ರತಿಕ್ರಿಯೆ ಮತ್ತು ಹೊರಸೂಸುವಿಕೆ ಹಂತಗಳಲ್ಲಿ ಗಣನೀಯ ಇಳಿಕೆಗೆ ಅನುವು ಮಾಡಿಕೊಡುತ್ತದೆ.

ಟಿವಿಎಸ್ ಅಪಾಚೆ 200 ಫೈ4ವಿ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ; ಬೆಲೆ ರೂ.1.07 ಲಕ್ಷ

ಹೊಸ ತಂತ್ರಜ್ಞಾನ ಹೊರತುಪಡಿಸಿ, ಬೇರೆಲ್ಲಾ ವಿಚಾರಗಳಲ್ಲಿ ಈ ದ್ವಿಚಕ್ರ ವಾಹನವು ಯಾವುದೇ ರೀತಿಯ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿಲ್ಲ ಎನ್ನಬಹುದು. 37 ಎಂಎಂ ಮುಂಭಾಗದ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ಟಿವಿಎಸ್ ಅಪಾಚೆ 200 ಫೈ4ವಿ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ; ಬೆಲೆ ರೂ.1.07 ಲಕ್ಷ

ಸದ್ಯ ಬಿಡುಗಡೆಗೊಂಡಿರುವ ಈ 200 ಎಫ್‌ಐ4ವಿ ಇಂಧನ ಇಂಜೆಕ್ಷನ್ ವಾಹನವು ಈ ಬೈಕಿನ ಉನ್ನತ ಆವೃತಿಯಾಗಿದ್ದು, ಹಾರ್ಡ್‌ಕೋರ್ ಅಪಾಚೆ ಬ್ರಾಂಡ್‌ನ ಅಭಿಮಾನಿಗಳಿಗೆ ಈ ಬೈಕ್ ಖುಷಿ ನೀಡಲಿರುವುದು ಖಂಡಿತ.

Read more on tvs ಟಿವಿಎಸ್
English summary
TVS Apache 200 Fi4V launched in India. The all-new TVS Apache Fi4V is priced at Rs 1,07,005 (ex-showroom).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark