ಮೋಟಾರ್‌ಸೈಕಲ್ ಬ್ಲಾಗ್ ಪ್ರಾರಂಭಿಸಿದ ಟಿವಿಎಸ್ ಮೋಟಾರ್ಸ್

Written By:

ಟಿವಿಎಸ್ ಮೋಟಾರ್ಸ್ ಕಂಪೆನಿಯು ತನ್ನ ಉತ್ಸಾಹಿ ಹಾಗು ಸಂಭಾವ್ಯ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಮೋಟಾರ್‌ಸೈಕಲ್ ಬ್ಲಾಗನ್ನು ಪ್ರಾರಂಭಿಸಿದೆ.

ಮೋಟಾರ್‌ಸೈಕಲ್ ಬ್ಲಾಗ್ ಪ್ರಾರಂಭಿಸಿದ ಟಿವಿಎಸ್ ಮೋಟಾರ್ಸ್

ಹೊಸದಾಗಿ ಪ್ರಾರಂಭಗೊಂಡಿರುವ ಈ ಬ್ಲಾಗ್‌ನಲ್ಲಿ ನಿರ್ವಹಣೆ, ಟಿಪ್ಸ್, ಪ್ರಯಾಣ, ಸವಾರಿ ತಂತ್ರಗಾರಿಕೆ ಮತ್ತು ಮೋಟಾರ್‌ಸೈಕಲ್ ಸಂಬಂಧಿತ ಸಾಮಾನ್ಯ ಜ್ಞಾನ ವಿಭಾಗ ಸೇರಿದಂತೆ ವಿವಿಧ ವರ್ಗಗಳ ಅಡಿಯಲ್ಲಿ ಆಟೋದ್ಯಮದ ಬಗ್ಗೆ ಹಲವಾರು ಲೇಖನಗಳನ್ನು ಸಹ ಹೊಂದಿದೆ.

ಮೋಟಾರ್‌ಸೈಕಲ್ ಬ್ಲಾಗ್ ಪ್ರಾರಂಭಿಸಿದ ಟಿವಿಎಸ್ ಮೋಟಾರ್ಸ್

ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಮೋಟಾರ್ಸ್ ಇತಿಹಾಸವನ್ನೂ ಸಹ ಈ ಬ್ಲಾಗ್ ಬಹಿರಂಗಪಡಿಸುತ್ತದೆ ಹಾಗು ಇತರ ಬ್ರ್ಯಾಂಡ್‌ಗಳ ಮೋಟಾರ್‌ಸೈಕಲ್ ಮಾಲೀಕರಿಗೂ ಸಹ ಬ್ಲಾಗ್ ಉಪಯುಕ್ತವಾಗಿದೆ.

ಮೋಟಾರ್‌ಸೈಕಲ್ ಬ್ಲಾಗ್ ಪ್ರಾರಂಭಿಸಿದ ಟಿವಿಎಸ್ ಮೋಟಾರ್ಸ್

ಟಿವಿಎಸ್ ಮೋಟಾರ್ಸ್ ಕಂಪೆನಿಯ ಬ್ಲಾಗ್‌ನಲ್ಲಿ ಲೇಖನಗಳು ಚೆನ್ನಾಗಿ ರಚನೆಯಾಗಿವೆ ಮತ್ತು ವಿವಿಧ ವಿಷಯಗಳ ಬಗ್ಗೆ ಮೌಲ್ಯಯುತ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿಸುತ್ತದೆ.

ಮೋಟಾರ್‌ಸೈಕಲ್ ಬ್ಲಾಗ್ ಪ್ರಾರಂಭಿಸಿದ ಟಿವಿಎಸ್ ಮೋಟಾರ್ಸ್

ರೇಸಿಂಗ್ ಡಿಎನ್ಎ ಮೇಲೂ ಸಹ ಈ ಬ್ಲಾಗ್ ಬೆಳಕು ಚೆಲ್ಲುತ್ತದೆ ಹಾಗು ತಮ್ಮ ವಾಹನಗಳನ್ನು ಮಾರ್ಪಡಿಸುವಲ್ಲಿ ಆಸಕ್ತರಾಗಿರುವವರಿಗೆ ಒಳ್ಳೆಯ ವೇದಿಕೆ ಒದಗಿಸಲು ಈ ಬ್ಲಾಗ್ ಹೆಚ್ಚು ಉಪಯುಕ್ತವಾಗಿದೆ.

ಮೋಟಾರ್‌ಸೈಕಲ್ ಬ್ಲಾಗ್ ಪ್ರಾರಂಭಿಸಿದ ಟಿವಿಎಸ್ ಮೋಟಾರ್ಸ್

ತಂತ್ರಜ್ಞಾನದ ವಿಭಾಗದ ಬಗ್ಗೆಯೂ ಸಹ ಹೆಚ್ಚು ಉಪಯುಕ್ತ ಮಾಹಿತಿ ಈ ಬ್ಲಾಗ್ ನೀಡಲಿದ್ದು, ಗರಿಷ್ಠ ಮೈಲೇಜ್ ಹೇಗೆ ಪಡೆದುಕೊಳ್ಳಬೇಕು ಎಂಬ ವಿಚಾರ ತಿಳಿದುಕೊಳ್ಳಬಹುದಾಗಿದೆ. ಹೊಸ ಮೋಟಾರ್‌ಸೈಕಲ್ ಬ್ಲಾಗ್‌ನಿಂದ ಗ್ರಾಹಕರನ್ನು ತನ್ನತ್ತ ಹೆಚ್ಚು ಸೆಳೆಯುವ ಯೋಜನೆಯನ್ನು ಟಿವಿಎಸ್ ಹಾಕಿಕೊಂಡಿದೆ.

ಮೋಟಾರ್‌ಸೈಕಲ್ ಬ್ಲಾಗ್ ಪ್ರಾರಂಭಿಸಿದ ಟಿವಿಎಸ್ ಮೋಟಾರ್ಸ್

ಟಿವಿಎಸ್ ಕಂಪನಿಯ ಈ ಹೊಸ ಮೋಟಾರ್‌ಸೈಕಲ್ ಬ್ಲಾಗ್‌ ಪ್ರತಿಯೊಂದು ಸಂಸ್ಥೆಯ ಬೈಕುಗಳ ಬಗ್ಗೆ ಮಾಲೀಕರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತಿದ್ದು, ತನ್ನ ಗ್ರಾಹಕರನ್ನು ಕೇವಲ ಮಾರಾಟ ಮತ್ತು ಸೇವೆಗೆ ಸೀಮಿತಗೊಳಿಸುವ ಬದಲು ವಿಭಿನ್ನವಾಗಿ ಬ್ಲಾಗ್ ಸೃಷ್ಟಿಸಿ ಮಾಹಿತಿ ಒದಗಿಸುತ್ತಿರುವುದು ಒಳ್ಳೆಯ ವಿಚಾರವಾಗಿದೆ.

Read more on ಟಿವಿಎಸ್ tvs
English summary
TVS Motor Company has launched its new motorcycle blog for enthusiasts and potential motorcycle and scooter customers.
Story first published: Tuesday, August 29, 2017, 17:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark