ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಭಾರತದಲ್ಲಿ ದೊಡ್ಡ ನೋಟು ನಿಷೇಧದ ನಂತರವೂ ಟಿವಿಎಸ್ ಮೋಟಾರ್ ತನ್ನ ಉತ್ಪನ್ನಗಳ ಮಾರಾಟದಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಹೀರೋ ಮೋಟೋ ಕಾರ್ಪ್ ಹಿಂದಿಕ್ಕಿದೆ.

ಕಳೆದೊಂದು ವರ್ಷದಿಂದ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟಗೊಳ್ಳುತ್ತಿರುವ ಟಿವಿಎಸ್ ಮೋಟಾರ್ ಉತ್ಪನ್ನಗಳು ಗ್ರಾಹಕರ ಮನಗೆದ್ದಿದ್ದು, ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಹೀರೋ ಉತ್ಪನ್ನಗಳನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

2ನೇ ಸ್ಥಾನದಲ್ಲಿದ್ದ ಹೀರೋ ಸ್ಥಾನವನ್ನು ತನ್ನದಾಗಿಸಿಕೊಂಡಿರುವ ಟಿವಿಎಸ್, ಹೋಂಡಾ ಮಾರಾಟಕ್ಕೂ ತೀವ್ರ ಸ್ಪರ್ಧೆ ಒಡ್ಡಿದೆ. ವರದಿಗಳ ಪ್ರಕಾರ ಹೀರೋ ಮೋಟೋ ಕಾರ್ಪ್ ಸಂಸ್ಥೆ ಒಂದು ವರ್ಷದ ಅವಧಿಯಲ್ಲಿ 7,31,967 ಘಟಕಗಳನ್ನು ಮಾರಾಟಮಾಡಿತ್ತು. ಆದ್ರೆ ಕಳೆದ ಅವಧಿಗಿಂತ 1.16ರಷ್ಟು ಕಡಿಮೆಯಾಗಿದ್ದು, ಟಿವಿಎಸ್ ಮಾರಾಟ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಇನ್ನು 2016-17ರ ಆರ್ಥಿಕ ವರ್ಷದಲ್ಲಿ 7,43,838 ಘಟಕಗಳನ್ನು ಮಾರಾಟಗೊಳಿಸಿರುವ ಟಿವಿಎಸ್ ಮೋಟಾರ್, ಕಳೆದ ಅವಧಿಗಿಂತ ಶೇ.5.07ರಷ್ಟು ಹೆಚ್ಚಳಗೊಂಡಿದೆ. ಹೀಗಾಗಿ ತನ್ನ ನೀರಿಕ್ಷೆಯನ್ನು ಇಮ್ಮುಡಿಗೊಳಿಸಿರುವ ಟಿವಿಎಸ್, ಹೋಂಡಾ ಮಾರಾಟಕ್ಕೂ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಇನ್ನೊಂದು ಪ್ರಮುಖ ವಿಚಾರವನ್ನು ತಿಳಿಯುವುದಾದರೇ ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ತನ್ನ ಉತ್ಪನ್ನಗಳನ್ನು ಗರಿಷ್ಠ ಪ್ರಮಾಣದಲ್ಲಿ ಮಾರಾಟಗೊಳಿಸಿದ್ದ ಹೋಂಡಾ, ಶೇ.15ರಷ್ಟು ಹೆಚ್ಚುವರಿ ಗುರಿಸಾಧನೆ ಮಾಡಿದೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಏಪ್ರಿಲ್ 2016 ರಿಂದ ಫೆಬ್ರವರಿ 2017ರ ಅವಧಿಯಲ್ಲಿ 3,89,922 ಘಟಕಗಳನ್ನು ಮಾರಾಟಗೊಳಿಸಿರುವ ಹೋಂಡಾ, ಸದ್ಯ ಪ್ರಥಮ ಸ್ಥಾನದಲ್ಲೇ ಮುಂದುವರಿಯುವ ಮೂಲಕ ಮಾರಾಟ ಜಾಲವನ್ನು ಮತ್ತಷ್ಟು ವಿಸ್ತರಿಸುವ ತವಕದಲ್ಲಿದೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಹೋಂಡಾ ಮತ್ತು ಟಿವಿಎಸ್ ಸ್ಥಾನಪಡೆದಿದ್ದರೆ, ಶೇ.1.6ರಷ್ಟು ಮಾರಾಟ ತಗ್ಗಿದ್ದರ ಪರಿಣಾಮ ಹೀರೋ ಮೋಟೋ ಕಾರ್ಪ್ 3ನೇ ಸ್ಥಾನಕ್ಕೆ ಇಳಿಕೆಯಾಗಿದೆ. ಇನ್ನು ಹೋಂಡಾ ಟಿವಿಎಸ್‌ಗೆ ತೀವ್ರ ಸ್ಪರ್ಧೇ ಒಡ್ಡಿದ್ದ ಯಮಹಾ ಮತ್ತು ಸುಜುಕಿ ಕಂಪನಿಗಳು ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನ ಪಡೆದಿವೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಇನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಆದ ದೊಡ್ಡ ನೋಟಿನ ಅಪನಗದೀಕರಣ ವೇಳೆ ವಾಹನಗಳ ಮಾರಾಟ ಮೇಲೆ ಭಾರೀ ಋಣಾತ್ಮಕ ಪರಿಣಾಮ ಬೀರಿತ್ತು. ಆದರೂ ಈ ಅವಧಿಯಲ್ಲಿ ದೃತಿಗೆಡದ ಟಿವಿಎಸ್ ಮೋಟಾರ್, ಆರೋಗ್ಯಕರ ಸವಾಲು ಸ್ಪೀಕರಿಸಿ ಸ್ಟಾಕ್ ಆರಂಭಿಸಿತ್ತು.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ನಂತರ ಹೊಸ ವರ್ಷದ ಮೊದಲ ತಿಂಗಳಲ್ಲಿ ಮಾರಾಟ ತಂತ್ರದಲ್ಲಿ ಬದಲಾವಣೆ ತರುವ ಮೂಲಕ ಹೀರೋ ಮೋಟೋ ಕಾರ್ಪ್ ಮಾರಾಟ ಪ್ರಮಾಣವನ್ನು ಹಿಂದಿಕ್ಕಿದೆ. ಹೀಗಾಗಿ ಇನ್ನು ಹೆಚ್ಚಿನ ಮಾರಾಟ ನೀರಿಕ್ಷೆಯಲ್ಲಿರುವ ಟಿವಿಎಸ್, ಮತ್ತಷ್ಟು ಗ್ರಾಹಕರ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಇದೇ ವೇಳೆ ಅಪನಗದೀಕರಣಕ್ಕೆ ತತ್ತರಿಸಿದ ಹೀರೋ ಮೋಟೋ, ತದನಂತರ ಚೇತರಿಕೆ ಕಾಣಲು ಸಾಕಷ್ಟು ಶ್ರಮವಹಿಸಬೇಕಾಯಿತು. ಹೀಗಾಗಿ 5ನೇ ತ್ರೈಮಾಸಿಕ ನಂತರ ಪ್ರತಿಶತ 14ರಷ್ಟು ಪಾಲನ್ನು ಮಾತ್ರ ತನ್ನದಾಗಿಸಿಕೊಳ್ಳಲು ಸಾಧ್ಯವಾಗಿದೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಈ ನಡುವೆ ಮೊನ್ನೆಯಷ್ಟೇ ಬಿಡುಗಡೆಗೊಂಡಿರುವ ಟಿವಿಎಸ್ ಬಿಎಸ್-IV ಎಂಜಿನ್ ಹೊಂದಿರುವ ವಿಗೋ ಸ್ಕೂಟರ್ ಗ್ರಾಹಕರ ಮನಸೆಳೆಯುತ್ತಿದೆ. ಒಟ್ಟಿನಲ್ಲಿ ಹೀರೋ ಉತ್ಪನ್ನಗಳನ್ನು ಹಿಂದಿಕ್ಕಿ ಭರ್ಜರಿ ದಾಖಲೆ ನಿರ್ಮಿಸುತ್ತಿರುವ ಟಿವಿಎಸ್ ಮೋಟಾರ್, ಈ ಬಾರಿ ಹೋಂಡಾ ಉತ್ಪನ್ನಗಳಿಗೂ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್‌ನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
TVS overtook Hero Moto Corp as the Nation's second largest scooter seller during the April-February period this fiscal.
Story first published: Monday, March 27, 2017, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X