ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ದೇಶಿಯ ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಆಟೋ 2017ರಲ್ಲಿ ತಮ್ಮ ಪಲ್ಸರ್ ಎನ್ಎಸ್ 160 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಈ ಬೈಕ್‍‍ಗೆ ಹೆಚ್ಚು ಸುರಕ್ಷಾ ಸೌಲತ್ತುಗಳನ್ನು ನೀಡಲು, ಹಿಂಭಾಗದ ಚಕ್ರಗಳಿಗ

By Rahul Ts

ದೇಶಿಯ ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಆಟೋ 2017ರಲ್ಲಿ ತಮ್ಮ ಪಲ್ಸರ್ ಎನ್ಎಸ್ 160 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಈ ಬೈಕ್‍‍ಗೆ ಹೆಚ್ಚು ಸುರಕ್ಷಾ ಸೌಲತ್ತುಗಳನ್ನು ನೀಡಲು, ಹಿಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸುತ್ತಿದೆ.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆಗೊಂಡಾಗ ಮುಂಭಾಗ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಿಗೆ ಡ್ರಮ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವದಿಸಲಾಗಿತ್ತು. ಆದರೇ ಇದೀಗ ಈ ಬೈಕ್ ಹಿಂಭಾಗದ ಚಕ್ರಗಳಿಗು ಡಿಸ್ಕ್ ಬ್ರೇಕ್ ಅನ್ನು ಪಡೆಯಲಿದ್ದು, ಕೆಲವೇ ದಿನಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ಬಿಡುಗಡೆಗೂ ಮುನ್ನವೇ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್‍ ಬೈಕ್‍ಗಳು, ಡೀಲರ್‍‍ಗಳ ಯಾರ್ಡ್ ಅನ್ನು ತಲುಪಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಸುಜುಕಿ ಜಿಕ್ಸರ್, ಯಮಹಾ ಎಫ್‍ಜೆಡ್ ಮತ್ತು ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ ಕಡಿಮೆ ಬೆಲೆಯಲ್ಲಿ ಸ್ಪೋರ್ಟಿ ಬೈಕ್ ಅನ್ನು ಖರೀದಿಸಲು ಇಚ್ಛಿಸುವ ಗ್ರಾಹಕ್ರಿಗಾಗಿಯೆ ವಿನ್ಯಾಸಗೊಳಿಸಲಾಗಿದ್ದು, ಪ್ರಸ್ಥುತ ಈ ಬೈಕಿನ ಬೇಸ್ ವೇರಿಯಂಟ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 80,640 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಪಡೆದ ಪಲ್ಸರ್ ಎನ್ಎಸ್ 160 ಬೈಕ್‍‍ಗಳು ಸಾಧಾರಣ ಬೈಕ್‍ಗಿಂತ ಸುಮಾರು ರೂ. 3,000 ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಈ ಬೈಕ್ ತನ್ನ ಇತರೇ ಪಲ್ಸರ್ ಬೈಕ್‍‍ಗಳಂತೆಯೆ ಡ್ಯುಯಲ್ ಟೋನ್ ಬಣ್ಣವನ್ನು ಪಡೆದುಕೊಂಡಿದೆ.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ಎಂಜಿನ್ ಸಾಮರ್ಥ್ಯ

ಪಲ್ಸರ್ ಎಸ್‍ಎಸ್ 160 ಬೈಕ್‍‍ಗಳು ಕೇವಲ ಸುರಕ್ಷಾ ವೈಶಿಷ್ಟ್ಯತೆಯನ್ನು ಹೊರತು ಪಡಿಸೆ ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ ಎನ್ನಲಾಗಿದೆ. ಈ ಬೈಕ್‍ನಲ್ಲಿನ 160ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 15.5 ಬಿಹೆಚ್‍‍ಪಿ ಮತು 14.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ 2012ಎಮ್ಎಮ್ ಉದ್ದ, 804ಎಮ್ಎಮ್ ಎತ್ತರ, 1060ಎಮ್ಎಮ್ ಅಗಲವನ್ನು ಪಡೆದುಕೊಂಡಿದ್ದು, 176ಎಮ್ಎಮ್‍‍ನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 142 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದೆ.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್..

ಇನ್ನು ಬೈಕಿನ ಸಸ್ಪೆಂಷನ್ ವಿಚಾರಕ್ಕೆ ಬಂದಲ್ಲಿ ಪಲ್ಸರ್ ಎನ್ಎಸ್ 160 ಬೈಕ್‍‍‍ನ ಮುಂಭಾಗದಲ್ಲಿ 130ಎಮ್ಎಮ್ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ 120ಎಮ್ಎಮ್ ಮೊನೊಷಾಕ್ ಸಪೆಂಷನ್ ಅನ್ನು ಪಡೆದುಕೊಂಡಿದೆ. ಹಾಗು 12 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಕೆಪಾಸಿಟಿ ಮತ್ತು ಪ್ರತೀ ಲೀಟರ್‍‍‍ಗೆ 45 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಹೇಗಿದೆ ನೋಡಿ ಬಜಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್ ಬೈಕ್..

Most Read Articles

Kannada
Read more on bajaj auto pulsar
English summary
2018 Bajaj Pulsar NS 160 rear disc brake arrives at dealer before launch.
Story first published: Saturday, August 11, 2018, 13:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X