ರಸ್ತೆ ಅಪಘಾತದಿಂದ ನಿಮ್ಮನ್ನು ಪಾರು ಮಾಡಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್..!!

Written By: Rahul TS

ದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಮುಂಬೈ ಮೂಲದ ಸ್ಟಾರ್ಟ್‍ಅಪ್ ಸಂಸ್ಥೆಯೊಂದು ಸ್ಕೂಟರ್ ಅನ್ನು ಪರಿಚಯಿಸಲಿದ್ದು, ಈ ಸ್ಕೂಟರ್‍‍ನಲ್ಲಿರುವ ಆಯ್ಕೆಗಳೊಂದಿಗೆ ಆಗುವ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲಿದೆಯಂತೆ.

ಹೌದು ಮುಂಬೈ ಮೂಲದ ಆರ್ಟೆಮ್ ಎನರ್ಜಿ ಫ್ಯೂಚರ್ ಎಂಬ ಸಂಸ್ಥೆಯು ತಮ್ಮ ಎಂ9 ಸ್ಕೂಟರ್ ಅನ್ನು ತಯಾರಿಸುತ್ತಿದ್ದು, ಇದು ಖಚಿತವಾಗಿ ವಾಹನ ಚಾಲಕನ ಜೀವ ಸೇವಕನಾಗಿರಲಿದೆ ಎಂದು ಹೇಳಿಕೊಂಡಿದ್ದಾರೆ. ಈ ವಿದ್ಯುತ್ ಸ್ಕೂಟರ್ ವಿಶ್ವದ ಸುರಕ್ಷಿತ ದ್ವಿಚಕ್ರ ವಾಹನ ಎಂದು ಕೂಡ ಹೇಳಲಾಗುತ್ತಿದೆ.

ರಸ್ತೆ ಅಪಘಾತದಿಂದ ನಿಮ್ಮನ್ನು ಪಾರು ಮಾಡಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್..!!

ಚಾಲಕರ ಜೀವ ರಕ್ಷಕ ಆಗಲಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಎಡಿಎಎಸ್ (ಅಡ್ವಾನ್ಸ್ಡ್ ಡ್ರವಿರ್ ಅಸ್ಸಿಸ್ಟಂನ್ ಸಿಸ್ಟಂ) ಅನ್ನು ಹೊಂದಿದೆ. ಈ ಸ್ಕೂಟರ್ 6 ಸೆಕೆಂಡಿನಲ್ಲಿ 0 ಇಂದ 50 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ಗಂಟೆಗೆ 90 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಫೀಡ್ ಅನ್ನು ಪಡೆದುಕೊಂಡಿದೆ.

ರಸ್ತೆಯ ಮೇಲಿನ ಗಮನದ ಕೊರತೆಯಿಂದ ಮತ್ತು ಚಾಲಕನ ತಪ್ಪುಗಳಿಂದಾಗುತ್ತಿರುವ ಕಾರಣದಿಂದಾಗಿ ಹೊಸ ಅರ್ಟೆಮ್ ಎಂ9 ಸ್ಕೂಟರ್‍‍ನಲ್ಲಿ ಅಳವಡಿಸಲಾಗಿರುವ ಟೆಕ್ನಾಲಜಿಯ ಮೂಲಕ ಅದು ಚಾಲಕನಿಗೆ ಸಮಯಕ್ಕೆ ತಕ್ಕಂತೆ ಅಪ್ಡೆಟ್ ಮತ್ತು ಸೂಚನೆಗಳನ್ನು ನೀಡುತ್ತವೆ.

ಈ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಚಾಲಕನ ಜಾಗೃತಿಗಾಗಿ 100 ಮೀಟರ್ ರೇಡಿಯಸ್ 360 ಡಿಗ್ರಿ ಕ್ಯಾಮೆರಾ ಮತ್ತು ರೇಡರ್‍‍ಗಳಾನ್ನು ಅಳವಡಿಸಲಾಗಿದೆ. ಸಾಮಿಪ್ಯ ಎಚ್ಚರಿಕೆಗಳನ್ನು ಸ್ಕೂಟರಿನ ಹ್ಯಾಂಡಲ್‍‍ಗಳಿಂದ ಸ್ಮಾರ್ಟ್ ಹೆಲ್ಮೆಟ್ ಮತ್ತು ವೈಬ್ರೇಶನ್ ಪ್ರತಿಕ್ರಿಯೆಯಿಂದ ರೈಡರ್‍‍ಗೆ ಕಳುಹಿಸಲಾಗುತ್ತದೆ.

ಜೊತೆಗೆ ಈ ಸ್ಕೂಟರ್ EDB (ಎಲೆಕ್ಟ್ರೋ ಡೈನಾಮಿಕ್ ಬ್ರೇಕಿಂಗ್) ತಂತ್ರಜ್ಞಾನವನ್ನು ಪಡೆದುಕೊಳ್ಳುತ್ತಿದ್ದು ಇದು ಉತ್ತಮವಾಗಿ ಗಾಡಿಗೆ ನಿಲ್ಲುವ ಶಕ್ತಿಯ ಎಳೆತದ ಬಲವನ್ನು ತಿರುಗಿಸುವ ತಂತ್ರಜ್ಞಾನವನ್ನು ಬಳಸುತ್ತದೆ. ಆದರೆ ಕೃತಕ ಬುದ್ಧಿಮತ್ತೆಯ ಟೈಲ್‍‍ಗೇಟ್‍‍ಗಳು ವಾಹನಗಳ ನಡುವೆಯ ಅಂತರವನ್ನು ಖಚಿತಪಡಿಸುತ್ತದೆ.

ಇದಲ್ಲದೆ ಈ ಎಲೆಕ್ಟ್ರೀಕ್ ಸ್ಕೂಟರ್‍‍ನಲ್ಲಿ ಬ್ಲಂಡ್ ಸ್ಪಾತ್ ವಾರ್ನಿಂಗ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗುತ್ತಿದ್ದು, ಇದರಿಂದ ಸ್ಕೂಟರಿನ ಅತೀ ಸಮೀಪದಲ್ಲಿ ಬರುತ್ತಿರುವ ವಾಹನಗಳ ಬಗ್ಗೆ ಮತ್ತು ಮುಂಬರುರಲಿರುವ ಅಪಾಯವನ್ನು ತಿಳಿಸುತ್ತದೆಯಂತೆ.

ಇದೇಲ್ಲಾ ಸುರಕ್ಷತೆಯ ವೈಶಿಷ್ಟ್ಯತೆಗಳನ್ನು ಹೊರತು ಪಡಿಸಿ ಅರ್ಟೆಮ್ ಎಂ9 ಸ್ಕೂಟರ್‍‍ನಲ್ಲಿ ಇಲ್ಲಿಯವರೆಗು ಕಾರುಗಳಲ್ಲಿ ಮಾತ್ರ ಬಳಾಸಲಾಗುತಿದ್ದ 5 ಪೂರ್ವ ನಿರ್ಧರಿತ ಸಂದೇಶವನ್ನು ಕೂಡ ಸ್ವಯಂಚಾಲಿತವಾಗಿ ಕಳುಹಿಸುವ ಆಯ್ಕೆಯನ್ನು ಪಡೆದಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಅನ್ನು ಸ್ಥಳೀಯ ತುರ್ತುಸ್ಥಿತಿ ಪ್ರತಿಕ್ರಿಯೆ ಪ್ರಾಧಿಕಾರವಾಗಿ ಸೂಚಿಸುತ್ತವೆ.

ತುಂಬಾ ಸ್ಟಾರ್ಟ್‍ಅಪ್ ಸಂಸ್ಥೆಗಳು ಎಷ್ಟೊ ವಾಹನಗಳನ್ನು ಪರಿಚಯಿಸುವ ಸುಳಿವನ್ನು ನೀಡಿದ್ದು, ಕೊನೆಗೆ ಯಾವುದು ಬಿಡುಗಡೆಗೊಳ್ಳಲಿಲ್ಲ. ಆದ್ರೆ ಬೇರೆ ಕಂಪೆನಿಗಳಂತೆ ಈ ಸ್ಕೂಟರ್ ಕೂಡ ಬಿಡುಗಡೆಗು ಮುನ್ನವೆ ಮಾಯವಾಗದೆ ಬಿಡುಗಡೆಗೊಂಡರೆ ಒಳ್ಳೇಯದು ಎಂಬ ನಿರೀಕ್ಷೆಯಿದೆ.

English summary
Mumbai based start-up plans to launch world’s safest scooter.
Story first published: Friday, May 11, 2018, 16:14 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark