ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಸರ್ಕಾರದ ಆದೇಶದಂತೆ 2020ರಷ್ಟರಲ್ಲಿ ಭಾರತದ ರಸ್ಥೆಗಳಲ್ಲಿ ಬಹುತೇಕ ವಿದ್ಯುತ್ ವಾಹನಗಳು ಸಂಚರಿಸಬೇಕಾಗಿದ್ದು, ಆದ್ದರಿಂದ ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ.

By Rahul Ts

ಸರ್ಕಾರದ ಆದೇಶದಂತೆ 2020ರಷ್ಟರಲ್ಲಿ ಭಾರತದ ರಸ್ಥೆಗಳಲ್ಲಿ ಬಹುತೇಕ ವಿದ್ಯುತ್ ವಾಹನಗಳು ಸಂಚರಿಸಬೇಕಾಗಿದ್ದು, ಆದ್ದರಿಂದ ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ. ಆದರೆ ಆ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್‍‍‍ಗಳ ಅವಶ್ಯಕತೆಯು ಇರುತ್ತದೆ ಅಲ್ಲವೆ..?

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ ಎಥರ್ ಎನರ್ಜಿ ಸಂಸ್ಥೆಯು ನಗರದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್‍ ಅನ್ನು ಪ್ರಾರಂಭಗೊಳಿಸಿದ್ದು, ಎಥರ್‍‍ಗ್ರಿಡ್ ಎಂಬ ಹೆಸರಿನಲ್ಲಿ ಬಿಡುಗಡೆಗೊಂಡಿದೆ. ಈ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್‍‍ಗಳ ಪ್ರತಿಷ್ಠಾಪನೆಯನ್ನು ಈಗಾಗಲೆ ಪ್ರಾರಂಭಿಸಿದ್ದು, ಭವಿಷ್ಯದ ದಿನಗಳಲ್ಲಿ ನಗರದೆಲ್ಲೆಡೆ ಇನ್ನು 30 ಚಾರ್ಜಿಂಗ್ ಪಾಯಿಂಟ್‍‍ಗಳನ್ನು ಸೆಟಪ್ ಮಾಡುವ ಯೋಜನೆಯಲ್ಲಿದೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಎಥರ್ ಸಂಸ್ಥೆಯು ಪ್ರತಿಷ್ಠಾಪನೆ ಮಾಡಲಿರುವ ಇನ್ನಿತರೆ 30 ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‍‍ಗಳನ್ನು ಇದೇ ವರ್ಷದ ಕೊನೆಯಲ್ಲಿ ಪ್ರಾರಂಭಿಸಲಾಗಿದ್ದು, ಸಂಸ್ಥೆಯು ಈಗಾಗಲೆ ನಗರದಲ್ಲಿರುವ ಪ್ರಸಿದ್ಧ ಮಾಲ್, ಕೇಫ್, ರೆಸ್ಟಾರೆಂಟ್, ಟೆಕ್ ಪಾರ್ಕ್, ಮಲ್ಟಿಪ್ಲೆಕ್ಸ್ ಮತ್ತು ಜಿಮ್‍‍ಗಳಲ್ಲಿ ಪ್ರತಿಷ್ಠಾಪನೆ ಮಾಡಲು ಪಾಲುದಾರಿಕೆಯನ್ನು ಪಡೆದಿವೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಮೊಬೈಲ್ ಅಪ್ಲಿಕೇಶನ್ ಮೂಲಕ ಎಲ್ಲಾ ಚಾರ್ಜಿಂಗ್ ಪಾಯಿಂಟ್‍‍ಗಳನ್ನು ಸಂಪರ್ಕಿಸಲಾಗಿದ್ದು, ಮುಂದಿನ 6 ತಿಂಗಳುಗಳು ಇವಿ ಮಾಲೀಕರು ಇದನ್ನು ಉಚಿತವಾಗಿ ಪಡೆಯಬಹುದಾಗಿದೆ. ಅಲ್ಲದೆ ಚಾರ್ಜಿಂಗ್ ಸ್ಟೇಷನ್‍‍ಗಳು ಐಪಿ55 ರೇಟಿಂಗ್ ಅನ್ನು ಪಡೆದುಕೊಂಡಿದ್ದು, ಯಾವುದೇ ಹವಾಮಾನದಲ್ಲಿ ಬಳಸಲು ಸುರಕ್ಷಿತವಾಗಿದೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಈ ಆಪ್ ಕ್ಲೌಡ್ ಆಧಾರಿತ ಸಿಸ್ಟಂ ಆಗಿದ್ದು, ಇದರಿಂದ ವಾಹನ ಮಾಲಿಕರು ಹತ್ತಿರವಿರುವ ಚಾರರ್ಜಿಂಗ್ ಪಾಯಿಂಟ್‍ ಅನ್ನು ನ್ಯಾವಿಗೇಶನ್‍‍ನ ಮೂಲಕ ಕಂಡುಕೊಳ್ಳಬಹುದಾಗಿದೆ. ಇದಲ್ಲದೆ ಈ ಆಪ್ ಮೂಲಕ ನಿಮ್ಮ ವಾಹನ ಎಷ್ಟರ ಮಟ್ಟಿಗೆ ಚಾರ್ಜ್ ಆಗಿದೆ ಎಂಬುದನ್ನು ಕೂಡ ಇದರಲ್ಲಿ ನೀವು ತಿಳಿದುಕೊಳ್ಳಾಬಹುದಾಗಿದೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಈ ಚಾರ್ಜಿಂಗ್ ಪಾಯಿಂಟ್‍‍ಗಳು ವಾಹನಕ್ಕೆ ಕನೆಕ್ಟ್ ಮಾಡಿದ ನಂತರವೆ ಚಾರ್ಜ್ ಆಗಲಿದೆ. ಇವುಗಳಲ್ಲಿ ಆಟೊ ಪವರ್ ಆನ್-ಆಫ್ ಎಂಬ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದ್ದು, ಇದರಿಂದ ಓವರ್‍‍‍ಚಾರ್ಜಿಂಗ್ ಮತ್ತು ಲೋ ವೋಲ್ಟೇಜ್ ಸಂಧರ್ಭವನ್ನು ಹಿಡಿತದಲ್ಲಿಡಲು ಸಹಾಯಕಾರಿಯಾಗಿದೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಇದಲ್ಲದೆ ಬೆಂಗಳೂರು ಮೂಲದ ಎಥರ್ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದು, ಎಥರ್ ಎಸ್340 ಸ್ಕೂಟರಿನ ಖರೀದಿಗಾಗಿ ಇದೇ ವರ್ಷದ ಜೂನ್ ತಿಂಗಳಿಂದ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಎಥರ್ ಬಿಡುಗಡೆಗೊಳಿಸಲಿರುವ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ಬೆಂಗಳೂರು ಗ್ರಾಹಕರಿಗೆ ಮಾತ್ರ ಖರೀದಿಮಾಡಬಹುದಾಗಿದ್ದು, ಇನ್ನು ಎಥರ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಒಂದು ಬಾರಿ ಚರ್ಜ್‍‍ಗೆ ಸುಮಾರು 60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಗಂಟೆಗೆ 72 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಕೂಡ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಎಥರ್ ಎಸ್340 ಎಲೆಕ್ಟ್ರಿಕ್ ಸ್ಮಾರ್ಟ್‍ಫೋನ್ ಕನೆಕ್ಟಿವಿಟಿ, ನ್ಯಾವಿಗೇಶನ್ ಅಸ್ಸಿಸ್ಟ್, ಪಾರ್ಕಿಂಗ್ ಅಸ್ಸಿಸ್ಟ್ ಆಯ್ಕೆಯನ್ನು ಪಡೆದಂತ ಸ್ಕೂಟರ್ ಏಳು ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವೆಹಿಕಲ್ ಚಾರ್ಜಿಂಗ್ ಪಾಯಿಂಟ್ ಟ್ರಾಕರ್, ಎಲ್ಇಡಿ ಲೈಟ್‍‍ನಿಂಗ್, ಸಿಬಿಎಸ್ ಮತ್ತು ಸೀಟ್ ಸ್ಟೊರೇಜ್ ಲೈಟ್ ಎಂಬ ಹತ್ತುಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಬೆಂಗಳೂರಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೆಷನ್ ಪ್ರತಿಷ್ಠಾಪಿಸಿದ ಎಥರ್..

ಇವುಗಳಲ್ಲದೆ ಎತರ್ ಸಂಸ್ಥೆಯು ಬೆಂಗಳೂರಿನ ಇಂದಿರಾನಗರ್‍‍ನಲ್ಲಿ ಗ್ರಾಹಕರ ಅನುಭವ ಕೇಂದ್ರವನ್ನು ಕೂಡ ತೆರೆಯಲಿದ್ದು, ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಮುನ್ನ ಪರೀಕ್ಷಿಸಬಹುದಂತೆ.

Most Read Articles

Kannada
English summary
Ather Energy launches EV charging stations in Bangalore.
Story first published: Wednesday, May 23, 2018, 11:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X