'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

Written By:

ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡಲಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಕ್ಲಾಸಿಕ್ ಮತ್ತು ಅಡ್ವೆಂಚರ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿವೆ. ಆದ್ರೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸಾಮರ್ಥ್ಯವನ್ನು ಅಣಕಿಸುವ ಕೆಲ ಜಾಹೀರಾತುಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಹೌದು.. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಗುರಿಯಾಗಿಸಿ 'ಹಾಥಿ ಮತ್ ಪಾಲೊ' ಎನ್ನುವ ಜಾಹೀರಾತು ಸರಣಿ ಆರಂಭಿಸಿರುವ ಬಜಾಜ್ ಸಂಸ್ಥೆಯು, ಡೋಮಿನಾರ್ 400 ಬೈಕ್‌ಗಳ ಮೂಲಕ ಆರ್‌ಇ ಬೈಕ್‌ಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಟಾಂಗ್ ನೀಡುತ್ತಲೇ ಇದೆ.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಇದುವರೆಗೆ ಬರೋಬ್ಬರಿ 5 ಜಾಹೀರಾತುಗಳನ್ನು ಹೊರತಂದಿರುವ ಬಜಾಜ್ ಸಂಸ್ಥೆಯು ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಡೋಮಿನಾರ್ 400 ಬೈಕ್‌ಗಳ ಮುಂದೆ ಏನು ಅಲ್ಲಾ ಎನ್ನುವಂತೆ ಬಿಂಬಿಸುತ್ತಲೇ ಬಂದಿದೆ.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಆನೆಗೆ ಹೋಲಿಸಿ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಮದ್ದಾನೆ ಹಾಗೆ ಇರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಷ್ಟೇನು ಚುರುತನ ಹೊಂದಿಲ್ಲ ಎಂಬ ಸಂದೇಶವನ್ನು ಬಿತ್ತರಿಸಲಾಗುತ್ತಿದೆ.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಮೊನ್ನೆಯಷ್ಟೇ ಕೂಡಾ ಹೊಸ ಜಾಹೀರಾತು ಒಂದನ್ನು ಬಿಡುಗಡೆ ಮಾಡಿರುವ ಬಜಾಜ್, ರಾಯಲ್ ಎನ್‌ಫೀಲ್ಡ್ ಬೈಕ್ ಬಳಸಲಾಗುವ ಹೆಡ್‌ಲ್ಯಾಂಪ್‌ಗಳ ಕುರಿತಾಗಿ ಅಣಕಿಸಿದ್ದು, ಆರ್‌ಇ ಬೈಕ್‌ಗಳ ಹೆಡ್‌ಲ್ಯಾಂಪ್‌ಗಳನ್ನು ಟಾರ್ಚ್‌ಗೆ ಹೋಲಿಕೆ ಮಾಡಿದೆ.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ವಾಸ್ತವವಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಅನೇಕ ವರ್ಷಗಳಿಂದ ಹಾಲೋಜೆನ್ ವಿನ್ಯಾಸದ ಹೆಡ್‌ಲ್ಯಾಂಪ್‌ ಮಾದರಿಗಳನ್ನೇ ಬಳಕೆ ಮಾಡುತ್ತಿದ್ದು, ಇವು ಸುಧಾರಿತ ಮಾದರಿಯ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂತ ಪ್ರಕಾಶಮಾನದಲ್ಲಿ ಹಿಂದೆ ಬಿದ್ದಿವೆ ಎನ್ನಬಹುದು.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಹೀಗಿದ್ದರೂ ರಾಯಲ್ ಎನ್‌‌ಫೀಲ್ಡ್ ಬೈಕ್‌ಗಳಲ್ಲಿ ತನ್ನದೇ ಆದ ಪರಂಪರೆಯನ್ನು ಉಳಿಸಿಕೊಂಡು ಹಾಲೋಜೆನ್ ಲೈಟ್‌ಗಳನ್ನೇ ಬಳಕೆ ಮಾಡುತ್ತಿದ್ದು, ಅದು ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳಿಗೆ ಹೋಲಿಕೆಯಾಗದ್ದಿರೂ ಒಂದು ಮಟ್ಟಿಗೆ ಉತ್ತಮ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

01. ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

02. ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

03. ಎಎಂಟಿ ಕಾರುಗಳನ್ನು ಚಾಲನೆ ಮಾಡುವ ಮುನ್ನ ಈ ವಿಚಾರಗಳು ಗೊತ್ತಿರಲಿ...

04. ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಇದನ್ನೆ ಗುರಿಯಾಗಿ ಡೋಮಿನಾರ್ 400 ಬೈಕ್ ಸಾಮರ್ಥ್ಯವನ್ನು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಂತ ಒಂದು ಪಟ್ಟು ಹೆಚ್ಚು ಎನ್ನುತ್ತಿರುವ ಬಜಾಜ್, ಆರ್‌ಇ ಬೈಕ್ ಮಾಲೀಕರನ್ನು ತನ್ನತ್ತ ಸೆಳೆಯುವ ತಂತ್ರ ನಡೆಸಿದೆ.

ಈ ಹಿಂದಿನ ಜಾಹೀರಾತುಗಳಲ್ಲೂ ಸಹ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಕಾಲೆಳೆಯುತ್ತಲೇ ಬಂದಿರುವ ಬಜಾಜ್, ಆರ್‌ಇ ಬೈಕ್‌ಗಳ ಆಪ್ ರೋಡ್ ಸಾಮರ್ಥ್ಯ, ಎಂಜಿನ್ ಕಂಟ್ರೋಲ್ ಮತ್ತು ಎಬಿಎಸ್ ಬಗ್ಗೆ ಅಣಕಿಸುತ್ತಲೇ ಬಂದಿದೆ.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಇನ್ನು ಮಾರುಕಟ್ಟೆಯಲ್ಲಿ ಡೋಮಿನಾರ್ 400 ಬೈಕ್‌ಗಳು ಅಷ್ಟೇನು ಉತ್ತಮ ಮಾರಾಟ ಹೊಂದಿಲ್ಲವಾದರೂ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳಿಗೆ ಜಾಹೀರಾತು ಮೂಲಕ ಟಾಂಗ್ ನೀಡುತ್ತಲೇ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಕ್ಕೆ ಕಾರಣವಾಗಿದೆ.

'ಹಾಥಿ ಮತ್ ಪಾಲೊ' ಜಾಹೀರಾತು ಮೂಲಕ ಆರ್‌ಇ ಬೈಕ್‌ಗಳಿಗೆ ಟಾಂಗ್ ಕೊಟ್ಟ ಬಜಾಜ್

ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಡೋಮಿನಾರ್ 400 ಬೈಕ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 1.42 ಲಕ್ಷಕ್ಕೆ ಲಭ್ಯವಿದ್ದು, ಅತ್ಯುತ್ತಮ ಗುಣಲಕ್ಷಣಗಳೊಂದಿಗೆ 373 ಸಿಸಿ ಎಂಜಿನ್ ಹೊಂದಿದ್ದು, 35-ಬಿಎಚ್‌ಪಿ ಮತ್ತು 35-ಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಬಜಾಜ್ ಜಾಹೀರಾತು ಬಗ್ಗೆ ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಡೋಮಿನಾರ್ 400 ಬೈಕಿನ ಜಾಹೀರಾತು ಮೂಲಕ ಬಜಾಜ್ ಸಂಸ್ಥೆಯು ರಾಯಲ್ ಎನ್‌ಫೀಲ್ಡ್‌ನ ಕಾಲೆಳೆಯುವ ತಂತ್ರ ಅನುಸರಿಸುತ್ತಲೇ ಇದೆ. ಆದ್ರೆ ಇದು ಒಂದು ರೀತಿಯ ಆರೋಗ್ಯಕರ ಬೆಳವಣಿಗೆಯೇ ಎನ್ನಬಹುದಾಗಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಈಗಲಾದರೂ ಗುರುತರ ಬದಲಾವಣೆಯತ್ತ ಹೆಜ್ಜೆಹಾಕಬೇಕು ಎನ್ನುವುದು ಬಹುತೇಕ ಕ್ಲಾಸಿಕ್ ಬೈಕ್ ಪ್ರಿಯರ ಅಭಿಪ್ರಾಯವಾಗಿದೆ.

Read more on bajaj royal enfield
English summary
Bajaj Is Back With The 'Haathi Mat Paalo' Ads; Makes Mockery Of Royal Enfield.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark