ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಕೇಂದ್ರ ಸರ್ಕಾರದ ಆದೇಶದಂತೆ ಏಪ್ರಿಲ್ 2019ರ ನಂತರ ಬಿಡಗಡೆಗೊಳ್ಳುವ 150ಸಿಸಿಗಿಂತಾ ಮೇಲಿರುವ ಎಲ್ಲಾ ದ್ವಿಚಕ್ರ ವಾಹನಗಳು ಖಡ್ಡಾಯವಾಗಿ ಎಬಿಎಸ್ ಟೆಕ್ನಾಲಜಿಯನ್ನು ಹೊಂದಿರಲೆಬೇಕೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ತಮ್ಮ 150ಸಿಸಿ ಮೇಲಿರುವ ವಾಹನಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿವೆ.

ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಇದೀಗ ದೇಶಿಯ ಬಜಾಜ್ ಆಟೋ ಸಂಸ್ಥೆ ಕೂಡಾ ತಮ್ಮ ಹೊಸ ವಾಹನಗಳಿಗೆ ಎಬಿಎಸ್ ಅನ್ನು ಅಳವಡಿಸಲು ಮುಂದಾಗಿದ್ದು, ಜನಪ್ರಿಯ ಪಲ್ಸರ್ 220ಎಫ್ ಬೈಕಿಗೆ ಕೂಡಾ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿದೆ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಎಬಿಎಸ್ ಪ್ರೇರಿತ ಪಲ್ಸರ್ 220 ಎಫ್ ಬೈಕ್ ಹಲವಾದು ಬದಲಾವಣೆಗಳ ಪಡೆದುಕೊಂಡಿದೆ.

ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಅಪ್ಡೇಟೆಡ್ ಪಲ್ಸರ್ 220ಎಫ್ ಬೈಕ್ ಹೊಸದಾಗಿ ಪಲ್ಸರ್ ಆರ್‍ಎಸ್200 ಮತ್ತು ಎನ್ಎಸ್200 ಬೈಕ್‍‍ಗಳಲ್ಲಿ ಅಳವಡಿಸಲಾದ ಸಿಂಗಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಇದಲ್ಲದೇ ಹಿಂಭಾಗದ ಚಕ್ರವನ್ನು ಎತ್ತಿ ಹಿಡಿಯದಂತೆ ತಡೆಯಲು ಚಕ್ರದ ವೇಗವನ್ನು ಅಳೆಯಲು ಹಿಂಭಾಗದ ಡಿಸ್ಕ್ ಬ್ರೇಕ್ನಲ್ಲಿ ಎಬಿಎಸ್ ಉಂಗುರವನ್ನು ಸಹ ಬೈಕ್ ಪಡೆಯುತ್ತದೆ.

ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಸಿಂಗಲ್ ಚಾನಲ್ ಎಬಿಎಸ್ ಅನ್ನು ಹೊರತುಪಡಿಸಿ ಹೊಸ ಪಲ್ಸರ್ 220ಎಫ್ ಬೈಕ್ ಈ ಬಾರಿ ಅಪ್ಡೇಟೆಡ್ ಬಾಡಿ ಗ್ರಾಫಿಕ್ಸ್ ಮತ್ತು ಹೊಸ ಎಂಜಿನ್ ಬೆಲ್ಲಿ ಪ್ಯಾನ್ ಅನ್ನು ಪಡೆದುಕೊಂಡಿರಲಿದೆ. ಜೊತೆಗೆ ಎಂಜಿನ್ ಕೌಲ್ ಅನ್ನು ಅಳವಡಿಸಿರುವ ಕಾರಣ ಇದು ಬೈಕಿನ ಲುಕ್ ಅನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಎಂಜಿನ್ ಸಾಮರ್ಥ್ಯ

ನವೀಕರಿಸಲಾದ ಬಜಾಜ್ ಪಲ್ಸರ್ 220ಎಫ್ ಬೈಕ್ 220ಸಿಸಿ ಸಿಂಗಲ್-ಸಿಲೆಂಡರ್, ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 20.6ಬಿಹೆಚ್‍ಪಿ ಮತ್ತು 18.55ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಎಬಿಎಸ್ ಅನ್ನು ಅಳವಡಿಸಿದ ನಂತರ ಬಜಾಜ್ ಪಲ್ಸರ್ 220ಎಫ್ ಬೈಕ್ ಸಾಧಾರಣ ಬೈಕ್‍‍ಗಿಂತಾ ಸುಮಾರು 2 ರಿಂದ 3ಕಿಜಿ ತೂಕ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ಬಜಾಜ್ ಪಲ್ಸರ್ 220ಎಫ್ ಬೈಕ್ ಮುಂಭಾಗದಲ್ಲಿ ಟೆಸ್ಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5 ಸ್ಟೆಪ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್‍‍ಗಳನ್ನು ನೀಡಲಾಗಿದೆ.

ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಬಜಾಜ್ ಪಲ್ಸರ್ 220ಎಫ್ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ವಿಶೇಷವಾಗಿ ಮುಂಭಾಗದ ವ್ಹೀಲ್‍‍ಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಒದಗಿಸಲಾಗಿದೆ. ಇದನ್ನು ಹೊರತು ಪಡಿಸಿ ಬೇರಾವ ಬದಲಾವಣೆಯನ್ನು ಈ ಬೈಕ್ ಪಡೆದಿರುವುದಿಲ್ಲ.

ಎಬಿಎಸ್ ಟೆಕ್ನಾಲಜಿಯನ್ನು ಪಡೆಯಲಿದೆ ಬಜಾಜ್ ಪಲ್ಸರ್ 220ಎಫ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಆಟೋ ಸಂಸ್ಥೆಯು ಅಪ್ಡೇಟೆಡ್ ಪಲ್ಸರ್ ಬೈಕ್‍‍ಗಳನ್ನು ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆದಿಕೊಳ್ಳುತ್ತಿದ್ದು, ಎಬಿಎಸ್ ಟೆಕ್ನಾಲಜಿಯನ್ನು ಪಡೆದ ಪಲ್ಸರ್ 220ಎಫ್ ಬೈಕ್ ಶೀಘ್ರವೇ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಎಬಿಎಸ್ ಅನ್ನು ಪಡೆದ ಹೊಸ ಪಲ್ಸರ್ 220ಎಫ್ ಬೈಕ್‍‍ಗಳು ಸಾಧಾರಣ ಬೈಕ್‍ನ ಬೆಲೆಗಿಂತ ಸುಮಾರು 10,000 ರಿಂದ 12,000 ಸಾವಿರ ಹೆಚ್ಚಿರಬಹುದೆಂದು ಊಹಿಸಲಾಗಿದೆ.

Most Read Articles

Kannada
Read more on bajaj auto pulsar
English summary
Bajaj Pulsar 220F To Be Introduced With ABS
Story first published: Thursday, September 27, 2018, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X