ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಜನಪ್ರಿಯ ಬೈಕ್ ಸಿಯಾದ ಪಲ್ಸರ್‍‍ನ ಕ್ಲಾಸಿಕ್ 150 ಮಾದರಿಯನ್ನು ಬಿಡುಗಡೆಗೊಳಿಸಿದೆ.

By Rahul Ts

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಜನಪ್ರಿಯ ಬೈಕ್ ಸಿಯಾದ ಪಲ್ಸರ್‍‍ನ ಕ್ಲಾಸಿಕ್ 150 ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 67,437 ಸಾವಿರಕ್ಕೆ ನಿಗದಿಪಡಿಸಲಾಗಿದ್ದು, ಪಲ್ಸರ್ 150 ವೇರಿಯಂಟ್ ಬೈಕ್‍‍ಗಿಂತ ಕಡಿಮೆ ಬೆಲೆಗೆ ದೊರೆಯುತ್ತಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ಪಲ್ಸರ್ ಕ್ಲಾಸಿಕ್ 150 ಬೈಕ್ ಪಲ್ಸರ್ 150 ಬೈಕ್ ಅನ್ನು ಆಧರಿಸಿದ್ದು, ಗ್ರಾಫಿಕ್ಸ್, ರಿಯರ್ ಡಿಸ್ಕ್ ಬ್ರೇಕ್, ಸ್ಪ್ಲಿಟ್ ಸೀಟ್ ಮತ್ತು ಟ್ಯಾಕ್ ಎಕ್ಸ್ ಟೆನ್ಷನ್ ಅನ್ನು ಕಳೆದುಕೊಂಡಿದ್ದು, ಪಲ್ಸರ್ 150 ಬೈಕ್‍‍ಗಿಂತ ರೂ. 10,118 ಸಾವಿರ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ಹೊಸ ಪಲ್ಸರ್ ಕ್ಲಾಸಿಕ್ 150 ಬೈಕ್ ಪ್ರಸ್ಥುತ ಮಹಾರಾಷ್ಟ್ರದಲ್ಲಿ ಮಾತ್ರ ಬಿಡುಗಡೆಗೊಂಡಿದ್ದು, ಈ ಕುರಿತಾಗಿ ಕುರಿತಾಗಿ ಬಜಾಜ್ ಸಂಸ್ಥೆಯು ತಮ್ಮ ವೆಬ್‍‍ಸೈಟ್‍‍ನಲ್ಲಿ ಪ್ರಕಟಣೆ ಮಾಡಲಿಲ್ಲವಾದರೂ, ಈಗಾಗಲೆ ಡೀಲರ್‍‍ಗಳ ಬಳಿ ಕಾಣಿಸಿಕೊಂಡಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಂಡ ಪಲ್ಸರ್ ಕ್ಲಾಸಿಕ್ 150 ಬೈಕ್149ಸಿಸಿ, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14ಬಿಹೆಚ್‍‍ಪಿ ಮತ್ತು 13.4 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ಪ್ರಯಾಣಿಕರ ಸುರಕ್ಷತೆಗಾಗಿ ಈ ಪಲ್ಸರ್ ಕ್ಲಾಸಿಕ್ 150 ಬೈಕ್‍‍ನ ಮುಂಭಾಗದಲ್ಲಿ 240ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು 130ಎಮ್ಎಮ್ ಡ್ರಮ್ ಬ್ರೇಕ್ ಅನ್ನು ಹಿಂಭಾಗದಲ್ಲಿ ಪಡೆದಿದ್ದು, ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ಇನ್ನು ಸಸ್ಪೆಂಶನ್ ವಿಚಾರದಲ್ಲಿ ಪಲ್ಸರ್ ಕ್ಲಾಸಿಕ್ 150 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಗ್ಯಾಸ್ ಚಾರ್ಜ್ಡ್ ಟ್ವಿನ್ ರೀಯರ್ ಶಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ಪಲ್ಸರ್ 150 ಬೈಕ್‍‍ನಂತೆಯೆ ಕ್ಲಾಸಿಕ್ 150 ಬೈಕ್ ಕೂಡಾ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿಲ್ಲವದದ್ದು, ಕೇಂದ್ರ ಸರ್ಕಾರದ ಆದೇಶದಂತೆ 2019 ಏಪ್ರಿಲ್‍‍ನಿಂದ ಜಾರಿಗೆ ಬರಲಿರುವ ಹೊಸದಾಗಿ ಬಿಡುಗಡೆಗೊಳ್ಳುವ ಎಲ್ಲಾ ಬೈಕ್‍‍ಗಳು ಕನಿಷ್ಠ ಸಿಂಗಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಬೇಕಾಗಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್..

ಪ್ರಸ್ಥುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 150ಸಿಸಿ ಬೈಕ್‍‍ಗಳ ಸರಣಿಯಲ್ಲಿ ಪಲ್ಸರ್ ಕ್ಲಾಸಿಕ್ 150 ಕಡಿಮೆ ಬೆಲೆಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಹೀರೋ ಅಚೀವರ್ ಮತ್ತು ಹೋಂಡಾ ಉನಿಕಾರ್ನ್ ಬೈಕ್‍‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
English summary
Bajaj pulsar classic150 launched.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X