ಬೆಂಗಳೂರು ಆಯ್ತು ಈಗ ಕುಂದಾಪುರದಲ್ಲೂ ಮಾಡಿಫೈ ಸೈಲೆನ್ಸರ್ ಕಿರಿಕಿರಿ..

ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಈಗಾಗಲೇ ಸಾವಿರಾರು ಪ್ರಕರಣ ದಾಖಲಿಸಿ ಕಠಿಣಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಹಲವರಿಗೆ ತಿಳಿದಿರುವ ಸಂಗತಿ. ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಬೈಕ್ ಎಕ್ಸಾಸ್ಟ್ ಮಾಡಿಫೈ ಮಾಡಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಈ ಬಿಸಿ ಇದೀಗ ಕುಂದಾಪುರದಲ್ಲಿಯು ತಟ್ಟಿದ್ದು, ಅಲ್ಲಿನ ಪೊಲೀಸರು ರಾಯಲ್ ಎನ್‍ಫೀಲ್ಡ್ ಬೈಕ್ ಎಕ್ಸಾಸ್ಟ್ ಅನ್ನು ಮಾಡಿಫೈ ಮಾಡಿದವರನ್ನು ಪೊಲೀಸ್ ಠಾಣೆಯಲ್ಲಿ ಇರಿಸಿ ಮತ್ತೊಮ್ಮೆ ಹೀಗೆ ಮಾಡದಿರಲು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಹಳ್ಳಿಗಳ ಕಡೆಗೆಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಂದ್ರೆ ಸಾಕು 1 ಕಿ.ಮಿ ದೂರವಿರುವಾಗಲೇ ಬೈಕ್ ಬರುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ಬೈಕ್‌ಗಳ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಎಕ್ಸಾಸ್ಟ್ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

ಆದ್ರೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೆ ಬದಲಿಸುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

ಇದರಿಂದ ಬೈಕ್ ಸವಾರನಿಗೆ ಹೆಚ್ಚಿನ ಅನುಕೂಲಕತೆಗಳಿದ್ದರು ಅದು ಸಾರ್ವಜನಿಕ ಜೀವನದಲ್ಲಿ ಹೆಚ್ಚು ಸಮಸ್ಯೆಗಳನ್ನು ಉದ್ಭವವಾಗುವಂತೆ ಮಾಡುತ್ತಿದೆ. ಜೊತೆಗೆ ಬೈಕ್‌ಗಳ ಎಕ್ಸಾಸ್ಟ್ ಬದಲಾವಣೆಯಿಂದಾಗಿ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಎಡೆಮಾಡುಕೊಡುತ್ತಿದೆ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

ಕುಂದಾಪುರದ ಪೊಲೀಸ್ ಅಧಿಕಾರಿ ಒಬ್ಬರು ಅಲ್ಲಿನ ಸ್ಥಳೀಯ ಯುವಕರು ಮಾಡಿಫೈಡ್ ಎಕ್ಸಾಸ್ಟ್ ಹಾಕಲಾದ ನಾಲ್ಕು ರಾಯಲ್ ಎನ್‍‍ಫೀಲ್ಡ್ ಬೈಕ್‍ಗಳನ್ನು ತಮ್ಮ ಇಲಾಖೆಯಲ್ಲಿನ ಪೊಲೀಸ್ ಠಾಣೆಗೆ ಕರೆ ತಂದು ಅಲ್ಲಿಯೆ ಎಲ್ಲರ ಸಮುಖದಲ್ಲಿ ಮತ್ತೊಮ್ಮೆ ತಮ್ಮ ಮಾಡಿಫೈಡ್ ಎಕ್ಸಾಸ್ಟ್ ಇಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಹೇಳಿದ್ದಾರೆ.

ತಂದ ಅಷ್ಟೂ ಬೈಕ್‍ಗಳಿಗೆ ಅಳವಡಿಸಲಾದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ಸ್ಥಳದಲ್ಲಿಯೆ ಅವುಗಳನ್ನು ಬದಲಾಯಿಸಿಕೊಂಡು ಹೋಗುವುದಾಗಿ ಹಾಗು ಮತ್ತೊಮ್ಮೊ ಹೇಗೆ ಮಾಡದಿರುವ ಹಾಗೆ ವಾರ್ನ್ ಮಾಡುತ್ತಿರುವ ದೃಶ್ಯವನ್ನು ಈ ವಿಡಿಯೋನಲ್ಲಿ ನೀವು ಕಾಣಬಹುದಾಗಿದೆ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

'ಇದು ನಿಮ್ಮನ್ನು ಅವಮಾನ ಮಾಡಲು ನಾವು ಮಾಡಿದ್ದಲ್ಲಾ, ನಾವು ಸ್ಟೀಂಗ್ ಆಪರೇಷನ್ ಮಾಡಲು ಮುಂದಾದ ಮೊದಲನೆಯ ದಿನವಾದುದರಿಂದ ಮರಿಯಾದೆಯಿಂದ ವಾರ್ನ್ ಮಾಡಿ ಇಲ್ಲಿಯೆ ಸೈಲೆನ್ಸರ್ ಅನ್ನು ಬದಲಾಯಿದಿ ಕಳುಹಿಸುತ್ತಿದ್ದೇವೆ. ಮತ್ತೊಮ್ಮೆ ಹೀಗೆ ಆದಲ್ಲಿ ಖಚಿತವಾಗಿಯು ನಿಮ್ಮ ಬೈಕ್ ಅನ್ನು ಸೀಜ್ ಮಾಡುತ್ತೇವೆ' ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

ಒಂದು ವೇಳೆ ನೀವು ಕೂಡಾ ರಾಯಲ್ ಬೈಕ್ ಅಥವಾ ಇತರೆ ಸೂಪರ್ ಬೈಕ್‌ಗಳನ್ನು ಹೊಂದಿದ್ದರೆ ಕಾನೂನು ಬಾಹಿರ ಬೈಕ್ ಮಾಡಿಫೈ ಮಾಡಿಸುವ ಮತ್ತೊಮ್ಮೆ ಯೋಚಿಸಿ. ಇಲ್ಲವಾದ್ರೆ ಭಾರೀ ಪ್ರಮಾಣದ ದಂಡ ಬೀಳುವುದಲ್ಲದೇ ಬೈಕ್ ಕೂಡಾ ಸೀಜ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರು ಆಯ್ತು ಈಗ ಕುಂದಾಪುರಕ್ಕು ತಟ್ಟಿದ ಮಾಡಿಫೈ ಸೈಲೆಂಸರ್‍‍ಗಳ ಕಿರಿಕಿರಿ..

ಪ್ರಯಾಣಿಸಲು ಲಕ್ಷ ಕೊಟ್ಟು ವಾಹನ ಖರೀದಿ ಮಾಡೋದು ಓಕೆ. ಆದ್ರೆ ಇನ್ನು ಸ್ವಲ್ಪ ಖರ್ಚು ಮಾಡಿ ಕರ್ಕಷವಾದ ಸೈಲೆಂಸರ್‍‍ಗಳನ್ನು ಸಿಕ್ಕಿಸಿಕೊಂಡು, ಮುಂದೊಂದು ದಿನ ಪೊಲೀಸರ ಕೈಗೆ ಸಿಕ್ಕಿ ದಂಡ ಪಾವತಿಸುವುದು ಯಾಕೆ.?

Most Read Articles

Kannada
English summary
Cops SEIZE Royal Enfield motorcycles: Make owners replace modified exhausts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X