ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

Written By: Rahul TS

ಕಳೆದ ತಿಂಗಳಷ್ಟೇ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಆಧುನಿಕ ತಂತ್ರಜ್ಞಾನಗಳ ಪ್ರೇರಿತ ಹೋಂಡಾ ಆಕ್ಪಿವಾ 5ಜಿ ಸ್ಕೂಟರ್‌ಗಳು ಇದೀಗ ಭರ್ಜರಿಯಾಗಿ ಬಿಡುಗಡೆಗೊಂಡಿದ್ದು, ಹಲವು ಸ್ಕೂಟರ್ ಮಾದರಿಗಳಿಗೆ ತೀವ್ರ ಸ್ಪರ್ಧಿ ಒಡ್ಡುವ ತವಕದಲ್ಲಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಹೋಂಡಾ ಆಕ್ಟಿವಾ ಭಾರತದ ಸ್ಕೂಟರ್ ಸರಣಿಗಳು ಈಗಾಗಲೇ ಮಾರಾಟದಲ್ಲಿ ದಾಖಲೆ ಕಂಡಿದ್ದು, ಇದೀಗ ಆಕ್ಟಿವಾ 5ಜಿ ಸ್ಕೂಟರ್ ಸಹ ಬಿಡುಗಡೆಗೊಳಿಸಲಾಗಿದ. ಆದರೆ ಈ ಸ್ಕೂಟರಿಗೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಯನ್ನು ನೀಡುತ್ತಿರುವ ಟಿವಿಎಸ್ ಜೂಪಿಟರ್ ಸ್ಕೂಟರ್ ಕೂಡಾ ಅಷ್ಟೇ ಜನಪ್ರಿಯತೆಯನ್ನು ಪಡೆಯುತ್ತಿದ್ದು, ಈ ಹಿನ್ನೆಲೆ ಗ್ರಾಹಕರ ಆಯ್ಕೆಗೆ ಯಾವುದು ಉತ್ತಮ ಎನ್ನುವ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ವಿನ್ಯಾಸಗಳು

ಆಕ್ಟಿವಾ 5ಜಿ ಸ್ಕೂಟರಿನ ಒಟ್ಟಾರೆ ವಿನ್ಯಾಸವು 4ಜಿ ಸ್ಕೂಟರಿನ ಹೋಲಿಕೆಯಿದ್ದು, ಹೊಸದಾಗಿ ನೀಡಲಾಗಿರುವ ಫುಲ್ ಎಲ್ಇಡಿ ಹೆಡ್‍ಲೈಟ್‍ನೊಂದಿಗೆ ಡಿಆರ್‍ಎಲ್ ಮತ್ತು ಕ್ರೋಮ್ ಗಾರ್ನಿಶ್ ಅನ್ನು ಪಡೆದಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಮತ್ತೊಂದು ಕಡೆ 5ಜಿ ಸ್ಕೂಟರ್‌ಗಳು ತನ್ನ 5ಜಿ ಬ್ಯಾಡ್ಜಿಂಗ್ ಹೊರತು ಪಡಿಸಿ, ಹಿಂಭಾಗ ಮತ್ತು ಇನ್ನಿತರೆ ವಿನ್ಯಾಸವನ್ನು ಆಕ್ಟಿವಾ 4ಜಿ ಸ್ಕೂಟರ್‍ ಮಾದರಿಯ ವಿನ್ಯಾಸಗಳನ್ನು ಹೊರತು ಪಡಿಸಿ ಬೇರಾವ ಹೊಸ ನವೀಕರಣಗಳನ್ನು ಪಡೆದಿಲ್ಲಾ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಇನ್ನು ಟಿವಿಎಸ್ ಜೂಪಿಟರ್ ಕೂಡಾ ಸಾಧರಣ ಲುಕ್ ಮತ್ತು ಪ್ರಬುದ್ಧವಾದ ವಿನ್ಯಾಸವನ್ನು ಪಡೆದಿದೆ. ಇನ್ನು ಸ್ಕೂಟರ್ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿರುವ ಹೆಡ್‍ಲ್ಯಾಂಪ್, ಏಪ್ರಾನ್ ಮೌನ್ಟೆಡ್ ಟರ್ನ್ ಇಂಡಿಕೇಟರ್‍‍ಗಳನ್ನು ಪಡೆದಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಜೂಪಿಟರ್ ಸ್ಕೂಟರಿನ ಸೈಡ್ ಪ್ರೊಫೈಲ್ ಸೈಡ್‍ಗಳಲ್ಲಿ ಜೂಪಿಟರ್ ಬ್ರಾಂಡಿಂಗ್ ಮತ್ತು ಎಕ್ಸಾಸ್ಟ್ ಮಫ್ಲರ್‍‍ಗಳಿಗಾಗಿ ಕ್ರೋಮ್ ಕವರ್‍ ಅನ್ನು ನೀಡಲಾಗಿದೆ. ಇದರ ರಿಯರ್ ಭಾಗವು ಎಕ್ಸ್ ಟರ್ನಲ್ ಫ್ಯುಯಲ್ ಫಿಲ್ಲರ್ ಕ್ಯಾಪ್ ಮತ್ತು ಸಾಧಾರಣ ಟೈಲ್ ಲ್ಯಾಂಪ್ ಕ್ಲಸ್ಟರ್ ಅನ್ನು ಪಡಿದಿದೆ. ವಿನ್ಯಾಸದ ವಿಚಾರಕ್ಕೆ ಬಂದರೆ ಎರಡೂ ಸ್ಕೂಟರ್‍‍ಗಳು ಸಮಾನವಾದ ಡಿಸೈನ್ ಅನ್ನು ಪಡೆದಿವೆ ಎನ್ನಬಹುದು.

ಒಟ್ಟಾರೆ ವಿನ್ಯಾಸದ ರೇಟಿಂಗ್

ಹೋಂಡಾ ಆಕ್ಟಿವಾ 5ಜಿ - 8/10

ಟಿವಿಎಸ್ ಜೂಪಿಟರ್ - 8/10

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ವೈಶಿಷ್ಟ್ಯತೆಗಳು

ಹೊಸ ಹೊಂಡಾ ಆಕ್ಟಿವಾ 5ಜಿ ಸರ್ವಿಸ್ ಇಂಟರ್ವಲ್ಸ್ ಮತ್ತು ಇಕೋ ಸ್ಪೀಡ್ ಸೂಚಿಸಿವ ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್‍ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು 4 ಇನ್ 1 ಲಾಕ್ ಸಿಸ್ಟಂ ಅನ್ನು ಪಡಿದಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಇದರ ಜೊತೆಗೆ ಈ ಸ್ಕೂಟರ್ ಮುಂಭಾಗದಲ್ಲಿ ಹೊಸ ಶಾಪಿಂಗ್ ಹುಕ್ಸ್ ಮತ್ತು ಹಿಂಭಾಗದಲ್ಲಿ ಫ್ರಂಟ್ ಫ್ಲೋರ್‍‍ಬೋರ್ಡ್ ಏರಿಯಾ ಮತ್ತು ಸೀಟ್ ರಿಲೀಸ್ ಬಟನ್ ಅನ್ನು ಪಡೆದಿದ್ದು, ಆಕ್ಟಿವಾ 4ಜಿ ಸ್ಕೂಟರ್ ನಲ್ಲಿ ಇದ್ದ ಫೋನ್ ಚಾರ್ಜಿಂಗ್ ಪಾಯಿಂಟ್ ಇದರಲ್ಲಿ ತೆಗೆದುಹಾಕಲಾಗಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಟಿವಿಎಸ್ ಕೂಡ ಟ್ವಿನ್ ಪಿಲೋಟ್ ಲ್ಯಾಂಪ್ಸ್, ಎಲ್ಎಡಿ ಟೈಲ್ ಲೈಟ್, ರೆಟ್ರ್ಯಾಟಬಲ್ (ಹಿಂತೆಗೆದುಕೊಳ್ಳುವ) ಬ್ಯಾಗ್ ಹುಕ್ಸ್, ಎಕ್ಸ್ಟರ್ನಲ್ ಫ್ಯುಯಲ್ ಫಿಲ್ಲರ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಸೀಟ್‍‍ನ ಕೆಳಾಭಾಗದಲ್ಲಿ ವಿಶಾಲವಾದ ಸ್ಟೋರೆಜ್, ಅಲಾಯ್ ಚಕ್ರಗಳು ಮತ್ತು ಡುಯಲ್ ಸೈಲ್ ಹ್ಯಾಂಡಲ್ ಲಾಕ್ ಅನ್ನು ಪಡೆದಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಆದ್ರೆ ಟಿವಿಎಸ್ ಜೂಪಿಟರ್ ಎಲ್ಲಾ ವೈಶಿಷ್ಟ್ಯತೆಗಳನ್ನು ಪಡೆದಿದ್ದರೂ, ಎಲ್ಇ ಡಿ ಹೆಡ್‍ಲೈಟ್ ಅನ್ನು ಪಡೆದಿಲ್ಲಾವಾದರೂ ಎಕ್ಸ್ಟರ್ನಲ್ ಫ್ಯುಯಲ್ ಫಿಲ್ಲರ್ ಅನ್ನು ಪಡೆದಿದೆ.

ಒಟ್ಟಾರೆ ವೈಶಿಷ್ಟ್ಯತೆಗಳ ರೇಟಿಂಗ್

ಹೋಂಡಾ ಆಕ್ಟಿವಾ 5ಜಿ - 8/10

ಟಿವಿಎಸ್ ಜೂಪಿಟರ್ - 7.5/10

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಆದರೆ ಟಿವಿಎಸ್ ಜೂಪಿಟರ್ ಕೂಡ ಹೋಂಡಾದ ಸಿಬಿಎಸ್ ನಂತೆಯೇ ಕಾರ್ಯವಿವಹಿಸಬಲ್ಲ ಸಿಂಕ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದಿದ್ದು, ಇದರ ಮುಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಆಯ್ಕೆ ರೂಪದಲ್ಲಿ ಕೊಡಲಾಗುತ್ತಿದೆ.

ಒಟ್ಟಾರೆ ಸುರಕ್ಷತೆಯ ರೇಟಿಂಗ್

ಹೋಂಡಾ ಆಕ್ಟಿವಾ 5ಜಿ - 7/10

ಟಿವಿಎಸ್ ಜೂಪಿಟರ್ - 8/10

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಎಂಜಿನ್, ಗೇರ್‍‍ಬಾಕ್ಸ್ ಮತ್ತು ಮೈಲೇಜ್

ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳು 109.19ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8 ಬಿಹೆಚ್‍ಪಿ ಮತ್ತು 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲವು. ಜೊತೆಗೆ ಸಿವಿಟಿ ಗೇರ್‍‍ಬಾಕ್ಸ್‌ನೊಂದಿಗೆ ಪ್ರತೀ ಲೀಟರ್ ಗೆ 60 ಕಿಲೋಮೀಟರ್ ಮೈಲೇಜ್ ಹಿಂದಿರುಗಿಸಬಲ್ಲವು.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಹಾಗೆಯೇ ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳು ಸಹ 109.7ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 7.8 ಬಿಹೆಚ್‍ಪಿ ಮತ್ತು 8 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನೂ ಸಹ ಸಿವಿಟಿ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ. ಈ ಮೂಲಕ ಪ್ರತೀ ಲೀಟರ್ ಗೆ 62 ಕಿಲೋಮೀಟರ್ ಮೈಲೇಜ್ ನೀಡಬಲ್ಲವು.

ಎಂಜಿನ್ ಸಾಮರ್ಥ್ಯದ ರೇಟಿಂಗ್

ಹೋಂಡಾ ಆಕ್ಟಿವಾ 5ಜಿ - 7/10

ಟಿವಿಎಸ್ ಜೂಪಿಟರ್ - 8/10

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಸ್ಕೂಟರ್‍‍ಗಳ ಬೆಲೆ

ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ಸ್ಟ್ಯಾಂಡರ್ಡ್ ಮಾಡೆಲ್ ರೂ. 54,460ಕ್ಕೆ ಮತ್ತು ಡಿಎಲ್ಎಕ್ಸ್ ವೇರಿಯೆಂಟ್‌ಗಳು ರೂ.54,325ಕ್ಕೆ ಲಭ್ಯವಿರಲಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಟಿವಿಎಸ್ ಜೂಪಿಟರ್ ಸಹ ದೆಹಲಿಯ ಎಕ್ಸ್ ಶೋರಂ ಪ್ರಕಾರ ಬೇಸ್ ವೇರಿಯಂಟ್‌ಗಳು ರೂ.49,966ಕ್ಕೆ ಮತ್ತು ಜೆಡ್ಎಕ್ಸ್ ಡಿಸ್ಕ್ ವೇರಿಯೆಂಟ್‌ಗಳು ರೂ.55,066 ಸಾವಿರಕ್ಕೆ ಖರೀದಿಸಬಹುದಾಗಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಹೋಂಡಾ ಆಕ್ಟಿವಾ ಮತ್ತು ಟಿವಿಎಸ್ ಜೂಪಿಟರ್ ಎರಡೂ ಸ್ಕೂಟರ್‍‍ಗಳು ಸಹ ಮಾರುಕಟ್ಟೆಯಲ್ಲಿ ತಮ್ಮ ಜನಪ್ರಿಯತೆಗೆ ಮತ್ತು ಬೇಡಿಕೆಗೆ ತಕ್ಕಂತೆ ವಿನ್ಯಾಸಗೊಂಡಿದ್ದು, 5ಜಿ ಸ್ಕೂಟರ್ ಮಾತ್ರ ಹೊಸದಾಗಿ ಎಲ್ಇಡಿ ಲೈಟ್ ಅನ್ನು ಪಡೆದಿರುವುದು ಗಮನಾರ್ಹವಾಗಿದೆ.

ಹೊಂಡಾ ಆಕ್ಟಿವಾ 5ಜಿ V/S ಟಿವಿಎಸ್ ಜೂಪಿಟರ್... ಇವುಗಳಲ್ಲಿ ಯಾವುದು ಬೆಸ್ಟ್.?

ಬೆಲೆಯಲ್ಲಿಯೂ ಕೂಡ ಎರಡೂ ಸ್ಕೂಟರ್‍‍ಗಳು ಒಂದೇ ಹಂತದಲ್ಲಿದ್ದು, ಹೆಚ್ಚಿನ ವೈಶಿಷ್ಟ್ಯತೆಯನ್ನು ಪಡೆದ ಆಕ್ಟಿವಾ 5ಜಿ ಸ್ಕೂಟರ್ ಖರೀದಿಗೆ ಒಳ್ಳೆಯ ಆಯ್ಕೆ ಎನ್ನಬಹುದು. ಹಾಗೆಯೇ ನೀವು ಸಿಂಪಲ್ ಡಿಸೈನ್ ಮತ್ತು ಸುರಕ್ಷಾ ಸಾಧನಗಳನ್ನು ನೋಡುವುದಾದರೇ ಟಿವಿಎಸ್ ಜೂಪಿಟರ್ ಕೂಡಾ ಉತ್ತಮ ಆಯ್ಕೆ ಎನ್ನಬಹುದು.

Read more on scooter honda tvs comparison
English summary
Honda Activa 5G Vs. TVS Jupiter Comparison.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark