TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬಿಡುಗಡೆಗೊಂಡ ಅಪ್ಡೇಟೆಡ್ ಎಪ್ರಿಲಿಯಾ ಎಸ್‍ಆರ್ 150 ಸ್ಕೂಟರ್
ಪಿಯಾಜಿಯೊ ಇಂಡಿಯಾ ತಮ್ಮ ಅಪ್ಡೇಟೆಡ್ ಎಪ್ರಿಲಿಯಾ 150 ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೊಂಡ ಈ ಸ್ಕೂಟಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.73,031 ಸಾವಿರದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಹೊಸ ವರ್ಷನ್ ಸ್ಪೋರ್ಟಿ ಸ್ಕೂಟರ್ ಈ ಬಾರಿ ವಿನೂತನ ಬಣ್ಣ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
2019ರ ಹೊಸ ಎಪ್ರಿಲಿಯಾ ಎಸ್‍ಆರ್ 150 ಸ್ಕೂಟರ್ ಒಟ್ಟು ಮೂರು ವೇರಿಯಂಟ್‍ನಲ್ಲಿ ಲಭ್ಯವಿದ್ದು, ಬೇಸ್ ವೇರಿಯಂಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 70,031, ಎಸ್‍ಆರ್ 150 ಕಾರ್ಬನ್ ವೇರಿಯಂಟ್ ರೂ. 73,500 ಮತ್ತು ಎಸ್ಆರ್ 150 ರೇಸ್ ವೇರಿಯಂಟ್‍ನ ಬೆಲೆಯು ರೂ. 80,211 ಸಾವಿರಕ್ಕೆ ನಿಗದಿಪಡಿಸಲಾಗಿದೆ.
ಅಪ್ಡೇಟೆಡ್ ಎಪ್ರಿಲಿಯಾ ಎಸ್‍ಆರ್ 150 ಸ್ಕೂಟರ್‍ಗಳು ಈ ಬಾರಿ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್ಸ್, ಅನಾಲಾಗ್ ಡಿಜಿಟಲ್ ಇಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ ಗಾತ್ರದ ವಿಂಡ್‍ಸ್ಕ್ರೀನ್ ಅನ್ನು ಪಡೆದುಕೊಂಡಿದೆ. ಇವುಗಳನ್ನಲ್ಲದೆ ಈ ಸ್ಕೂಟರ್ ಹೊಸ ನೀಲಿ ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ಪಡೆದುಕೊಂಡಿದೆ.
ಮತ್ತೊಂದು ಕಡೆ 2019ರ ಎಪ್ರಿಲಿಯಾ ಎಸ್‍ಆರ್ 150 ರೇಸ್ ವೇರಿಯಂಟ್ ಸ್ಕೂಟರ್ ಇಟಾಲಿಯನ್ ಫ್ಲ್ಯಾಗ್‍ನಿಂದ ಪ್ರೇರಿತಗೊಂಡ ಹೊಸ ಪೆಯಿಂಟ್ ಸ್ಕೀಮ್ ಅನ್ನು ಪಡೆದುಕೊಂಡಿದೆ. ಈ ಸ್ಕೂಟರ್ ರೆಡ್, ವೈಟ್ ಮತ್ತು ಗ್ರೀನ್ ಸಂಯೋಜನೆ ಹೊಂದಿಯನ್ನು ಹೊಂದಿರುವ ಬಣ್ಣಗಳನ್ನು ಹೊಂದಿದೆ.
ಜೊತೆಗೆ ಅಲಾಯ್ ವ್ಹೀಲ್‍ಗಳನ್ನು ಕೂಡಾ ಕೆಂಪು ಬಣ್ಣದೊಂದಿಗೆ ಸಜ್ಜುಗೊಳಿಸಲಾಗಿದ್ದು, ಎಸ್‍ಆರ್ 150 ಸ್ಕೂಟರ್‍ನ ಬೇಸ್ ವೇರಿಯಂಟ್‍ನಲ್ಲಿ ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾದ ಅಲಾಯ್ ವ್ಹೀಲ್‍ಗಳನ್ನು ನೀಡಲಾಗಿದೆ.
2019ರ ಎಪ್ರಿಲಿಯಾ ಎಸ್‍ಆರ್ 150 ಸ್ಕೂಟರ್‍ಗಳು 158.8ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 10.4 ಬಿಹೆಚ್‍ಪಿ ಮತ್ತು 11.4ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಹೊಸದಾಗಿ ಬಿಡುಗಡೆಗೊಂಡ ಈ ಸ್ಕೂಟರ್‍ಗಳ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‍ಗಳನ್ನು ಒದಗಿಸಲಾಗಿದ್ದು, ಎಬಿಎಸ್ ಅಥವಾ ಕಾಂಬಿ-ಬ್ರೇಕ್ ಸಿಸ್ಟಮ್ ಅನ್ನು ಪಡೆದಿರುವುದಿಲ್ಲ. ಆದರೇ ಭವಿಷ್ಯದ ದಿನಗಳಲ್ಲಿ ಸರ್ಕಾರದ ಹೊಸ ಆದೇಶದಂತೆ ಖಡ್ಡಾಯವಾಗಿ ಎಬಿಎಸ್ ಅನ್ನು ಅಳವಡಿಸಲಿದೆ.
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಪಿಯಾಜಿಯೊ ಇಂಡಿಯಾ ತಮ್ಮ ಅಪ್ಡೇಟೆಡ್ ಎಪ್ರಿಲಿಯಾ ಎಸ್‍ಆರ್ 150 ಸ್ಕೂಟರ್‍ಗಳನ್ನು ಪರಿಚಯಿಸಲಾಗಿದ್ದು, ಹೊಸ ಬಣ್ಣ ಮತ್ತು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೊಗೊಳಿಸಿದೆ. ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಈ ಸ್ಕೂಟರ್‍ಗಳು ಪಡೆದಿರುವುದಿಲ್ಲ. ಸಧ್ಯ ಬಿಡುಗಡೆಗೊಂಡ ಈ ಸ್ಕೂಟರ್‍ಗಳು ಮಾರುಕಟ್ಟೆಯಲ್ಲಿ ವೆಸ್ಪಾ ಎಸ್‍ಎಕ್ಸ್ಎಲ್ 150, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‍ಗಳಿಗೆ ಪೈಪೋಟಿ ನೀಡಲಿದೆ.