2018 ಆಟೋ ಎಕ್ಸ್ ಪೋ: 17 ಹೊಸ ಮಾದರಿಯ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಪ್ರದರ್ಶಿಸಲಿದೆ ಸುಜುಕಿ

By: Rahul TS
Recommended Video - Watch Now!
Ducati 959 Panigale Crashes Into Buffalo - DriveSpark

ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೆಯಾದ ಜನಪ್ರಿಯತೆ ಹೊಂದಿರುವ ಸುಜುಕಿ ಮೊಟಾರ್ ಸೈಕಲ್ ಇಂಡಿಯಾ ಸಂಸ್ಥೆಯು ಇದೇ ತಿಂಗಳು 7ರಿಂದ ನಡೆಯಲಿರುವ 2018ರ ಆಟೊ ಎಕ್ಸ್ ಪೊ ದಲ್ಲಿ ಬಿಡುಗಡೆಯಾಗಲಿರುವ 17 ಹೊಸ ಮಾದರಿಯ ದ್ವಿಚಕ್ರ ವಾಹನಗಳ ಪಟ್ಟಿಯನ್ನು ಪ್ರದರ್ಶಿಸಲಿದೆ.

17 ಹೊಸ ಮಾದರಿಯ ಬೈಕ್‌ಗಳು & ಸ್ಕೂಟರ್‌ಗಳನ್ನು ಪ್ರದರ್ಶಿಸಲಿದೆ ಸುಜುಕಿ

ಇದಲ್ಲದೇ ಸುಜುಕಿ ಮೊಟಾರ್ ಸೈಕಲ್ ಸಂಸ್ಥೆಯು 2018 ಆಟೋ ಎಕ್ಸ್ ಪೋ ದಲ್ಲಿಯೇ ಎರಡು ಹೊಸ ಮಾದರಿಯ ದ್ವಿಚಕ್ರ ವಾಹನಗಳನ್ನು ಪರಿಚಯಿಸುವ ನಿರೀಕ್ಷೆಯಿದ್ದು, ಅವುಗಳಲ್ಲಿ ಸುಜುಕಿ ವಿ-ಸ್ಟ್ರೋಮ್ 650 ಮತ್ತು ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಹೊಸ ನಿರೀಕ್ಷೆ ಹುಟ್ಟುಹಾಕಿವೆ.

17 ಹೊಸ ಮಾದರಿಯ ಬೈಕ್‌ಗಳು & ಸ್ಕೂಟರ್‌ಗಳನ್ನು ಪ್ರದರ್ಶಿಸಲಿದೆ ಸುಜುಕಿ

ಜೊತೆಗೆ ಸುಜುಕಿ ತಂಡವು ತಾವು ಹೊಸದಾಗಿ ಪ್ರಾರಂಭಿಸಿದ ಇಂಟ್ರೂಡರ್ 155 ಕ್ರೂಸರ್ ಫ್ಯೂಲ್ ಇಂಜೆಕ್ಷಡ್ ಮಾದರಿಯನ್ನು ಈ ಸಂದರ್ಭದಲ್ಲಿ ಪರಿಚಯಿಸಲಾಗುತ್ತಿದ್ದು, ಹೊಸ ಮಾದರಿಯ ಬೈಕ್‌ಗಳು ಜನಪ್ರಿಯ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿವೆ.

17 ಹೊಸ ಮಾದರಿಯ ಬೈಕ್‌ಗಳು & ಸ್ಕೂಟರ್‌ಗಳನ್ನು ಪ್ರದರ್ಶಿಸಲಿದೆ ಸುಜುಕಿ

ಆದ್ರೆ ಹೊಸ ಬೈಕ್‌ಗಳ ಯಾವುದೇ ಮಾಹಿತಿ ಬಿಟ್ಟುಕೊಡದ ಸುಜುಕಿ ಸಂಸ್ಥೆಯು ಬರ್ಗಮನ್ ಸ್ಕೂಟರಿನ ಎಂಜಿನ್ ಸಾಮರ್ಥ್ಯವು ಸುಜುಕಿ ಆಕ್ಸಿಸ್ 125 ಸ್ಕೂಟರ್‌ಗೆ ಸಮನಾಗಿರಲಿದೆ ಎಂದಿದೆ. ಅಲ್ಲದೆ ಮಾಹಿತಿಗಳ ಪ್ರಕಾರ ಸುಜುಕಿಯು ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮೂಲಕ ಎಪ್ರಿಲಿಯಾ ಎಸ್‌ಆರ್150 ಮತ್ತು ವೆಸ್ಪಾ 150 ಸ್ಕೂಟರ್‌ಗಳಿಗೆ ಟಕ್ಕರ್ ನೀಡಲಿದೆ.

17 ಹೊಸ ಮಾದರಿಯ ಬೈಕ್‌ಗಳು & ಸ್ಕೂಟರ್‌ಗಳನ್ನು ಪ್ರದರ್ಶಿಸಲಿದೆ ಸುಜುಕಿ

ಸುಜುಕಿ ಮೊಟಾರ್ ಸೈಕಲ್ ಗಳು ಆಟೊ ಎಕ್ಸ್ಪೋ 2018 ಹಾಲ್ ರಲ್ಲಿ ಪ್ರದರ್ಶಿಸಲಿದ್ದು ಮತ್ತು ಅದರಲ್ಲಿ ದೇಶಿಯ ಹಾಗು ಜಾಗತೀಕ ಮೊಟಾರ್ ಸೈಕಲ್ ಗಳು ಕೂಡಾ ಪ್ರದರ್ಶನಗೊಳಿಸಲಿದ್ದು, ಇದರೊಂದಿಗೆ ಜಿಕ್ಸರ್ ಕಪ್ ರೇಸ್ ಬೈಕ್ ಮತ್ತು ಮೊಟೊಕ್ರಾಸ್ ರೂಪಾಂತರ ಆರ್ ಎಮ್-ಜೆಡ್450 2018, ಆರ್ ಎಮ್-ಜೆಡ್250 ಮತ್ತು ಸುಜುಕಿ ಡಿಆರ್-ಜೆಡ್70 ಬೈಕುಗಳನ್ನು ಪ್ರದರ್ಶಿಸಲಿದೆ.

17 ಹೊಸ ಮಾದರಿಯ ಬೈಕ್‌ಗಳು & ಸ್ಕೂಟರ್‌ಗಳನ್ನು ಪ್ರದರ್ಶಿಸಲಿದೆ ಸುಜುಕಿ

ಈ ಬಗ್ಗೆ ಮಾತನಾಡಿರುವ ಸುಜುಕಿ ಮೊಟಾರ್ ಸೈಕಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದಂತಹ ಸತೋಶಿ ಉಚಿಡಾ ಅವರು "ನಮ್ಮ ಅತ್ಯಂತ ಯಶಸ್ವಿ ವರ್ಷದ ಭಾರತದಲ್ಲಿ ಈ ಆವೇಗ ನಮ್ಮೊಂದಿಗೆ ಇದೆ, ನಮ್ಮ ಅಸ್ತಿತ್ವದಲ್ಲಿರುವ ಪ್ರಬಲ ತಾಣಗಳನ್ನು ನಾವು ಬಲಪಡಿಸುತ್ತೇವೆ, ನಾವು 2020 ರ ಹೊತ್ತಿಗೆ ಮಿಷನ್ 1 ಮಿಲಿಯನ್ ಸಾಧಿಸುವ ನಮ್ಮ ಉದ್ದೇಶ ಹೊಂದಿದ್ದೇವೆ ಎಂದಿದ್ದಾರೆ.

17 ಹೊಸ ಮಾದರಿಯ ಬೈಕ್‌ಗಳು & ಸ್ಕೂಟರ್‌ಗಳನ್ನು ಪ್ರದರ್ಶಿಸಲಿದೆ ಸುಜುಕಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಜೊತೆ ಇನ್ನು ಹಲವು ಬೈಕ್ ಮಾದರಿಗಳನ್ನು ಪರಿಚಯಿಸಲು ಮುಂದಾಗಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Suzuki's Exciting Lineup Of Bikes & Scooter For India's Auto Show.
Story first published: Thursday, February 1, 2018, 18:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark