2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ತನ್ನ ಜನಪ್ರಿಯ ಹಯಾಬುಸಾ ಸೂಪರ್ ಬೈಕ್ ಮಾರಾಟದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದು, ಕಾರಣಾಂತರಗಳಿಂದ ಮುಂದಿನ ಕೆಲವೇ ದಿನಗಳಲ್ಲಿ ಸುಜುಕಿ ಸಂಸ್ಥೆಯು ಹಯಾಬಸ ಬೈಕ್ ಮಾರಾಟಕ್ಕೆ ಗುಡ್ ಬೈ ಹೇಳುತ್ತಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಹೀಗಾಗಿ ಮಾರಾಟದ ಕೊನೆಯ ಹಂತವಾಗಿ 2019ರ ಹಯಾಬುಸ ಬೈಕ್ ಬಿಡುಗಡೆ ಮಾಡುತ್ತಿರುವ ಸುಜುಕಿ ಸಂಸ್ಥೆಯು ಇದೀಗ ಬೈಕ್ ಖರೀದಿಗಾಗಿ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಒಂದು ವೇಳೆ ನೀವು ಮುಂದಿನ ದಿನಗಳಲ್ಲಿ ಹಯಾಬಸ ಬೈಕ್ ಖರೀದಿ ಮಾಡಲೇಬೇಕು ಎನ್ನುವ ಯೋಜನೆಯಲ್ಲಿದ್ದರೆ ಈಗಲೇ ಖರೀದಿಸಿ ಬಿಡಿ. ಯಾಕೆಂದ್ರೆ ಇನ್ಮುಂದೆ ಹಯಾಬುಸ ಬೈಕ್ ಮಾರುಕಟ್ಟೆಯಿಂದ ನಿರ್ಗಮಿಸುವುದು ಪಕ್ಕಾ ಆಗಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಹೌದು, ಕಳೆದ 2 ದಿನಗಳ ಹಿಂದಷ್ಟೇ ನಾವು ನಿಮಗೆ ಸುಜುಕಿ ಹಯಾಬುಸಾ ಬೈಕ್‌ಗಳು ಮಾರುಕಟ್ಟೆಯಿಂದ ನಿರ್ಗಮಿಸುವ ಕುರಿತಾಗಿ ಮಾಹಿತಿ ನೀಡಿದ್ದೆವು. ಅಂತೆಯೇ ಸುಜುಕಿ ಸಂಸ್ಥೆಯು ಸಹ ಹಯಾಬುಸ ಬೈಕ್‌ ಸ್ಥಗಿತಗೊಳಿಸುವ ಇರಾದೆಯಲ್ಲಿದ್ದು, ಅಂತಿಮವಾಗಿ 2019ರ ಹಯಾಬುಸ ಮಾರಾಟಕ್ಕೆ ಸಿದ್ದತೆ ನಡೆಸಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಹಯಾಬುಸ ಹೆಸರು ಕೇಳಿದ್ರೆ ಸಾಕು ಸೂಪರ್ ಬೈಕ್ ಪ್ರಿಯರ ಕಿವಿ ನೆಟ್ಟಗಾಗುತ್ತವೆ. ಕಳೆದ 20 ವರ್ಷಗಳಿಂದ ಜಾಗತಿಕವಾಗಿ ತನ್ನದೇ ಹವಾ ಸೃಷ್ಠಿಸಿರುವ ಹಯಾಬುಸ ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದ್ದು, ಆಟೋ ಉದ್ಯಮದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳಿಂದಾಗಿ ಹಯಾಬುಸ ಉತ್ಪಾದನೆ ಮತ್ತು ಮಾರಾಟಕ್ಕೆ ಕುತ್ತುಬಂದಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಭಾರತದಲ್ಲಿ ಸದ್ಯ ಜಾರಿಯಲ್ಲಿರುವ ಬಿಎಸ್-4 ನಿಯಮದಂತೆ ಯುರೋಪ ರಾಷ್ಟ್ರಗಳಲ್ಲಿ ಯುರೋ-6 ನಿಯಮ ಜಾರಿಯಲ್ಲಿದ್ದು, ಹೊಸ ವಾಹನಗಳ ಸುರಕ್ಷತೆ ಮತ್ತು ಪರಿಣಾಮಕಾರಿಯಾಗಿ ಮಾಲಿನ್ಯ ತಡೆಯುವ ಉದ್ದೇಶದಿಂದ ಹತ್ತಾರು ಹೊಸ ಬಗೆಯ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಯುರೋ-6 ಕಾಯ್ದೆ ಅಡಿಯಲ್ಲಿ ಬರುವ ಹೊಸ ವಾಹನಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷತೆಗಳು ಇರಬೇಕಲ್ಲದೇ ನಿಗದಿ ಮಟ್ಟಕ್ಕಿಂತ ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಇದೇ ಕಾರಣಕ್ಕಾಗಿ ಯುರೋ-6 ಪರೀಕ್ಷೆಯಲ್ಲಿ ಮುಗ್ಗರಿಸಿರುವ ಹಯಾಬುಸ ಬೈಕಿಗೆ ಸಂಕಷ್ಟ ಎದುರಾಗಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಹಯಾಬುಸ ಬೈಕಿನಲ್ಲಿ ಎಂಜಿನ್ ಸಾಮರ್ಥ್ಯಕ್ಕೆ ತಕ್ಕಂತೆ ಸುರಕ್ಷತೆಗಳಿಲ್ಲದಿರುವ ಮತ್ತು ಅತಿಯಾದ ಮಾಲಿನ್ಯ ಹೊರಸೂಸುವಿಕೆಯ ಸಮಸ್ಯೆ ಎದುರಿಸುತ್ತಿದ್ದು, ಇದು ಯುರೋ-6 ಕಾಯ್ದೆಗೆ ಸಂಪೂರ್ಣ ವಿರುದ್ಧವಾಗಿದೆ ಎನ್ನಲಾಗಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಹೀಗಾಗಿ ಮುಂದಿನ ತಿಂಗಳು ಜನವರಿ ಅಂತ್ಯದೊಳಗೆ ಹೊಸದಾಗಿ ಉತ್ಪಾದನೆಗೊಳ್ಳುವ ಹಯಾಬುಸ ಬೈಕ್‌ಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಒದಗಿಸಬೇಕಲ್ಲದೇ ಮಾಲಿನ್ಯವನ್ನು ತಡೆಯುವ ಉದ್ದೇಶ ಸುಧಾರಿತ ಮಾದರಿಯ ಎಂಜಿನ್ ಬಳಕೆ ಮಾಡಬೇಕಾದ ಅನಿವಾರ್ಯತೆಗಳಿವೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಆದ್ರೆ ಹೊಸ ಎಂಜಿನ್ ಮತ್ತು ಗರಿಷ್ಠ ಮಟ್ಟದ ಸುರಕ್ಷೆತೆ ಒದಗಿಸಲು ಮುಂದಾದರೇ ಬೈಕಿನ ಬೆಲೆಯು ಸದ್ಯದ ಬೆಲೆಗಳಿಂತ ಶೇ. 40 ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಇದರಿಂದ ಹಯಾಬುಸಾ ಬೈಕ್‌ಗಳನ್ನು ಉನ್ನತಿಕರಿಸುವ ಬದಲು ಬೈಕ್ ಮಾರಾಟಕ್ಕೆ ಬ್ರೇಕ್ ಹಾಕುವುದೇ ಲೇಸು ಎನ್ನುವುದು ಸುಜುಕಿ ಲೆಕ್ಕಾಚಾರ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಯಾಕೆಂದ್ರೆ ಹಯಾಬುಸ ಬೈಕ್‌ಗಳನ್ನು ಉನ್ನತಿಕರಿಸಿ ಮಾರಾಟ ಮಾಡಿದರೂ ಸಹ ನಷ್ಟ ಸಾಧ್ಯತೆಗಳಿದ್ದು, ಅದರ ಬದಲಾಗಿ ಹೊಸ ಮಾದರಿಯ ಬೈಕ್ ಹೊರತರುವ ಕುರಿತಾಗಿ ಸುಜುಕಿ ಮೋಟಾರ್‌ಸೈಕಲ್ ಸಂಸ್ಛೆಯು ಸುಳಿವು ನೀಡಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಭಾರತದಲ್ಲೂ ಹಯಾಬುಸ ಬಂದ್ ಆಗುತ್ತಾ?

ಈ ಪ್ರಶ್ನೆ ಬಹುತೇಕ ವಾಹನ ಪ್ರೇಮಿಗಳಿಗೆ ಕಾಡಿಯೇ ಕಾಡುತ್ತೆ. ಸದ್ಯಕ್ಕೆ ಯುರೋಪ್ ಮಾರುಕಟ್ಟೆಯಲ್ಲಿ ಯುರೋ-6 ನಿಯಮದಂತೆ ಹಯಾಬುಸ ಮಾರಾಟಕ್ಕೆ ಬ್ರೇಕ್ ಬೀಳುತ್ತಿದ್ದು, ಆದ್ರೆ ಭಾರತದಲ್ಲಿ ಮಾತ್ರ ಹಯಾಬುಸ ಬೈಕ್‌ಗಳಿಗೆ ಮುಂದಿನ ಒಂದು ವರ್ಷದ ತನಕ ಕೊಂಚ ನಿರಾಳ ಎನ್ನಬಹುದು.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಇದಕ್ಕೆ ಕಾರಣ, ಭಾರತದಲ್ಲಿ ಜಾರಿಯಲ್ಲಿರುವ ಬಿಎಸ್-4 ಕಾಯ್ದೆಯು 2020ರ ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿದ್ದು, ನಂತರ ಬಿಎಸ್-6 ಕಾಯ್ದೆಯು ಅನುಷ್ಠಾನಗೊಳ್ಳಲಿದೆ. ಆಗ ಹಯಾಬುಸ ಬೈಕಿಗೆ ದೇಶಿಯ ಮಾರಕಟ್ಟೆಯಲ್ಲೂ ತನ್ನ ನೆಲೆ ಕಳೆದುಕೊಳ್ಳುವುದು ಪಕ್ಕಾ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಬಿಎಸ್-4 ಗಿಂತಲೂ ಬಿಎಸ್-6 ಮಾದರಿಯು ಹೆಚ್ಚಿನ ಮಟ್ಟದ ತಾಂತ್ರಿಕ ಅಂಶವಾಗಿದ್ದು, ಹೊಸ ವಾಹನಗಳಲ್ಲಿ ಮಾಲಿನ್ಯವನ್ನು ತಡೆಯಲು ಇದು ಸಾಕಷ್ಟು ಸಹಕಾರಿಯಾಗುತ್ತೆ. ಇದರಿಂದಾಗಿ ಭಾರತದಲ್ಲಿ 20202ರ ಹೊತ್ತಿಗೆ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ 15ಕ್ಕೂ ವಾಹನಗಳು ಮಾರಕಟ್ಟೆಯಲ್ಲಿ ಸ್ಥಗಿತಗೊಳ್ಳಲಿವೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ಇನ್ನು ಹಯಾಬುಸ ಬೈಕ್‌ಗಳು 1998ರಲ್ಲಿ ಮೊದಲ ಬಾರಿಗೆ ಬಿಡುಗಡೆಯ ನಂತರ ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡಿದ್ದರೂ ಸಹ ಈ ಯುರೋ-6 ಕಾಯ್ದೆ ಅಳವಡಿಕೆಯು ಅಸಾಧ್ಯ ಎನ್ನುವ ನಿರ್ಧಾರಕ್ಕೆ ಬರಲಾಗಿದ್ದು, 1,340 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ 197-ಬಿಎಚ್‌ಪಿ ಮತ್ತು 155-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಈಗಲೂ ಬಹುಬೇಡಿಕೆಯ ಸೂಪರ್ ಬೈಕ್ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದೆ.

2019ರ ಹಯಾಬುಸ ಖರೀದಿಗೆ ಬುಕ್ಕಿಂಗ್ ಶುರು- ಖರೀದಿಗೆ ಇದು ಕೊನೆಯ ಅವಕಾಶ..!

ದೆಹಲಿ ಎಕ್ಸ್‌ಶೋರೂಂ ಪ್ರಕಾರ, 13.50 ಲಕ್ಷ ಬೆಲೆ ಹೊಂದಿರುವ ಹಯಾಬುಸ ಬೈಕ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ಪ್ರತಿ ಗಂಟೆಗೆ 320 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಹಯಾಬುಸಾ ಬೈಕ್ ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ಮರೆಯಾಗುತ್ತೆ ಎನ್ನವುದೇ ಬೇಸರದ ಸಂಗತಿ.

Most Read Articles

Kannada
English summary
2019 Suzuki Hayabusa Bookings Open In India. Read in Kannada.
Story first published: Thursday, December 13, 2018, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X