ಆಫ್ ರೋಡ್ ಪ್ರಿಯರನ್ನು ಆಕರ್ಷಿಸಲು ಬರಲಿದೆ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ಮಧ್ಯಮಗಾತ್ರದ ಅಡ್ವೆಂಚರ್ ಬೈಕ್‍ಗಳನ್ನು ಪರಿಚಯಿಸುವ ಯೋಜನೆಯಲಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ಮಧ್ಯಮಗಾತ್ರದ ಅಡ್ವೆಂಚರ್ ಬೈಕ್‍ಗಳನ್ನು ಪರಿಚಯಿಸುವ ಯೋಜನೆಯಲಿದ್ದು, ಇದೀಗ ಸಂಸ್ಥೆಯು ತಮ್ಮ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್ ಅನ್ನು ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮೊದಲ ಬಾರಿಗೆ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್ ಅನ್ನು ಪ್ರದರ್ಶಿಸಲಾಗಿದ್ದು, ಇದು ಭಾರತದಲ್ಲೆ ತಯಾರಿಸಲಾಗುವ ಸುಜುಕಿ ಸಂಸ್ಥೆಯ ಮೂರನೆ ಬೈಕ್ ಆಗಿರಲಿದೆ.

ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್ ಟಿ ಅಡ್ವೆಂಚರ್ ಟೂರರ್ ಬೈಕ್‍ಗಳು ಸ್ಟ್ಯಾಂಡರ್ಡ್ ಮತ್ತು ಎಕ್ಸ್ ಟಿ ವೇಯಂಟ್‍ಗಳಲ್ಲಿ ಪ್ರಪಂಚಾದ್ಯಂತ ಲಭ್ಯವಿದ್ದು, ಸಂಸ್ಥೆಯು ಈ ಬೈಕಿನ ಎಕ್ಸ್ ಟಿ ವೇರಿಯಂಟ್ ಅನ್ನು ಮಾತ್ರ ಬಿಡುಗಡೆಗೊಳಿಸಲಿದೆ.

ಹೊಸ ಬೈಕಿನ ವಿನ್ಯಾಸ
ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕಿನ ವಿನ್ಯಾಸವು ಸಂಸ್ಥೆಯ ಮತ್ತೊಂದು ಬೈಕ್ ಆದ ವಿ-ಸ್ಟೋರ್ಮ್ 1000 ಎಕ್ಸ್ ಟಿ ನಿಂದ ಪಡೆದಿದ್ದು, ಪ್ರೀಮಿಯಂ ಅನೊಡೈಸ್ಡ್ ವೈರ್ ಸ್ಪೋಕ್ ರಿಮ್ಸ್ ಮತ್ತು ಬ್ರಿಡ್ಜ್ ಸ್ಟೋನ್ ಬ್ಯಾಟ್ಲಕ್ಸ್ ಎ40 ಅಡ್ವೆಂಚರ್ ಟೈರ್‍ಗಳನ್ನು ಪಡೆದುಕೊಂಡಿದೆ.

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಸಸ್ಪೆಂಶನ್ ಅನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 260ಎಂಎಂ ಸಿಂಗಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂದಿದೆ. ಇದಲ್ಲದೆ ಈ ಬೈಕಿನಲ್ಲಿ ಎಬಿಎಸ್ ಟೆಕ್ನಾಲಜಿಯನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಹೊಸ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್ 645ಸಿಸಿ ವಿ-ಟ್ವಿನ್ ಎಂಜಿನ್ ಸಹಾಯದಿಂದ 70ಬಿಹೆಚ್‍ಪಿ ಮತ್ತು 62.3 ಎನ್ಎಂ ಟಾರ್ಕ್ ಅನ್ನು ಅಳವಡಿಸಲಾಗಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್‍ಗಳು ಮೂರು ವಿಧಾನಗಳಲ್ಲಿ ಸರಿಪಡಿಸಬಹುದಾದ ವಿಂಡ್ ಸ್ಕ್ರೀನ್, ಮೂರು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಸುಜುಕಿಯ ಈಜಿ ಸ್ಟಾರ್ಟ್ ಸಿಸ್ಟಂ ಮತ್ತು ಡಿಜಿಟಲ್ ಅನಾಲಾಗ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್‍ನ ಬೆಲೆಯ ಬಗ್ಗೆ ಯಾವುದೆ ಮಾಹಿತಿ ತಿಳಿದಿಲ್ಲವಾದರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ 7 ರಿಂದ 8 ಲಕ್ಷದವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಕವಾಸಕಿ ವರ್ಸಿಸ್ 650 ಬೈಕ್‍ಗಳಿಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....
ಟೈರ್ ಬಸ್ಟ್- ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್
ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....


Click it and Unblock the Notifications








