ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

By Praveen Sannamani

ಕಳೆದ ಒಂದು ದಶಕದ ಅವಧಿಯಲ್ಲಿ ಕಾರು ಮಾರಾಟ ಪ್ರಮಾಣಲ್ಲಿ ಹೊಸ ದಾಖಲೆ ಸೃಷ್ಟಿಯಾಗುತ್ತಿದ್ದು, ಇದೀಗ ಮೆಟ್ರೋ ನಗರಗಳಲ್ಲಿನ ಕಾರು ಮಾರಾಟ ಪ್ರಮಾಣ ತಗ್ಗಿದೆ ಎಂದ್ರೆ ನೀವು ನಂಬಲೇಬೇಕು. ಹೌದು.. ವರದಿಗಳ ಪ್ರಕಾರ ಮೆಟ್ರೋ ನಗರಗಳಲ್ಲಿನ ಕಾರು ಮಾರಾಟವು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆಯೆಂತೆ. ಹಾಗಾದ್ರೆ ಇದಕ್ಕೆ ಕಾರಣ ಏನು?

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ದೇಶದ ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಹೈದ್ರಾಬಾದ್‌ನಲ್ಲಿ ಕಾರು ಮಾರಾಟ ಪ್ರಮಾಣವು ವರ್ಷದಿಂ ವರ್ಷಕ್ಕೆ ಕುಸಿಯುತ್ತಿದ್ದು, ಇದರ ಹಿಂದಿನ ಕಾರಣ ಅರಿತಾಗ ಅಚ್ಚರಿಯ ಉತ್ತರಗಳು ಕಂಡು ಬಂದಿವೆ. ಇದೇ ಕಾರಣಕ್ಕೆ ಗ್ರಾಹಕರು ಕಾರು ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬುವುದು ಅಧ್ಯಯನಗಳ ವಾದವಾಗಿದೆ.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ಹೆಚ್ಚಿದ ಟ್ರಾಫಿಕ್ ಸಮಸ್ಯೆ

ಕಾರು ಖರೀದಿಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಇದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೆಚ್ಚಿನ ಟ್ರಾಫಿಕ್‌ನಿಂದಾಗಿ ಗ್ರಾಹಕರು ಕಾರು ಖರೀದಿ ಸಹವಾಸ ಬಿಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮೇಲೆ ಅಲಂಬಿತರಾಗುತ್ತಿರುವುದು ಕಾರು ಉತ್ಪಾದನಾ ಸಂಸ್ಥೆಗಳಿಗೆ ನಡುಕು ಹುಟ್ಟಿಸಿದೆ.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ಪಾರ್ಕಿಂಗ್ ಸಮಸ್ಯೆ

ಕಾರು ಖರೀದಿಗಿಂತ ಖರೀದಿಸಿದ ಕಾರನ್ನು ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದೇ ಒಂದು ದೊಡ್ಡ ಸವಾಲು. ಹೀಗಿರುವಾಗ ಮುಂಬೈ, ಬೆಂಗಳೂರು ಮತ್ತು ದೆಹಲಿಯಂತಲೂ ಜನದಟ್ಟಣೆ ನಗರಗಳಲ್ಲಿ ಇದು ಕಷ್ಟಸಾಧ್ಯ. ಜೊತೆಗೆ ಹೆಚ್ಚಿದ ಪಾರ್ಕಿಂಗ್ ಶುಲ್ಕಗಳು ಮಧ್ಯಮ ವರ್ಗದವರ ಕಾರು ಖರೀದಿಯ ಆಸೆಗೆ ಹಿನ್ನೆಡೆಯಾಗುತ್ತಿದೆ.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ಇದಕ್ಕೆ ನಿದರ್ಶನ ಎನ್ನುವಂತೆ ಮುಂಬೈ ಮಹಾನಗರ ಒಂದರಲ್ಲೇ 2017ರ ಏಪ್ರಿಲ್‌ನಿಂದ 2018ರ ಮಾರ್ಚ್ ತನಕ 97,274 ಕಾರುಗಳನ್ನು ಮಾರಾಟ ಮಾಡಿರುವ ಕಾರು ಉತ್ಪಾದನಾ ಸಂಸ್ಥೆಗಳು ಕಳೆದ ಬಾರಿಯ ಆರ್ಥಿಕ ವರ್ಷದಲ್ಲಿ 1.22 ಲಕ್ಷ ಕಾರುಗಳನ್ನು ಮಾರಾಟಮಾಡಿದ್ದರು.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ನಮ್ಮ ಬೆಂಗಳೂರಿನಲ್ಲೂ ಸಹ ಕಳೆದ ಬಾರಿಯ ಆರ್ಥಿಕ ವರ್ಷಕ್ಕೂ ಮತ್ತು ಈ ವರ್ಷ ಆರ್ಥಿಕ ವರ್ಷದ ಅವಧಿಗೂ ಹೋಲಿಕೆ ಮಾಡಿದಲ್ಲಿ ಶೇ.11ರಷ್ಟು ಕಾರು ಮಾರಾಟ ಕುಸಿತ ಕಂಡಿದ್ದು, ಹೊಸದಾಗಿ ಕಾರು ಖರೀದಿಸುವ ಗ್ರಾಹಕರು ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಯಿಂದಾಗಿ ಸಾರ್ವಜನಿಕ ಸಾರಿಗೆ ಸೌಲಭ್ಯದತ್ತ ಮುಖಮಾಡಿರುವುದು ಸ್ಪಷ್ಟವಾಗುತ್ತೆ.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ಮತ್ತೊಂದು ವರದಿ ಪ್ರಕಾರ, ಖಾಸಗಿ ವಲಯ ಉದ್ಯೋಗಿಗಳು ಮೆಟ್ರೋ ಸೇವೆಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿರುವುದು ಕಾರು ಮಾರಾಟದ ಮೇಲೆ ನೇರ ಪರಿಣಾಮ ಬೀರುತ್ತಿದೆ ಅಲ್ಲದೇ ಅಗ್ಗದ ಓಲಾ ಮತ್ತು ಉಬರ್ ಸೇವೆಗಳು ಸಹ ಕಾರು ಖರೀದಿಯ ಸಹವಾಸ ಬೇಡವೇ ಬೇಡ ಎನ್ನುವುದು ಗ್ರಾಹಕರ ಅಂಬೋಣ.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ಈ ಬಗ್ಗೆ ಮಾತನಾಡಿರುವ ಹ್ಯುಂಡೈ ಇಂಡಿಯಾ ಕಾರು ಮಾರಾಟ ವಿಭಾಗದ ನಿರ್ದೇಶಕ ರಾಕೇಶ್ ಶ್ರೀವಾಸ್ತವ್ ಅವರು, ಕಾರು ಮಾರಾಟ ತಗ್ಗಲು ಪ್ರಮುಖವಾಗಿ ಮೆಟ್ರೋ ನಗರಗಳಲ್ಲಿನ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಪ್ರಮುಖ ಕಾರಣವಾಗಿದ್ದು, ಇದರ ಜೊತೆಗೆ ಮೆಟ್ರೋ ಮತ್ತು ಕ್ಯಾಬ್ ಸೇವೆಗಳಿಂದಾಗಿ ಗ್ರಾಹಕರು ಹೊಸ ಕಾರು ಖರೀದಿಯ ಲಾಭ-ನಷ್ಟ ಬಗ್ಗೆ ಯೋಚಿಸುತ್ತಿದ್ದಾರೆ" ಎಂದಿದ್ದಾರೆ.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ಕಾರು ಖರೀದಿಯ ಇಳಿಕೆಗೆ ಮತ್ತೊಂದು ಪ್ರಮುಖ ಕಾರಣ ಜಿಎಸ್‌ಟಿ ಜಾರಿಗೆಯಾಗಿದ್ದು. ಹೀಗಾಗಿ ಓಲಾ ಮತ್ತು ಉಬರ್ ಸಂಸ್ಥೆಗಳು ಈ ಮೊದಲ ಖರೀದಿಸುತ್ತಿದ್ದ ಫ್ಲೀಟ್ ಆಧಾರದ ಮೇಲೆ ಖರೀದಿಸಲಾಗುತ್ತಿದ್ದ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಲ್ಲದೇ ಕಾರು ಚಾಲಕರ ಭತ್ಯೆಯಲ್ಲೂ ಸಾಕಷ್ಟು ಕಡಿತ ಮಾಡಿವೆ. ಇದರಿಂದ ಫ್ಲೀಟ್ ಆಪರೇರ್ಟ್‌ಗಳ ಸಂಖ್ಯೆ ಕೂಡಾ ಇದೀಗ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ.

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

ಹೀಗಿದ್ದರೂ ಎರಡನೇ ದರ್ಜೆಯ ನಗರಗಳಲ್ಲಿನ ಕಾರು ಖರೀದಿ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ ಎನ್ನುವುದೇ ಪ್ರಮುಖ ವಿಚಾರ. ಇನ್ನು ಮೆಟ್ರೋ ನಗರಗಳಲ್ಲಿನ ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಯು ಉಲ್ಬಣಗೊಳ್ಳುತ್ತಿದ್ದು, ವಾಹನ ಸವಾರರನ್ನು ಹೈರಾಣಾಗಿ ಹೋಗಿದ್ದಾರೆ.

Kannada
Read more on auto news
English summary
Car Sales Drop In Mumbai, Bangalore & Delhi: Is GST, Traffic & Parking Problems The Reason?
Story first published: Friday, May 4, 2018, 13:37 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more