ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್

ತನ್ನ ಕ್ಲಾಸಿಕ್ ವಿನ್ಯಾಸ ಮತ್ತು ಅಧಿಕ ಎಂಜಿನ್‍‍ನಿಂದ ಯುವಕರ ಸಮುದಾಯವನ್ನು ಸೆಳೆದುಕೊಳ್ಳುತ್ತಿರುವ ದೇಶಿಯ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ತಮ್ಮ ಜನಪ್ರಿಯ ಬುಲ್ಲೆಟ್ 350 ಬೈಕ್ ಅನ್ನು ಹೊಸ ಅಪ್ಡೇಟ್‍‍ನೊಂದಿಗೆ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ಈ ಬಾರಿ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಸೌಲತ್ತನ್ನು ನೀಡುವುದರ ಸಲುವಾಗಿ, ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನು ಅಳವಡಿಸಲಾಗಿದೆ. ಹೊಸದಾಗಿ ರಿಯರ್ ಡಿಸ್ಕ್ ಬ್ರೇಕ್ ಅನು ಪಡೆದ ರಾಯಲ್ ಎನ್‍ಫೀಲ್ಡ್ ಬುಲ್ಲೆಟ್ 350 ಬೈಕ್‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.26 ಲಕ್ಷದ ಮಾರಾಟದ ಬೆಲೆಯನು ಪಡೆದುಕೊಂಡಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ಹೊಸದಾಗಿ ರಿಯರ್ ಡಿಸ್ಕ್ ಬ್ರೇಕ್ ಅನ್ನು ಪಡೆದ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ ಅನ್ನು ಖರೀದಿಸಲು ಆಸಕ್ತ ಗ್ರಾಹಕರು ನಿಮ್ಮ ಹತ್ತಿರದಲ್ಲಿನ ಅಧಿಕೃತ ರಾಯಲ್ ಎನ್‍ಫೀಲ್ಡ್ ಡೀಲರ್‍‍ನ ಬಳಿ ರೂ.5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, ಉಳಿದಿರುವ ಸ್ಟಾಕ್‍ನ ಮೆರೆಗೆ ಶೀಘ್ರದಲ್ಲೆ ಡೆಲಿವರಿಯನ್ನು ಸಹ ನೀಡಲಾಗುತ್ತದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ರಿಯರ್ ಡಿಸ್ಕ್ ಬ್ರೇಕ್ ಅನ್ನು ಹೊರತು ಪಡಿಸಿ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ನ ವಿನ್ಯಾಸದಲ್ಲಿ ಬೇರಾವುದೇ ಬದಲಾವಣೆಯನ್ನು ಮಾಡಲಾಗಿರಲಿದ್ದು, ಅದಾಗ್ಯೂ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಇನ್ನೂ ಅಳವಡಿಸದ ವಿಚಾರವು ತಿಳಿಯಬಹುದು.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ಎಂಜಿನ್ ಸಾಮರ್ಥ್ಯ

ಹೊಸ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ 346ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 19.8ಬಿಹೆಚ್‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಅಬ್ಸಾರ್ಬರ್‍‍‍ಗಳನ್ನು ಅಳವಡಿಸಲಾಗಿದ್ದು, 19 ಇಂಚಿನ ಸ್ಪೋಕ್ ವ್ಹೀಲ್ಸ್ ಹಾಗು ಸಿಯಾಟ್ ಟೈರ್‍‍ಗಳನ್ನು ನೀಡಲಾಗಿದೆ.

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ನ ಮುಂಭಾಗದಲ್ಲಿ 280ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ ಸ್ಟಾಂಡರ್ಡ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಎಂಬ ಎರಡು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಟ್ಯಾಂಡರ್ಡ್ ಮಾಡಲ್ ಕಪ್ಪು ಬಣ್ಣವನ್ನು ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ವೇರಿಯಂಟ್ ಬೈಕ್‍ಗಳು ಸಿಲ್ವರ್ ಮತ್ತು ರೆಡ್ ಎಂಬ ಎರಡು ಹೊಸ ಬಣ್ಣಗಳಲ್ಲಿ ದೊರೆಯಲಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ರಾಯಲ್ ಎನ್‍ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ದಿನಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಸಂಸ್ಥೆಯ ಕ್ಲಾಸಿಕ್ 350, ಬುಲೆಟ್ 350 ಮತ್ತು ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿದೆ. ಆದರೆ ಇದೀಗ ಜಾವಾ ಮೋಟಾರ್‍‍ಸೈಕಲ್‍ಗಳು ಕಡಿಮೆ ಬೆಲೆಯಲ್ಲಿ ಸುಮಾರು 4 ಬೈಕ್‍ಗಳನ್ನು ಬಿಡುಗಡೆಗೊಳಿಸಲಿದ್ದು, ಇದರಿಂದ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಗೆ ಪೈಪೋಟಿ ನೀಡಲು ಸಿದ್ಧವಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ಆರ್‍ಇ ಬುಲೆಟ್ 350 ಬೈಕ್

ಈಗಾಗಲೆ ಹೊಸ ಜಾವಾ ಬೈಕ್‍ಗಳಿಗಾಗಿ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ನಿಮ್ಮ ಹತ್ತಿರದ ಡೀಲರ್‍‍ಗಳ ಬಳಿ ರೂ.1000 ಸಾವಿರವನ್ನು ನೀಡು ಬುಕ್ಕಿಂಗ್ ಮಾದಿಕೊಳ್ಳಬಹುದಾಗಿದ್ದು, ಇದೇ ತಿಂಗಳ 19ರಂದು ಬೈಕ್‍ಗಳು ಬಿಡುಗಡೆಯಾಗಲಿದೆ ಮತ್ತು 1.5 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿರಲಿದೆ.

Image Courtesy: Abinash Panigrahi

Most Read Articles

Kannada
English summary
Royal Enfield Bullet 350 With Rear Disc Brake Launched In India; Priced At Rs 1.28 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X