ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದ್ದು, ಇದಕ್ಕಾಗಿ ಭಾರೀ ಪ್ರಮಾಣ ಬಂಡವಾಳ ಹೂಡಿಕೆ ಮಾಡುತ್ತಿದೆ.

By Praveen Sannamani

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಮೋಟಾರ್ ಸೈಕಲ್ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದ್ದು, ಇದಕ್ಕಾಗಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ.

ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

ಇತ್ತೀಚೆಗೆ ಆರ್‌ಇ ಬೈಕ್‌ಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ನಿಗದಿತ ಅವಧಿಯಲ್ಲಿ ಹೊಸ ಬೈಕ್‌ಗಳ ಉತ್ಪನ್ನಗಳ ಪೂರೈಕೆ ಅನುಕೂಲಕವಾಗುವಂತೆ ಬೈಕ್ ಉತ್ಪಾದನಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿಯೇ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರ ಕಾಯುವಿಕೆ ಅವಧಿಯನ್ನು ಸಹ ತಗ್ಗಿಸಲಿದೆ.

ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

2018-19ರ ಅವಧಿಗೆ ಬರೋಬ್ಬರಿ 800 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವ ಆರ್‌ಇ ಸಂಸ್ಥೆಯು, ತಮಿಳುನಾಡಿನ ವಲ್ಲಮ್ ವಡಗಾಲ ಬೈಕ್ ಉತ್ಪಾದನಾ ಘಟಕವನ್ನು 2ನೇ ಹಂತಕ್ಕೆ ಉನ್ನತಿಕರಿಸುವ ಮಹತ್ವದ ಯೋಜನೆಗೆ ಹಸಿರು ನಿಶಾನೆ ತೊರಿದೆ.

ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

ಇದರಿಂದ ವರ್ಷಕ್ಕೆ 9.50 ಲಕ್ಷ ಬೈಕ್ ಉತ್ಪಾದನೆಗೆ ಅವಕಾಶವಿದ್ದು, ಈ ಮೂಲಕ ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ನಿಗದಿತ ಅವಧಿಯಲ್ಲಿ ಬೈಕ್ ಉತ್ಪನ್ನಗಳನ್ನು ರಫ್ತು ಮಾಡಲು ಸಹಕಾರಿಯಾಗಲಿದೆ.

ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನು ತಮಿಳುನಾಡಿನ ವಲ್ಲಮ್ ವಡಗಾಲ ಪ್ಲ್ಯಾಂಟ್‌ನ 2ನೇ ಹಂತದ ಉತ್ಪಾದನಾ ಘಟಕವನ್ನು ಹೊಸ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಮಾಡಲಾಗುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಬೈಕ್ ಉತ್ಪನ್ನಗಳನ್ನು ಸಿದ್ದಗೊಳಿಸಲು ಇದು ನೆರವಿಗೆ ಬರಲಿದೆ.

ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

ಹೀಗಾಗಿ ಭಾರತ ನಂತರ ಅತಿ ಹೆಚ್ಚು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಬೇಡಿಕೆ ಇರುವ ಥಾಯ್ಲೆಂಡ್ ಮತ್ತು ಇಂಡೋನೇಷ್ಯಾ ಮಾರುಕಟ್ಟೆಗಳಲ್ಲಿ ಬೈಕ್ ಮಾರಾಟಕ್ಕೆ ಹೊಸ ಯೋಜನೆಯು ಪ್ರಯೋಜನವಾಗಲಿದ್ದು, ಗ್ರಾಹಕರು ಬುಕ್ಕಿಂಗ್ ಮಾಡಿದ ನಂತರ ಕಾಯುವಿಕೆ ಅವಧಿಯು ಗಣನೀಯವಾಗಿ ಇಳಿಕೆಯಾಗಲಿದೆ.

ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮುಂದಿನ 2ನೇ ತ್ರೈಮಾಸಿಕ ಅವಧಿಗೆ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್‌ಗಳ ಮೇಲೆ ಹೆಚ್ಚಿನ ನೀರಿಕ್ಷೆಯಿಟ್ಟುಕೊಂಡಿದೆ.

ಹೊಸ ಉತ್ಪನ್ನಗಳಿಗಾಗಿ ಬರೋಬ್ಬರಿ 800 ಕೋಟಿ ಹೂಡಿಕೆ ಮಾಡಿದ ರಾಯಲ್ ಎನ್‌ಫೀಲ್ಡ್

ಒಂದು ವೇಳೆ ಹೊಸ ಬೈಕ್‌ಗಳು ಕೈಗೆಟಕುವ ದರಗಳಲ್ಲಿ ಬಿಡುಗೊಂಡಿದ್ದೆ ಆದಲ್ಲಿ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಆರ್‌ಇ ಸಂಸ್ಥೆಯು ರೂಪಿಸಿರುವ ಹೊಸ ಯೋಜನೆಯಿಂದ ಮತ್ತಷ್ಟು ಉದ್ಯೋಗ ಅವಕಾಶಗಳನ್ನು ಸಹ ಸೃಷ್ಠಿಸಲಿದೆ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಹಾಗಾದ್ರೆ ಇದು ನಿಜವೇ?

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಸ ಫೋರ್ಡ್ ಎಂಡೀವರ್...

Most Read Articles

Kannada
English summary
Royal Enfield to invest Rs 800 crore in capex in FY19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X