ಪಿಯಾಜಿಯೊ ಸಂಸ್ಥೆಯಿಂದ ಭಾರತೀಯ ಮಾರುಕಟ್ಟೆಗೆ ಹೊಸ ಕೊಡುಗೆ..
ದೇಶಿಯ ಮಾರುಕಟ್ಟೆಯಲ್ಲಿ ವಿದ್ಯುತ್ ವಾಹನಗಳ ಬೇಡಿಕೆಯು ಹೆಚ್ಚುತ್ತಿದ್ದು, ಹಲವಾರು ವಾಹನ ತಯಾರಕ ಸಂಸ್ಥೆಗಳು ಗ್ರಾಹಕರಿಗೆ ವಿದ್ಯುತ್ ವಾಹನಗಳನ್ನು ನೀಡುವ ಕಾರ್ಯದಲಿದ್ದಾರೆ.
ದೇಶಿಯ ಮಾರುಕಟ್ಟೆಯಲ್ಲಿ ವಿದ್ಯುತ್ ವಾಹನಗಳ ಬೇಡಿಕೆಯು ಹೆಚ್ಚುತ್ತಿದ್ದು, ಹಲವಾರು ವಾಹನ ತಯಾರಕ ಸಂಸ್ಥೆಗಳು ಗ್ರಾಹಕರಿಗೆ ವಿದ್ಯುತ್ ವಾಹನಗಳನ್ನು ನೀಡುವ ಕಾರ್ಯದಲಿದ್ದಾರೆ. ಈ ನಿಟ್ಟಿನಲ್ಲಿ ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಸಹ ದೇಶಿಯ ಮಾರುಕಟ್ಟೆಗೆ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸುವುದರ ಬಗ್ಗೆ ಸುಳಿವು ನೀಡಿದೆ.

ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ಹಾಗು ಗ್ಯಾಸ್‍ನ ಬೆಲೆಯು ಹೆಚ್ಚುತ್ತಿದ್ದು, ಇವುಗಳಿಂದ ಪರಿಸರಕ್ಕು ಕೂಡಾ ಹಾನಿಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಇರುವ ಒಂದೇ ಒಂದು ಮಾರ್ಗ ಎಂದರೇ ವಿದ್ಯುತ್ ವಾಹನಗಳನ್ನು ಬಳಸುವುದು.

ಮೇಲೆ ಹೇಳಿರುವ ಹಾಗೆ ಇಂಧನದ ಬೆಲೆಯು ದಿನದಿಂದ ದಿನಕ್ಕೆ ಏರುತ್ತಿದ್ದು, ಮತ್ತು ಪರಿಸರಕ್ಕೆ ಆಗುತ್ತಿರುವ ಮಾಲಿನ್ಯದ ಕಾರಣದಿಂದಾಗಿ ವಾಹನ ತಯಾರಕ ಸಂಸ್ಥೆಗಳು ವಿದ್ಯುತ್ ವಾಹನಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮತ್ತು ಈಗಾಗಲೆ ಬೆಂಗಳೂರಿನ ಮೂಲ್ದ ಎತರ್ ಸಂಸ್ಥೆಯು ತಮ್ಮ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಈ ಪಿಯಾಜಿಯೊ ಗ್ರೂಪ್ ಎಲೆಕ್ಟ್ರಿಕ್ ವಾಹನವನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿದ್ದು, ಶೀಘ್ರದಲ್ಲೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಎಂದು ಬಜಾಜ್‍ನ ಮಾರ್ಕೆಟಿಂಗ್ ಮ್ಯಾನೆಜರ್ ಆಶಿಶ್ ಯಾಕ್ಮಿ ಹೇಳಿಕೊಂಡಿದ್ದಾರೆ.

ಪಿಯಾಜಿಯೊ ಸಂಸ್ಥೆಯು ವಿದ್ಯುತ್ ವಾಹನವನ್ನು ಪರಿಚಯಿಸುವ ಮೊದಲು ಚಾರ್ಜಿಂಗ್ ಪಾಯಿಂಟ್‍ಗಳು ಮುಖ್ಯವಾಗಿದ್ದು, ಪ್ರಸ್ಥುತ ಸಂಸ್ಥೆಯು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ನಿರ್ಮಿಸಲು ಸ್ಥಳಗಳನ್ನು ಹುಡುಕುವ ಕಾರ್ಯದಲ್ಲಿದೆ.

ಪಿಯಾಜಿಯೊ ತಮ್ಮ ವಿದ್ಯುತ್ ವಾಹನವನ್ನು ಪರಿಚಯಿಸುವ ಸುದ್ಧಿಯನ್ನು ಆಶಿಶ್ ಯಾಕ್ಮಿ ಅವರು ತಮಿಳುನಾಡಿನ ಕೊಯಂಬತ್ತೂರುನಲ್ಲಿ ಹೊಸ ಶೋರಂನ ಉದ್ಘಟನಾ ಸಮಾರಂಭದಲ್ಲಿ ಬಹಿರಂಗ ಪಡಿಸಿದ್ದಾರೆ. ಸಧ್ಯ ಪಿಯಾಜಿಯೊ ಸಂಸ್ಥೆಯು ದೇಶಾದ್ಯಂತ 200 ಡೀಲರ್‍ಶಿಪ್ ಅನ್ನು ಪಡೆದಿದ್ದು, 300ಕ್ಕೆ ಏರಿಸಲು ಸಂಸ್ಥೆಯು ಯೋಜನೆಯಲ್ಲಿದೆ.

ಪಿಯಾಜಿಯೊ ಸಂಸ್ಥೆಯು ಪ್ರಸ್ಥುತ ಮಾರುಕಟ್ಟೆಯಲ್ಲಿ ಹಲವಾರು ಸ್ಕೂಟರ್‍ಗಳನ್ನು ಮಾರಾಟ ಮಾಡುತಿದ್ದು, ಎಸ್ಪಾ ಕೂಡಾ ಅದರಲ್ಲಿ ಒಂದಾಗಿದೆ. ವೆಸ್ಪಾ ಸ್ಕೂಟರ್ ಬೆಲೆಯಲ್ಲಿ ದುಬಾರಿಯಾದರೂ ಮಾರುಕಟ್ಟೆಯಲ್ಲಿ ಹೆಚ್ಚಾಗಿಯೆ ಜನಪ್ರಿಯವಾಗಿದೆ.

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ 2020ರೊಳಗೆ ತಮ್ಮ ಮೊದಲ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸುವುದ ಬಗ್ಗೆ ನಿಖಾರವಾದ ಮಾಹಿತಿಯನ್ನು ನೀಡಿದ್ದು, ಸಂಸ್ಥೆಯು ತಮ್ಮ ವ್ಯಾಗನಾರ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಮೊದಲಿಗೆ ಬಿಡುಗಡೆಗೊಳಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!
ಬಿಡುಗಡೆಯಾದ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಏನು?


Click it and Unblock the Notifications








