ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

By Praveen Sannamani

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದ್ರೆ ಅವರನ್ನು ಗುರುತಿಸುವ ಕೆಲಸವಾಗಬೇಕು ಅಷ್ಟೇ. ಇದಕ್ಕೆ ಕಾರಣ ಕನ್ನಡಿಗ ವಿದ್ಯಾರ್ಥಿಗಳು ಇಂದು ವಿಶ್ವಮಟ್ಟದಲ್ಲಿ ಗುರುತಿಸುವಂತಹ ಹಲವಾರು ಸಾಧನೆಗಳನ್ನು ಮಾಡುತ್ತಿದ್ದು, ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ದಪಡಿಸಿರುವಂತಹ ವಿನೂತನ ಮಾದರಿಯ ಸೌರ ವಿದ್ಯುತ್ ಚಾಲಿತ ವಾಹನವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿಯೇ, ಪರ್ಯಾಯ ಇಂಧನ ಚಾಲಿತ ವಾಹನಗಳ ಅಭಿವೃದ್ಧಿಗಾಗಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದ್ದು, ಇದಕ್ಕೆ ಪೂರಕವಾಗಿ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ದೊಡ್ಡಮಟ್ಟದ ಯೋಜನೆಗಳನ್ನು ಕೂಡಾ ರೂಪಿಸುತ್ತಿವೆ. ಹೀಗಿರುವಾಗ ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಮೂರು ಚಕ್ರದ ಹೊಸ ವಿನ್ಯಾಸದ ಸೌರ ವಿದ್ಯುತ್ ವಾಹನವೊಂದನ್ನ ಆವಿಷ್ಕಾರ ಮಾಡಿದ್ದಾರೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಆಳ್ವಾಸ್ ಇನ್ಸ್‌ಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಬೈರೇಗೌಡ ಜಿ, ದರ್ಶನ್ ಎಸ್, ರೋಹನ್ ಮತ್ತು ಶರತ್ ನಾಯಕ್ ಎನ್ನುವ ನಾಲ್ವರು ವಿದ್ಯಾರ್ಥಿಗಳೇ ಈ ಸೌರ ವಿದ್ಯುತ್ ವಾಹನದ ರೂವಾರಿಗಳಾಗಿದ್ದು, ಡಾ.ಫರ್ನಾಂಡಿಸ್ ಮತ್ತು ವಿದ್ಯಾಸಾಗರ್ ಇವರುಗಳ ಮಾರ್ಗದರ್ಶನದೊಂದಿಗೆ ಸೌರ ವಿದ್ಯುತ್ ಚಾಲಿತ ವಾಹನವು ಹೊಸ ರೂಪ ಪಡೆದುಕೊಂಡಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಕಡಿಮೆ ವೆಚ್ಚದಲ್ಲೇ ಸಿದ್ದವಾಯ್ತು ಅಚ್ಚುಮೆಚ್ಚಿನ ಗ್ರೀನ್ ವೆಹಿಕಲ್

ಹೌದು, ಆಳ್ವಾಸ್ ವಿದ್ಯಾರ್ಥಿಗಳು ಸಿದ್ದಪಡಿಸಿರುವ ಈ ವಾಹನವು ಸಂಪೂರ್ಣ ಪರಿಸರ ಸ್ನೇಹಿ ವಾಹನವಾಗಿರುವುದಲ್ಲದೇ ಉತ್ತಮ ಕಾರ್ಯ ದಕ್ಷತೆಯನ್ನು ಹೊಂದಿದ್ದು, ಅಲ್ಯುನಿಯಂ ಅಲಾಯ್ 6063 ಮೆಟಿರಿಲ್ ಬಳಕೆ ಮಾಡಿ ಈ ವಾಹನದ ರಕ್ಷಾಕವಚವನ್ನು ಸಿದ್ದಪಡಿಸಲಾಗಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ನೋಡಲು ಇದು ಆಟೋ ರಿಕ್ಷಾದಂತೆಯೇ ಕಂಡರೂ ಅದಕ್ಕಿಂತೂ ಭಿನ್ನವಾಗಿದ್ದು, ಇಬ್ಬರೂ ಅರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ. ಜೊತೆಗೆ 'ಗೋ ಗ್ರೀನ್ ಗ್ಲೋ ಗ್ರೀನ್' ಹೆಸರಿನ ಈ ವಾಹನದ ರೂಫ್ ಟಾಪ್ ಮೇಲೆಯೇ ಸೋಲಾರ್ ಪ್ಯಾನಲ್ ಅಳವಡಿಸಿರುವುದು ಎಲೆಕ್ಟ್ರಿಕ್ ಮೋಟಾರ್‌ಗೆ ಸಾಕಾಗುವಷ್ಟು ಶಕ್ತಿ ಪೂರೈಕೆ ಮಾಡಲಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಅದರಲ್ಲೂ 'ಗೋ ಗ್ರೀನ್ ಗ್ಲೋ ಗ್ರೀನ್' ವಾಹನ ನಿರ್ಮಾಣಕ್ಕಾಗಿ ಬಳಕೆ ಮಾಡಿರುವ ಅಲ್ಯುನಿಯಂ ಅಲಾಯ್ 6063 ಮೆಟಿರಿಲ್ ಬಳಕೆಯು ವಾಹನ ತೂಕವನ್ನು ಇಳಿಕೆ ಮಾಡುವಲ್ಲಿ ಮತ್ತು ಮೈಲೇಜ್ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ವಿಶೇಷ ಪಾತ್ರವಹಿಸಿವೆ ಎನ್ನಲಾಗಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಜೊತೆಗೆ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಿದರೂ ತುಕ್ಕು ನಿರೋಧಕ ಮತ್ತು ಡಿಸೈನ್ ಫ್ಲೆಕ್ಸಿಬ್ಲಿಟಿ ಅಧಿಕವಾಗಿದ್ದು, ಟಿಗ್ ವೆಲ್ಡಿಂಗ್ ಮೂಲಕವೇ ಸೌರ ವಿದ್ಯುತ್ ಚಾಲಿತ ವಾಹನದ ಡಿಸೈನ್ ರೂಪಿಸಲಾಗಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಸೋಲಾರ್ ಪ್ಯಾನೆಲ್

'ಗೋ ಗ್ರೀನ್ ಗ್ಲೋ ಗ್ರೀನ್' ವಾಹನದ ರೂಫ್ ಟಾಪ್ ಮೇಲೆಯೇ ಸುಧಾರಿತ ಮಾದರಿಯ 'ಮೊನೊ ಕ್ರ್ಟಿಷ್ಟಲಿನ್ ಸಿಲಿಕಾನ್ ಸೋಲಾರ್ ಪ್ಯಾನಲ್ ಬಳಕೆ ಮಾಡಿದ್ದು, ಇದು 5 ಅಡಿ ಉದ್ದ, 3 ಅಡಿ ಅಗಲ ವಿಸ್ತಾರವಾಗಿದೆ. ಇದರಲ್ಲಿರುವ 24 ವೊಲ್ಟ್ ಮತ್ತು 33 ಎಹೆಚ್ ಸಾಮರ್ಥ್ಯದ ಬ್ಯಾಟರಿ ನಿಯಂತ್ರಣದ ಮೂಲಕ 225 ವ್ಯಾಟ್ಸ್ ಶಕ್ತಿ ಪೂರೈಕೆ ಮಾಡುತ್ತೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಎಂಜಿನ್ ವೈಶಿಷ್ಟ್ಯತೆ

ಡಿಸಿ ಸೀರಿಸ್ ಹಬ್ ಮೋಟಾರ್ ಬಳಕೆ ಹೊಂದಿರುವ 'ಗೋ ಗ್ರೀನ್ ಗ್ಲೋ ಗ್ರೀನ್' ವಾಹನವು 20 ರಿಂದ 40 ಎನ್ಎಂ ಟಾರ್ಕ್ ಮತ್ತು 300ರಿಂದ 600 ಆರ್‌ಪಿಎಂ ಉತ್ಪಾದನಾ ಗುಣಹೊಂದಿದ್ದು, ತಗ್ಗು ದಿಣ್ಣೆಯ ರಸ್ತೆಗಳಲ್ಲೂ ಉತ್ತಮ ರೀತಿ ಎಂಜಿನ್ ಪರ್ಫಾಮೆನ್ಸ್ ಪ್ರದರ್ಶಿಸಬಲ್ಲವು.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಈ ಮೂಲಕ ಸಿಂಗಲ್ ಡ್ರೈವಿಂಗ್‌ನಲ್ಲಿ ಪ್ರತಿ ಗಂಟೆಗೆ ಗರಿಷ್ಠವಾಗಿ 45ಕಿ.ಮೀ ವೇಗ ಸಾಧಿಸುವ 'ಗೋ ಗ್ರೀನ್ ಗ್ಲೋ ಗ್ರೀನ್' ವಾಹನಗಳು ಸಹ ಪ್ರಯಾಣಿಕ ಇದ್ದ ಸಂದರ್ಭದಲ್ಲಿ ಪ್ರತಿ ಗಂಟೆಗೆ ಗರಿಷ್ಠವಾಗಿ 38 ಕಿ.ಮೀ ವೇಗ ಪಡೆಯಬಲ್ಲವು ಎನ್ನಲಾಗಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಸೋಲಾರ್ ವೆಹಿಕಲ್ ಬ್ಯಾಟರಿ ಸಾಮರ್ಥ್ಯ

ಸದ್ಯ ಎಲೆಕ್ಟ್ರಿಕ್ ವೆಹಿಕಲ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಲೀಥಿಯಂ ಅಯಾನ್ ಬ್ಯಾಟರಿಯನ್ನೇ ಈ ಸೌರ ವಿದ್ಯುತ್ ಚಾಲನೆಯ ವಾಹನದಲ್ಲೂ ಬಳಕೆ ಮಾಡಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜಿಂಗ್‌ಗೊಳ್ಳಲು ಕೇವಲ 90 ನಿಮಿಷ ಸಮಯಾವಕಾಶವನ್ನು ತೆಗೆದುಕೊಳ್ಳುತ್ತದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಒಂದು ವೇಳೆ ಸೋಲಾರ್ ಪ್ಯಾನಲ್‌ಗೆ ಸೌರ್ ಶಾಖ ಕೊರತೆಯಾದಲ್ಲಿ ಬಾಹ್ಯವಾಗಿ ಚಾರ್ಚಿಂಗ್ ಪಾಯಿಂಟ್ ಮೂಲಕ ಚಾರ್ಚಿಂಗ್ ಮಾಡಿಕೊಳ್ಳಬುಹುದಾದ ವಿನೂತನ ಸೌಲಭ್ಯ ಈ ವಾಹನದಲ್ಲಿದ್ದು, ಎಲ್ಲಾ ಋತುಮಾನಗಳಲ್ಲೂ ಇದು ಬಳಕೆಯಾಗಲಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಮೈಲೇಜ್

ವಿದ್ಯಾರ್ಥಿ ಬೈರೇಗೌಡ ನೇತೃತ್ವದಲ್ಲಿ ಸಿದ್ದವಾಗಿರುವ ಈ ವಾಹನವು ಇತರೆ ಎಲೆಕ್ಟ್ರಿಕ್ ವಾಹನಗಳಿಂತಲೂ ವಿಶೇಷ ಎನ್ನಿಸಲಿದ್ದು, ಒಂದು ಬಾರಿ ಪೂರ್ಣಪ್ರಮಾಣದ ಚಾರ್ಜಿಂಗ್ ಆದಲ್ಲಿ ಗರಿಷ್ಠವಾಗಿ 60 ರಿಂದ 65 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು. ಹಾಗೆಯೇ ಸಹ ಪ್ರಯಾಣಿಕರೊಂದಿಗೆ ವಾಹನ ಚಾಲನೆ ಮಾಡುವಾಗ ಪ್ರತಿ ಚಾರ್ಜ್‌ಗೆ ಗರಿಷ್ಠವಾಗಿ 50ರಿಂದ 55 ಕಿ.ಮೀ ಮೈಲೇಜ್‌ಗೆ ಯಾವುದೇ ತೊಂದರೇ ಇಲ್ಲ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಹೊಸ ವಾಹನ ನಿರ್ಮಾಣಕ್ಕಾಗಿ ಲಕ್ಷ ಲಕ್ಷ ವೆಚ್ಚ

ಆಳ್ವಾಸ್ ವಿದ್ಯಾರ್ಥಿಗಳು ಸಿದ್ದಗೊಳಿಸಿರುವ 'ಗೋ ಗ್ರೀನ್ ಗ್ಲೋ ಗ್ರೀನ್' ವಾಹನವನ್ನು ಸಿದ್ದಗೊಳಿಸಲು ಬರೋಬ್ಬರಿ 1 ವರ್ಷಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಾಗಿದ್ದು, ವಾಹನದ ಬೀಡಿಭಾಗಗಳ ಖರೀದಿ ಮತ್ತು ವೆಲ್ಡಿಂಗ್‌ಗಾಗಿ ರೂ. 1.60 ಲಕ್ಷ ಖರ್ಚು ಮಾಡಲಾಗಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಇದಲ್ಲದೇ ವಾಹನದ ನಿರ್ಮಾಣದ ಖರ್ಚು ತಗ್ಗಿಸಲು ಕೆಲವು ಸೆಕೇಂಡ್ ಹ್ಯಾಂಡ್ ಬೀಡಿಭಾಗಗಗಳನ್ನು ಸಹ ಬಳಕೆ ಮಾಡಲಾಗಿದ್ದು, ಟಾಟ್ ಏಸ್ ಸ್ಟಿರಿಂಗ್, ಹೋಂಡಾ ಆಕ್ಟಿವಾ ಸ್ಕೂಟರಿನ ವೀಲ್ಹ್‌ಗಳು, ಬಜಾಜ್ ಪಲ್ಸರ್ ಮಿರರ್‌ಗಳನ್ನು ಇದರಲ್ಲಿ ಜೋಡಿಸಿರುವುದು ವಿಶೇಷವಾಗಿದೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಸುರಕ್ಷಾ ಸೌಲಭ್ಯಗಳು

ಮುಂದೇ ಎರಡು ಚಕ್ರ. ಹಿಂದೆ ಒಂದು ಚಕ್ರ ಹೊಂದಿರುವ ಈ ವಾಹನದಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಬಳಕೆ ಮಾಡಿದೆ. ಹಾಗೆಯೇ ಸವಾರನ ರಕ್ಷಣೆಗಾಗಿ ಸೀಟ್ ಬೆಲ್ಟ್ ಸೇರಿದಂತೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ರೂಫ್ ಟಾಪ್ ಮೇಲಿರುವ ಸೋಲಾರ್ ಪ್ಯಾನಲ್‌ಗಳೇ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತೆ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಕಿರಿಕಿರಿ ಮತ್ತು ಮಾಲಿನ್ಯ ಸಮಸ್ಯೆಯನ್ನು ಮುಕ್ತಗೊಳಿಸಲು ಇಂತಹ ಪರಿಸರ ಸ್ನೇಹಿ ವಾಹನಗಳ ಉತ್ಪಾದನೆ ಅವಶ್ಯಕತೆಯಿದ್ದು, ಆಳ್ವಾಸ್ ವಿದ್ಯಾರ್ಥಿಗಳು ನಿರ್ಮಾಣ ಮಾಡಿರುವ ಸೌರ ವಿದ್ಯುತ್ ಚಾಲಿತ ವಾಹನವು ಸದ್ಯದ ಪರಿಸ್ಥಿತಿ ಹೇಳಿ ಮಾಡಿಸಿದ ವಾಹನ ಅಂದ್ರೆ ತಪ್ಪಾಗುವುದಿಲ್ಲ.

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ವಿದ್ಯಾರ್ಥಿ ಬೈರೇಗೌಡ್ ಮತ್ತು ಅವರ ಸಂಗಡಿಗರು ನಿರ್ಮಾಣ ಮಾಡಿರುವ ಸೌರ ವಿದ್ಯುತ್ ಚಾಲಿತ ವಾಹನವು ಹಲವು ವಿಶೇಷತೆಗಳ ಆಧಾರದ ಮೇಲೆ ನಿರ್ಮಾಣವಾಗಿದ್ದು, ಮೋಟಾರ್ ಬಳಕೆ ಮತ್ತು ಬ್ಯಾಟರಿ ದಕ್ಷತೆ ವಿಚಾರದಲ್ಲಿ ಎರಡು ಮಾತಿಲ್ಲ. ಆದರೇ, ವಾಹನದ ಹೊರ ವಿನ್ಯಾಸಗಳನ್ನು ಇನ್ನು ಸ್ವಲ್ಪ ಉತ್ತಮ ಮಾದರಿಯಲ್ಲಿ ವಿನ್ಯಾಸಗಳಿಸಿದ್ದರೇ ಉತ್ತಮವಾಗಿರುತ್ತಿತ್ತು ಎನ್ನುವುದು ವಾಸ್ತವ. ಆದರೂ, ಕಡಿಮೆ ಸಮಯಾವಕಾಶದಲ್ಲಿ ಉತ್ತಮ ಪ್ರಯತ್ನ ಮಾಡಿರುವ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ ಮೆಚ್ಚಲೇಬೇಕಾಗಿದ್ದು, ಅವರ ಮುಂದಿನ ಪ್ರಯತ್ನಗಳು ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿ ಎನ್ನುವುದು ನಮ್ಮ ಆಶಯ. ಆಲ್ ದಿ ಬೆಸ್ಟ್....

Kannada
English summary
Alva's institute of engineering & technology students design solar powered three wheeler vehicle.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more