ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

Written By: Rahul

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿಯು ತನ್ನ ವಿನೂತನ ವಿ-ಸ್ಟೋರ್ಮ್ 650 ಬೈಕನ್ನು ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಳಿಸಿದ್ದು, ಈ ಬೈಕ್ ಸಾಹಸಿ ಬೈಕ್ ಸ್ಟ್ಯಾಂಡರ್ಡ್ 650 ಮತ್ತು 650 ಎಕ್ಸ್ ಟಿ ಎಂಬ ಎರಡು ಮಾದರಿಗಳಲ್ಲಿ ಪ್ರದರ್ಶನಗೊಂಡಿದೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಆದರೇ, ಸುಜುಕಿ ವಿ-ಸ್ಟೋರ್ಮ್ 650 ಬೈಕ್ ಅನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗ ಪಡಿಸಲಿಲ್ಲವಾದರೂ 2018ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಬಹುದೆಂಬ ನಿರೀಕ್ಷಣೆಯಿದೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಎಂಜಿನ್ ಸಾಮರ್ಥ್ಯ

ಸುಜುಕಿ ವಿ-ಸ್ಟೋರ್ಮ್ 650 ಬೈಕ್‌ಗಳು ಸುಜುಕಿ ಎಸ್ ವಿ ಬೈಕಿನ ಎಂಜಿನನ್ನು ಹೋಲಲಿದ್ದು, ಇದನ್ನು 6-ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ. ಇನ್ನು ಬೈಕಿನ ಎಂಜಿನ್ 645ಸಿಸಿ ವಿ-ಟ್ವಿನ್ ಎಂಜಿನ್‌ನೊಂದಿಗೆ 70-ಬಿಹೆಚ್ ಪಿ ಮತ್ತು 62.3-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಹೀಗಾಗಿ ಈ ಬೈಕ್ ಸಸ್ಪೆಷನ್ ಡ್ಯುಟಿ ಮತ್ತು ಫ್ರಂಟ್ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮೂಲಕ ಚಲಾಯಿಸಲಾಗುತ್ತಿದ್ದು, 150 ಎಂಎಂ ಪ್ರಮಾಣವನ್ನು ನೀಡುತ್ತದೆ. ಆದರೇ ಹಿಂಭಾಗವು ಫ್ರೀ ಲೋಡೆಡ್ ಮತ್ತು ರೀಬೌಂಡ್ ನೊಂದಿಗೆ, ಮೋನೊ-ಶಾಕ್ ಪಡೆಯುತ್ತದೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಇನ್ನು ಬ್ರೇಕಿಂಗ್ ಸಿಸ್ಟಮ್ ವಿಷಯದಲ್ಲಿ ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಎಬಿಎಸ್ 260 ಎಂಎಂ ಡಿಸ್ಕ್ ಎನ್ನು ಹೊಂದಿದೆ ಎನ್ನಲಾಗಿದೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಬೈಕಿನ ವೈಶಿಷ್ಟ್ಯತೆ

ಸುಜುಕಿ ವಿ-ಸ್ಟೋರ್ಮ್ 650 ಬೈಕ್‌ಗಳು ಆಫ್-ರೋಡ್ ಸಾಮರ್ಥ್ಯವನ್ನು ಹೆಚ್ಚಿಸಲು ಟ್ವಿನ್-ಸ್ಪಾರ್ ಅಲಾಯ್ ಫ್ರೇಮ್ ಹೊಂದಿದ್ದು, ಮುಂಭಾಗದಲ್ಲಿ 110/80 ಆರ್19 ಮತ್ತು ಹಿಂಭಾಗದಲ್ಲಿ 150/70 ಆರ್17 ಟೈರ್ ಗಳನ್ನು ಪಡೆದುಕೊಂಡಿವೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಸ್ಟಾಂಡರ್ಡ್ 650 ಮಾದರಿಯು ಅಲಾಯ್ ಚಕ್ರವನ್ನು ಹಾಗು ಎಕ್ಸ್ ಟಿ ಮಾದರಿಯು ವೈರ್-ಸ್ಪೋರ್ಕ್ ರಿಮ್ ಶೋಡ್ ಮತ್ತು ಬ್ರಿಡ್ಜ್ ಸ್ಟೋನ್ ಅಡ್ವೆಂಚರ್ ಎ40 ಚಕ್ರಗಳನ್ನು ಹೊಂದಿರಲಿವೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಉಪಕರಣದ ಮಟ್ಟಕ್ಕೆ ಸಂಬಂಧಿಸಿದಂತೆ, ವಿ-ಸ್ಟೋರ್ಮ್ 650 ಬೈಕ್‌ಗಳು 3-ವೇ ವಿಂಡ್ ಸ್ಕ್ರೀನ್, ಮೂರು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಸುಜುಕಿಯ ಈಜಿ ಸ್ಟಾರ್ಟ್ ಸಿಸ್ಟಂ ಮತ್ತು ವಿ-ಸ್ಟೋರ್ಮ್ 1000 ಬೈಕಿನಲ್ಲಿ ಬಳಸಲಾದ ಡಿಜಿ-ಅನಾಲಾಗ್ ಇನ್ಫೋಟೈನ್‌ಮೆಂಟ್ ಕ್ಲಸ್ಟರ್ ಅನ್ನು ಬಳಸಲಾಗಿದೆ.

ಆಟೋ ಎಕ್ಸ್ ಪೋ 2018: ಕವಾಸಕಿ ವರ್ಸಿಸ್ 650ಗೆ ಟಾಂಗ್ ನೀಡಲು ಬಂದ ಸುಜುಕಿ ವಿ-ಸ್ಟೋರ್ಮ್ 650

ಸುಜುಕಿ ಸಂಸ್ಥೆಯು ಈ ಬೈಕನ್ನು ಬಿಡುಗಡೆಗೂ ಮುನ್ನವೆ ಗ್ರಾಹಕರ ಜನಪ್ರಿಯತೆಯನ್ನು ಪಡೆಯಲು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಭಾರತದಲ್ಲಿ ಅಡ್ವೆಂಚರ್ ಬೈಕ್‌ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ. ಇನ್ನು ಈ ಬೈಕ್ ಕವಾಸಕಿ ವರ್ಸಿಸ್ 650 ಬೈಕಿಗೆ ಪೈಪೋಟಿ ನೀಡಲಿದ್ದು, 6 ಲಕ್ಷದಿಂದ 7 ಲಕ್ಷದ ದರದಲ್ಲಿ ಬಿಡುಗಡೆಗೊಳ್ಳಲಿದೆ.

English summary
Suzuki V-Strom 650 Showcased - Expected Launch Date & Price, Specifications, Images.
Story first published: Saturday, February 10, 2018, 12:07 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark