SWM ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್ ಪ್ರದರ್ಶನ
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಎಸ್‍ಡಬ್ಲ್ಯೂಎಂ ಮೋಟಾರ್‍ಸೈಕಲ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ಬೈಕ್‌ಗಳನ್ನು ಪರಿಚಯಿಸುತ್ತಿದೆ.
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಎಸ್‍ಡಬ್ಲ್ಯೂಎಂ ಮೋಟಾರ್‍ಸೈಕಲ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ಬೈಕ್‌ಗಳನ್ನು ಪರಿಚಯಿಸುತ್ತಿದ್ದು, ಇದಕ್ಕೂ ಮುನ್ನ ಮತ್ತೊಂದು ವಿನೂತ ಸೂಪರ್ ಡ್ಯುಯಲ್ ಟಿ 600 ಬೈಕ್ ಮಾದರಿಯನ್ನು ಪ್ರದರ್ಶನಗೊಳಿಸಿದೆ.

ದೇಶಿ ಮಾರುಕಟ್ಟೆಯ ಜನಪ್ರಿಯ ಕಿನೆಟಿಕ್ ಗ್ರೂಪ್ ಜೊತೆಗೂಡಿ ಹೊಸ ಮಾದರಿಯ ಸೂಪರ್ ಬೈಕ್‌ಗಳನ್ನು ಪರಿಚಯಿಸುತ್ತಿರುವ ಎಸ್‍ಡಬ್ಲ್ಯೂಎಂ ಮೋಟರ್‍ಸೈಕಲ್ಸ್ ಸಂಸ್ಥೆಯು ವಿವಿಧ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದು, ಈಗಾಗಲೇ ಸೂಪರ್ ಡ್ಯುಯಲ್ ಟಿ 600 ಬೈಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪುಣೆಯಲ್ಲಿರುವ ಗ್ರೇಟ್ ಟ್ರೈಲ್ ಅಡ್ವೆಂಚರ್‍ನಲ್ಲಿ ಸೂಪರ್ ಡ್ಯುಯಲ್ ಟಿ 600 ಬೈಕ್ ಅನ್ನು ಪ್ರದರ್ಶನಗೊಳಿಸಿದ್ದು, ಈ ಬೈಕ್ ಕ್ರಾಶ್ ಗಾರ್ಡ್ಸ್, ಲಗ್ಗೆಜ್ ರ್‍ಯಾಕ್, ಪನ್ನಿಯರ್ಸ್, ಆಕ್ಸಿಲ್ಲರಿ ಲೈಟ್ಸ್, ಮತ್ತು ಅತ್ಯುತ್ತಮ ಭಾಗವನ್ನು ಹೊಂದಿದ್ದು, ಗುಣಮಟ್ಟದ ಫಿಟ್ಮೆಂಟ್ ಸಹ ಆಕರ್ಷಕವಾಗಿದೆ.

ಬೈಕಿನ ತೂಕದ ಬಗ್ಗೆ ಹೇಳುವುದಾದರೆ, 169 ಕಿಲೋಗ್ರಾಂ ತೂಕವನ್ನು ಹೊಂದಿರುವ ಸೂಪರ್ ಡ್ಯುಯಲ್ ಟಿ 600 ಬೈಕ್‌ಗಳು, ಕಡಿಮೆ ಎತ್ತರವಿರುವ ರೈಡರ್ಗಳಿಗೆ ಈ ಬೈಕ್ ಚಾಲನೆ ತುಸು ಕಷ್ಟ ಎನ್ನಬುಹುದು.

ಯಾಕೆಂದ್ರೆ, ಈ ಸೂಪರ್ ಡ್ಯುಯಲ್ 600 ಬೈಕ್‌ಗಳು 898ಎಂಎಂ ಎತ್ತರವನ್ನು ಪಡೆದಿದ್ದು, 20ಎಂಎಂ ಲೋವರ್ ಸೀಟ್ ಸೌಲಭ್ಯವನ್ನು ಕೂಡ ಸಂಸ್ಥೆಯು ಒದಗಿಸಲಿದೆ. ಹೀಗಾಗಿ ಕಡಿಮೆ ಎತ್ತರವಿರುವ ರೈಡರ್ಗಳಿಗೆ ಈ ಬೈಕಿನ ಸವಾರಿ ತುಸು ಕಷ್ಟಸಾಧ್ಯ ಎನ್ನಬಹುದು.

ಎಂಜಿನ್ ಸಾಮರ್ಥ್ಯ
ಹೊಸ ಎಸ್‍ಡಬ್ಲ್ಯೂಎಂ ಸೂಪರ್ ಡ್ಯುಯಲ್ 600 ಬೈಕ್ 600ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಸಹಾಯದಿಂದ 54 ಬಿಹೆಚ್‍ಪಿ ಹಾಗು 53.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿದೆ.

ಇದಲ್ಲದೇ ಅಡ್ಜೆಸ್ಟ್ ಮಾಡಬಹುದಾದ ರಿಯರ್ ಶಾಕ್ಸ್ ಹಾಗು ಎಬಿಎಸ್‍ನೊಂದಿಗೆ ಬ್ರೆಂಬೊ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿದೆ. ಇನ್ನು ಎಸ್‍ಡಬ್ಲ್ಯೂಎಂ ಸೂಪರ್ ಡ್ಯುಯಲ್ 600 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಇದೇ ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಎಸ್‍ಡಬ್ಲ್ಯೂಎಂ ಮೋಟರ್‍ಸೈಕಲ್ಸ್ ಸಂಸ್ಥೆಯು ತಮ್ಮ ಸೂಪರ್ ಡ್ಯುಯಲ್ ಟಿ 600 ಬೈಕಿನಿಂದ ಮೊದಲ ಭಾರಿಗೆ ದೇಶಿಯ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಗ್ರಾಹಕರನ್ನು ಎಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂದು ಕಾಯ್ದುನೋಡಬೇಕಿದೆ.

ಭಾರತದ ಮಾರುಕಟ್ಟೆಯಲ್ಲಿ ಎಸ್‍ಡಬ್ಲ್ಯೂಎಂ ಮೋಟರ್‍ಸೈಕಲ್ಸ್ ಸಂಸ್ಥೆಯ ಸೂಪರ್ ಡ್ಯುಯಲ್ ಟಿ 600 ಬೈಕ್ ಲಗ್ಗೆಯಿಟ್ಟಲ್ಲಿ, ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಕವಾಸಕಿ ವರ್ಸಿಸ್ 650 ಹಾಗು ಹೋಂಡಾ ಸಿಬಿಆರ್ 650 ಬೈಕುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ ಎನ್ನಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
1. ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!
2. ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...
3. ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..
4. ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!
5. ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...


Click it and Unblock the Notifications








