ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದು, ಸುಧಾರಿತ ತಂತ್ರಜ್ಞಾನ, ಪವರ್ ಫುಲ್ ಎಂಜಿನ್ ಹೊಂದಿರುವ ಹೊಸ ಸ್ಕೂಟರಿನ ಬೆಲೆಗಳು ಎಕ್ಸ್‌ಶೋರಂ ಪ್ರಕಾರ ರೂ. 57,750 ರಿಂದ ಆರಂಭಗೊಳ್ಳಲಿವೆ.

By Praveen Sannamani

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದು, ಸುಧಾರಿತ ತಂತ್ರಜ್ಞಾನ, ಪವರ್ ಫುಲ್ ಎಂಜಿನ್ ಹೊಂದಿರುವ ಹೊಸ ಸ್ಕೂಟರಿನ ಬೆಲೆಗಳು ಎಕ್ಸ್‌ಶೋರಂ ಪ್ರಕಾರ ರೂ. 57,750 ರಿಂದ ಆರಂಭಗೊಳ್ಳಲಿವೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಬಿಡುಗಡೆ ಅವಧಿಯಲ್ಲಿ ಮ್ಯಾಟೆ ಯೆಲ್ಲೋ, ಮ್ಯಾಟೆ ಗ್ರೀನ್, ಮ್ಯಾಟೆ ರೆಡ್ ಮತ್ತು ಮ್ಯಾಟೆ ವೈಟ್ ಬಣ್ಣಗಳಲ್ಲಿ ಲಭ್ಯವಾಗಿದ್ದ ಎನ್‌ಟಾರ್ಕ್ 125 ಸ್ಕೂಟರ್‌ಗಳು ಇದೀಗ ಗ್ರಾಹಕರ ಆದ್ಯತೆ ಮೇರೆಗೆ ಮೆಟಾಲಿಕ್ ಬ್ಲ್ಯೂ ಮತ್ತು ಮೆಟಾಲಿಕ್ ಗ್ರೇ ಬಣ್ಣಗಳಲ್ಲಿ ಹೊಸ ಸ್ಕೂಟರ್‌ಗಳನ್ನು ಪರಿಚಯಿಸಲಾಗಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಹತ್ತು ಹಲವು ವಿಶೇಷತೆಗಳಿಂದಾಗಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಠಿಯಾಗಿದ್ದು, ಪ್ರಿಮಿಯಂ ಸ್ಕೂಟರ್ ಪ್ರಿಯರನ್ನು ಸೆಳೆಯುತ್ತಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ. ಇದರ ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಎಂಜಿನ್ ವೈಶಿಷ್ಟ್ಯತೆ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 125 ಸಿಸಿ ಸಿವಿಐಟಿ ರೆವ್ ಎಂಜಿನ್ ಹೊಂದಿದ್ದು, 9.27-ಬಿಎಚ್‌ಪಿ ಮತ್ತು 10.4-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಈ ಮೂಲಕ ಪ್ರತಿ ಗಂಟೆಗೆ 95 ಕಿಮಿ ಟಾಪ್ ಸ್ಪೀಡ್ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳು, ಪ್ರಸ್ತುತ ಸ್ಕೂಟರ್ ಮಾದರಿಗಳಿಂತ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಕಾಯ್ದುಕೊಂಡಿವೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಇನ್ನು ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೆಯೇ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದ್ದು, 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್ ಪಡೆದುಕೊಂಡಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಎನ್‌ಟಾರ್ಕ್ 125 ವಿಶೇಷತೆ ಏನು?

ಎನ್‌ಟಾರ್ಕ್ 125 ಸ್ಕೂಟರ್‌ಗಳು ಮುಂದುವರಿದ SmartXonnect ತಂತ್ರಜ್ಞಾನ ತಹಳದಿಯಲ್ಲಿ ನಿರ್ಮಾಣವಾಗಿದ್ದು, ಬ್ಲೂಟೂತ್ ಸಂಪರ್ಕ ಹೊಂದಿದ ಮೊದಲ ಸ್ಮಾರ್ಟ್ ಸ್ಕೂಟರ್ ಇದಾಗಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಆಕರ್ಷಕವಾದ ಡೇ ಟೈಮ್ ರನ್ನಿಂಗ್ ಲೈಟ್ಸ್ ಜತೆಗೆ ಹ್ಯಾಂಡಲ್ ಬಾರ್‌ನಲ್ಲೇ ಇಂಡಿಕೇಟರ್ ಕೊಡಲಾಗಿದೆ. ಹಾಗಿಯೇ ಹಿಂದುಗಡೆಯೂ ಎಲ್‌ಇಡಿ ಟೈಲ್ ಲ್ಯಾಂಪ್ ಸೇವೆಯಿರಲಿದ್ದು, 12 ಇಂಚುಗಳ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಇವೆಲ್ಲದರ ಜತೆಗೆ ಸಂಪೂರ್ಣ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್, ಮೊಬೈಲ್ ಚಾರ್ಜಿಂಗ್ ಸ್ಲಾಟ್, ಕಾರ್ ಐಡಿ, ಪಾರ್ಕಿಂಗ್ ಲೋಕೆಷನ್ ಇತ್ಯಾದಿ ಸೇವೆಗಳನ್ನು ಒದಗಿಸಲಿದ್ದು, ಲ್ಯಾಪ್ ಟೈಮರ್, ಟಾಪ್ ಹಾಗೂ ಸರಾಸರಿ ವೇಗದ ಮಾಹಿತಿಯನ್ನು ಕೂಡಾ ನೀಡಲಿದೆ.

ಮತ್ತೇರಡು ವಿನೂತನ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎನ್‌ಟಾರ್ಕ್ 125

ಬ್ರೇಕಿಂಗ್ ಸಿಸ್ಟಂ

ನೋಡಲು ಬಲಿಷ್ಠವಾಗಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಪೆಟಲ್ ಡಿಸ್ಕ್ ಬ್ರೇಕ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಪಾರ್ಕಿಂಗ್ ಬ್ರೇಕ್, ಮಲ್ಟಿಪಲ್ ರೈಡಿಂಗ್ ಮೂಡ್‌ಗಳನ್ನು ಅಳವಡಿಸಲಾಗಿದೆ.

Most Read Articles

Kannada
Read more on scooter
English summary
TVS NTorq 125 Now With Two New Colour Options — With Metallic Paint Scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X