ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಅಮೆರಿಕಾ ಮೂಲದ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಯುನೈಟೆಡ್ ಮೋಟಾರ್ಸ್ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ತನ್ನ ಹೊಸ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕನ್ನು ಬಿಡುಗಡೆಗೊಳಿಸಿದೆ.

By Rahul Ts

ಅಮೆರಿಕಾ ಮೂಲದ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಯುನೈಟೆಡ್ ಮೋಟಾರ್ಸ್ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ತನ್ನ ಹೊಸ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕನ್ನು ಬಿಡುಗಡೆಗೊಳಿಸಿದ್ದು, ಈ ಬೈಕಿನ ಫೀಚರ್ಸ್, ಬೆಲೆ ಮತ್ತು ವಿನ್ಯಾಸದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್ ಕ್ಲಾಸಿಕ್ ಚಾಲನೆಗೂ ಮತ್ತು ಆಫ್ ರೋಡಿಂಗ್ ಚಾಲನೆಗೂ ಉಪಯೋಗಿಸುವಂತಹ ಮಲ್ಟಿಪಲ್ ಬೈಕ್ ಇದಾಗಿದ್ದು, ಯುಎಂ ರೆನೆಗೆಡ್ ಡ್ಯೂಟಿ ಎಸ್ ಮಾದರಿಗಳಲ್ಲಿ ಪ್ರಮುಖವಾಗಿ ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕಿಗೆ ಕ್ರೂಸರ್ ಲುಕ್ ಕೊಡಲು ಸಾಧಾರಣ ಬಾಡಿ ಪ್ಯಾನೆಲ್ ಗಳನ್ನು ಬಳಸಲಾಗಿದೆ. ಮೇಟ್ಯಾ ಗ್ರೀನ್ ಪೇಂಟ್ ಬೈಕಿನ ಗುಣ ಲಕ್ಷಣವನ್ನು ಹೆಚ್ಚಿಸುತ್ತದೆ. ಹಾಗೆಯೇ ಎರಡು 7- ಸ್ಪೋರ್ಕ್ ಅಲಾಯ್ ಚಕ್ರಗಳನ್ನು (17- ಇಂಚು ಮುಂದೆ ಹಾಗು 15- ಇಂಚು ಹಿಂದೆ) ಕೂಡ ಹೊಂದಿದೆ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಬೈಕಿನ ಮುಂಭಾಗದ ಫೋರ್ಕ್ಸ್ ಎಲ್ಇಡಿ ಸ್ಟ್ರಿಪ್ಸ್ ಮತ್ತು ರಿಪ್ಲೆಕ್ಟರ್ ಅನ್ನು ಮಧ್ಯಭಾಗದಲ್ಲಿ ಪಡೆದಿದ್ದು, ಈ ಎರಡು ಅಂಶಗಳು ಬೈಕಿಗೆ ಬೈಕನ್ನು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಕಾಣಿಸಿಕೊಳ್ಳಲ್ಲು ಸಹಕಾರಿಯಾಗಿದೆ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಯುಎಂ ರೆನೆಗೆಡ್ ಬೈಕ್ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಮತ್ತು ರಿಫ್ಲೆಕ್ಟರ್ ಅನ್ನು ಬಳಸಲಿದ್ದು, ನಂಬರ್ ಪ್ಲೇಟನ್ನು ಗೋಚರಿಸಲು ಟೈಲ್ ಲ್ಯಾಂಪ್ ಬಿಳಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಬೈಕಿನ ಸೀಟ್ ಪಿಲಿಯಾನ್ ಬ್ಯಾಕ್ ರೆಸ್ಟ್ ಅಥವಾ ಗ್ರಾಬ್ ರೈಲ್ ಅನ್ನು ಪಡೆದಿರುವುದಿಲ್ಲ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

223 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿರುವ ರೆನೆಗೆಡ್ ಡ್ಯೂಟಿ ಸೀರಿಸ್ ಬೈಕ್‌ಗಳು, 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿವೆ. ಈ ಮೂಲಕ 16- ಬಿಹೆಚ್ ಪಿ ಮತ್ತು 17-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಇನ್ನು ಬೈಕ್ ಮುಂಭಾಗದಲ್ಲಿ 41 ಎಂಎಂ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಡ್ಯುಯಲ್ ಹೈಡ್ರಾಲಿಕ್ ಸ್ಪ್ರಿಂಗ್ ಅಳವಡಿಕೆ ಇದ್ದು, ಆರಾಮದಾಯಕವಾಗಿ ಬೈಕ್ ಸವಾರಿ ಮಾಡಲು ಅಗಲ ಹ್ಯಾಂಡಲ್‌ಗಳನ್ನು ನೀಡಲಾಗಿದೆ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಯುಎಂ ಡ್ಯುಟಿ ಸಿರೀಸ್ ಬೈಕ್‌ಗಳಲ್ಲಿ ಮುಂಭಾಗ ಚಕ್ರಗಳು 120/80 ಆರ್17 ಟೈರ್ ಬಳಕೆ ಮಾಡಲಾಗಿದ್ದು, ಹಿಂಭಾಗದಲ್ಲಿ 130/90 ಆರ್15 ಟೈರ್ ಗಳನ್ನು ಪಡೆದುಕೊಂಡಿದೆ. 1360ಎಂಎಂ ವೀಲ್ ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ರೆನೆಗೆಡ್ ಡ್ಯೂಟಿ ಎಸ್ ಬೈಕ್‌ ಡಿಜಿ ಅನಾಲಾಗ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಗೇರ್ ಪೊಸಿಷನ್ ಇಂಡಿಕೇಟರ್ ಗಳನ್ನು ಹೊಂದಿದ್ದು, ಎರಡೂ ಬೈಕುಗಳು ಎಲ್ಇಡಿ ಹೆಡ್ ಲೈಟ್ಸ್ ಮತ್ತು ಟೈಲ್ ಲೈಟ್ ಗಳನ್ನು ಪಡೆದುಕೊಂಡಿವೆ.

ಅವೆಂಜರ್ 220 ಬೈಕಿಗೆ ಟಾಂಗ್ ಕೊಡಲು ಬಂದ ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್

ಯುಎಂ ರೆನೆಗೆಡ್ ಡ್ಯೂಟಿ ಎಸ್ ಬೈಕ್‌ ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 1.10 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಬಜಾಜ್ ಅವೆಂಜರ್ ಸೀರಿಸ್, ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಮತ್ತು ಸುಜುಕಿ ಇಂಟ್ರೂಡರ್ ಬೈಕ್ ಗಳೊಂದಿಗೆ ಪ್ರತಿಸ್ಪರ್ಧಿಸಲಿದೆ.

Most Read Articles

Kannada
English summary
UM Renegade Duty S Top Features: Rugged Design, LED-Strip On Forks, Digital+Analog Console & More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X