ಆಟೋ ಎಕ್ಸ್ ಪೋ 2018: ಆರ್‌ಸಿ 390 ಗೆ ಪೈಪೋಟಿ ನೀಡಲು ಯಮಹಾ ಆರ್3 ಬಿಡುಗಡೆ

Written By: Rahul

ಯಮಹಾ ಸಂಸ್ಥೆಯು ತನ್ನ ಹೊಸ ಸ್ಪೋರ್ಟ್ಸ್ ಬೈಕ್ ಆರ್3 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಎಕ್ಸ್ ಶೋರಂ ಬೆಲೆಯು 3.48 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ರೇಸಿಂಗ್ ಬ್ಲೂ ಮತ್ತು ಮಗ್ಮಾ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಈ ಬೈಕ್ ದೊರೆಯಲಿದೆ.

ಆಟೋ ಎಕ್ಸ್ ಪೋ 2018: ಆರ್‌ಸಿ 390 ಗೆ ಪೈಪೋಟಿ ನೀಡಲು ಯಮಹಾ ಆರ್3 ಬಿಡುಗಡೆ

ಎಂಜಿನ್ ಸಾಮರ್ಥ್ಯ

ಯಮಹಾ ಆರ್3 ಬೈಕ್ ಬಿಸ್-4 ಎಂಜಿನ್ ಆಧಾರಿತವಾಗಿದ್ದು, ಹಳೆಯ ಆರ್3 ಬೈಕಿನಲ್ಲಿ ಬಳಸಲಾದ ಲಿಕ್ವಿಡ್ ಕೂಲ್ಡ್ 321 ಸಿಸಿ ಟ್ವಿಲ್ ಲೈನ್ ಎಂಜಿನ್ ಅನ್ನು ಬಳಸಲಾಗಿದೆ. ಹಾಗೆಯೇ ಬೈಕ್ ಎಂಜಿನ್ 41ಬಿಹೆಚ್ ಪಿ ಮತ್ತು 29.6 ಟಾರ್ಕ್ ಅನ್ನು ಬಿಡುಗಡೆಗೊಳಿಸಿವ ಶಕ್ತಿಯನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಆರ್‌ಸಿ 390 ಗೆ ಪೈಪೋಟಿ ನೀಡಲು ಯಮಹಾ ಆರ್3 ಬಿಡುಗಡೆ

ಬೈಕಿನ ಸಸ್ಪೆಂಷನ್ ಸೆಟಪ್ ಮುಂಭಾಗದಲ್ಲಿ 41 ಎಂಎಂ ಕಯಾಬ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಪ್ರೀಲೋಡೆಡ್-ಅಡ್ಜಸ್ಟ್ ಮೋನೋಶಾಕ್ ಅನ್ನು ಹೊಂದಿದ್ದು, ಮುಂದೆ 298 ಎಂಎಂ ಡಿಸ್ಕ್ ಮತ್ತು 220 ಎಂಎಂ ರಿರ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಆರ್‌ಸಿ 390 ಗೆ ಪೈಪೋಟಿ ನೀಡಲು ಯಮಹಾ ಆರ್3 ಬಿಡುಗಡೆ

ಆದರೆ ಹೊಸ ಯಮಹಾ ಆರ್3 ಬೈಕಿನಲ್ಲಿ ನಾವು ಹೊಸದಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಬ್ರೇಕ್ ಸಿಸ್ಟಂಅನ್ನು ಬಳಸಿರುವುದು ಕಾಣಬಹುದಾಗಿದ್ದು, ಬೈಕಿನ ಮುಂಭಾಗದ ಚಕ್ರವು 110/70 ಆರ್17 ಮತ್ತು ಹಿಂಭಾಗದ ಚಕ್ರವು 140/70 ರಬ್ಬರ್ ಚಕ್ರಗಳನ್ನು ಪಡೆದುಕೊಂಡಿದೆ.

ಆಟೋ ಎಕ್ಸ್ ಪೋ 2018: ಆರ್‌ಸಿ 390 ಗೆ ಪೈಪೋಟಿ ನೀಡಲು ಯಮಹಾ ಆರ್3 ಬಿಡುಗಡೆ

ಬೈಕ್ ವಿನ್ಯಾಸ

ಹಳೆಯ ಯಮಹಾ ಆರ್3 ಬೈಕಿನಲ್ಲಿ ಇದ್ದ ಹಾಗೆಯೇ ಟ್ವಿನ್-ಪೋಡ್ ಹೆಡ್-ಲೈಟ್, ಸೆಮಿ-ಡಿಜಿಟಲ್ ಇಂಸ್ಟ್ರೂಮೆಂಟ್ ಕ್ಲಸ್ಟರ್ನ್, ಡ್ಯುಯಲ್ ಟ್ರಿಪ್ ಮೀಟರ್, ಆವೆರೇಜ್ ಫ್ಯುಯಲ್ ಕಂಸಪ್ಷನ್ ಹಾಗೆಯೇ ಇದು ರೇಸಿಂಗ್ ಬ್ಲೂ ಮತ್ತು ಮಗ್ಮಾ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ದೊರೆಯಲ್ಲಿದೆ.

ಆಟೋ ಎಕ್ಸ್ ಪೋ 2018: ಆರ್‌ಸಿ 390 ಗೆ ಪೈಪೋಟಿ ನೀಡಲು ಯಮಹಾ ಆರ್3 ಬಿಡುಗಡೆ

ಸುಮಾರು ಒಂದು ವರ್ಷದ ನಂತರ ಯಮಾಹಾ ಆರ್3 ಬೈಕ್ ಯಾಂತ್ರಿಕ ಹಾಗು ಕಾಸ್ಮೆಟಿಕ್ ಬದಲಾವಣೆಯ ನಂತರ ಭಾರತದಲ್ಲಿ ಮತ್ತೆ ಕಾಲಿಟ್ಟಿದ್ದು, ಯಾಂತ್ರಿಕತೆಯಲ್ಲಿ ಬೈಕ್ ಎಬಿಎಸ್ ಮತ್ತು ಮೆಟ್ಜೆಲೆರ್ ಟೈರ್ ಮತ್ತು ಬಿಎಸ್-4 ಎಂಜಿನ್ ಆಧಾರಿತ ಬೈಕಾಗಿ ಪರಿವರ್ತನೆಯಾಗಿದೆ.

ಆಟೋ ಎಕ್ಸ್ ಪೋ 2018: ಆರ್‌ಸಿ 390 ಗೆ ಪೈಪೋಟಿ ನೀಡಲು ಯಮಹಾ ಆರ್3 ಬಿಡುಗಡೆ

ಈ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯ ಅಪಾಚೆ ಆರ್ ಆರ್310 ಮತ್ತು ಕೆಟಿಎಂ ಆರ್ 390 ಬೈಕುಗಳಿಗೆ ಪ್ರತಿಸ್ಪರ್ಧಿಯಾಗಿದೆ ಎನ್ನಬಹುದು.

Read more on yamaha auto expo 2018
English summary
New Yamaha R3 Launched At Rs 3.48 Lakhs - Specs, Top Speed, Features & Images.
Story first published: Saturday, February 10, 2018, 18:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark