ಬಹಿರಂಗಗೊಂಡ 2020ರ ಡಾಕರ್ ರ್‍ಯಾಲಿ ಮಾರ್ಗಗಳು

ಡಾಕರ್ ರ‍್ಯಾಲಿ ಆಯೋಜಕ ಸಂಸ್ಥೆಯಾದ ಅಮೋರಿ ಸ್ಪೋರ್ಟ್ ಆರ್ಗಾನೈಸೇಷನ್ 2020ನೇ ಸಾಲಿನ ಪ್ರಪಂಚದ ಕಠಿಣ ಆಫ್ ರೋಡಿಂಗ್ ರೇಸ್ ಮಾರ್ಗಗಳನ್ನು ಬಹಿರಂಗಗೊಳಿಸಿದ್ದು, 2020ರ ಆರಂಭದಲ್ಲಿ ಡಾಕರ್ ರ‍್ಯಾಲಿ ಸೌದಿ ಅರೇಬಿಯಾದಲ್ಲಿ ಆರಂಭಗೊಳ್ಳಲಿದೆ.

ಬಹಿರಂಗಗೊಂಡ 2020ರ ಡಾಕರ್ ರ್‍ಯಾಲಿ ಮಾರ್ಗಗಳು

ಬೈಕ್ ಚಾಲಕರು, ವಿಸ್ತಿರ್ಣದಲ್ಲಿ ಮಧ್ಯ ಏಷ್ಯಾದಲ್ಲಿಯೇ ದೊಡ್ಡ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ 12 ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ರ‍್ಯಾಲಿಯ ಮಧ್ಯೆ ರಾಜಧಾನಿ ರಿಯಾದ್ ನಲ್ಲಿ ಒಂದು ದಿನದ ವಿಶ್ರಾಂತಿ ಪಡೆದ ನಂತರ ಸುಮಾರು 9,000 ಕಿ,ಮೀ ಗೂ ಹೆಚ್ಚು ದೂರವಿರುವ ರೇಸ್ ನಲ್ಲಿ ಸ್ಪರ್ಧಿಸಬೇಕಿದೆ. 2020ರ ಡಾಕರ್ ರ್‍ಯಾಲಿ, ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾದಿಂದ ಒಂದು ಗಂಟೆ ಪ್ರಯಾಣದಷ್ಟು ದೂರದಲ್ಲಿರುವ ಬಂದರು ನಗರ ಜೆಡ್ಡಾದಲ್ಲಿ 5ನೇ ಜನವರಿ 2020 ರಂದು ಆರಂಭವಾಗಲಿದೆ.

ಬಹಿರಂಗಗೊಂಡ 2020ರ ಡಾಕರ್ ರ್‍ಯಾಲಿ ಮಾರ್ಗಗಳು

ಜೆಡ್ಡಾದಿಂದ ಆರಂಭವಾಗುವ ರ್‍ಯಾಲಿಯು ಉತ್ತರದ ಕಡೆಗೆ ಸಾಗಿ, ನಂತರ ಆಗ್ನೇಯ ದಿಕ್ಕಿನತ್ತ ತಿರುಗಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಗೆ 11ನೇ ಜನವರಿ 2020ರಂದು ಬರಲಿದ್ದು ಎಲ್ಲಾ ಸ್ಪರ್ಧಿಗಳು ಒಂದು ದಿನದ ವಿಶ್ರಾಂತಿ ಪಡೆಯಲಿದ್ದಾರೆ.

ಬಹಿರಂಗಗೊಂಡ 2020ರ ಡಾಕರ್ ರ್‍ಯಾಲಿ ಮಾರ್ಗಗಳು

ರಿಯಾದ್ ನಲ್ಲಿ ವಿಶ್ರಾಂತಿ ಪಡೆದ ನಂತರ ಸ್ಪರ್ಧಿಗಳು ದಕ್ಷಿಣ ದಿಕ್ಕಿನತ್ತ ತಿರುಗಿ ಪ್ರಪಂಚದ ಅತಿ ದೊಡ್ಡ ಮರಳು ಮರುಭೂಮಿ ಎನಿಸಿರುವ ರುಬ್ ಅಲ್ ಖಲಿ ತಲುಪಲಿದ್ದಾರೆ. ನಂತರ ಪಶ್ಚಿಮದತ್ತ ತಿರುಗಿ ನಂತರ ಉತ್ತರಕ್ಕೆ ತಿರುಗಿ ರಿಯಾದ್ ನಿಂದ 40 ಕಿ,ಮೀ ದೂರವಿರುವ ಅಲ್-ಕಿದ್ದಿಯಾಕ್ಕೆ ತೆರಳುವರು.

ಬಹಿರಂಗಗೊಂಡ 2020ರ ಡಾಕರ್ ರ್‍ಯಾಲಿ ಮಾರ್ಗಗಳು

ಇದು ರ್‍ಯಾಲಿಯ ಅಂತಿಮ ಸ್ಥಳವಾಗಿದ್ದು, 17ನೇ ಜನವರಿ 2020ರಂದು ಕೊನೆಗೊಳ್ಳಲಿದೆ. ರ್‍ಯಾಲಿಯ ಕೆಲವು ಹಂತಗಳು ಮರಳಿನ ದಿಬ್ಬಗಳನ್ನು ಹೊಂದಿದ್ದರೆ, ಆರಂಭಿಕ ಹಂತದಲ್ಲಿ ಬೆಟ್ಟಗಳು ಮತ್ತು ಡಬ್ಲೂಆರ್ ಸಿ ರ್‍ಯಾಲಿ ಹಂತಗಳಿರಲಿವೆ. ಹೊಸ ಮಾರ್ಗಗಳ ಬಗ್ಗೆ ಮಾತನಾಡಿದ ಡಾಕರ್ ರ್‍ಯಾಲಿಯ ನಿರ್ದೇಶಕ ಡೇವಿಡ್ ಕಾಸ್ಟೆರಾ ರವರು, ಮೊದಲು ದಕ್ಷಿಣ ಅಮೆರಿಕ ನಂತರ ಏಷ್ಯಾ. ಈ ರ್‍ಯಾಲಿಯ ಇತಿಹಾಸದ ಮೂರನೇ ಅಧ್ಯಾಯವು ಡಾಕರ್ ನಂತಹ ರ್‍ಯಾಲಿಯ ಮೂಲಕ ಹೆಚ್ಚು ಆಕರ್ಷಕವಾಗಿ ಮತ್ತು ಉಲ್ಲಾಸಿತವಾಗಿದೆ.

MOST READ: ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಎನರ್ಜಿ

ಬಹಿರಂಗಗೊಂಡ 2020ರ ಡಾಕರ್ ರ್‍ಯಾಲಿ ಮಾರ್ಗಗಳು

ನಾನು 25 ವರ್ಷಗಳ ಹಿಂದೆ ಈ ರ್‍ಯಾಲಿಯ ಬಗ್ಗೆ ಆಕರ್ಷಿತನಾಗಿದ್ದೆ, ಆಗ ಮೊದಲ ಬಾರಿಗೆ ನನ್ನ ಬೈಕ್ ಅನ್ನು ಸಹರಾ ಮರುಭೂಮಿಯಲ್ಲಿ ಚಲಾಯಿಸಿದ್ದೆ. ಈಗ ಆಯೋಜಕ ತಂಡಗಳ ನಡುವೆ ಸೇರಿ, ಹೊಸ ಸಾಹಸವನ್ನು ಮಧ್ಯ ಏಷ್ಯಾದಲ್ಲಿ ಆರಂಭಿಸಲಾಗಿದೆ. ಈ ಭಾಗದ ದೊಡ್ಡ ದೇಶದಲ್ಲಿ ಕಠಿಣ ಮಾರ್ಗದಲ್ಲಿ ರ್‍ಯಾಲಿಯನ್ನು ಆಯೋಜಿಸಲಾಗಿದೆ. ಡಾಕರ್ ರ್‍ಯಾಲಿಯ 42ನೇ ಆವೃತ್ತಿಯನ್ನು ಈ ದೇಶದ ಮರುಭೂಮಿ, ಗುಡ್ಡಗಾಡು, ಕಣಿವೆ ಮತ್ತು ಕರಾವಳಿ ತೀರಗಳಲ್ಲಿ ಆಯೋಜಿಸಿರುವುದು ಖುಷಿಯ ವಿಚಾರ, ಸ್ಪರ್ಧಿಗಳು ಯಾವುದೇ ದೇಶದವರಾಗಿರಲಿ, ಅವರ ಉದ್ದೇಶ ಏನೇ ಇರಲಿ, ಅವರ ಧೈರ್ಯ, ಸಾಹಸಗಳು ಸೌದಿ ಅರೇಬಿಯಾದ ಟ್ರಾಕ್ ಮತ್ತು ದಿಬ್ಬಗಳಲ್ಲಿ ಬೆಳಕಿಗೆ ಬರಲಿವೆ ಎಂದು ತಿಳಿಸಿದರು.

Most Read Articles

Kannada
English summary
2020 Dakar Rally Route Revealed — Riders & Drivers To Battle The Dunes For Over 9,000 Kilometers - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X