ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಪ್ಯೂರ್ ಎನರ್ಜಿ

ಹೈದರಾಬಾದ್ ನ ಐಐಟಿ ಯಲ್ಲಿರುವ ಪ್ಯೂರ್ ಎನರ್ಜಿ, ಸ್ಟಾರ್ಟ್ ಅಪ್ ಕಂಪನಿ ಪ್ಯೂರ್ ಇವಿ ಹೆಸರಿನಲ್ಲಿ ಹೊಸ ಎಲೆಕ್ಟ್ರಿಕ್ ಟೂ ವ್ಹೀಲರ್ ಬಿಡುಗಡೆ ಮಾಡಿದೆ. ಭಾರತೀಯ ರಸ್ತೆಗಳಿಗಾಗಿಯೇ ದೂರ ಪಯಣಕ್ಕಾಗಿ ಹೆಚ್ಚು ದಕ್ಷತೆ ಹೊಂದಿರುವ ದ್ವಿಚಕ್ರವಾಹನಗಳನ್ನು ಪ್ಯೂರ್ ಇವಿ ಬಿಡುಗಡೆಗೊಳಿಸಿದೆ.

ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, ಪ್ಯೂರ್ ಎನರ್ಜಿ ಕಂಪನಿಯು - ದಿ ಇಗ್ನೈಟ್, ದಿ ಇಟ್ರಾನ್ಸ್, ದಿ ಇಪ್ಲೂಟೊ, ದಿ ಇಟ್ರಾನ್ - ಎಂಬ ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಸುಮಾರು 10,000 ವಾಹನಗಳನ್ನು 2019-20ರ ಸಾಲಿನಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಡೀಲರ್ ಗಳನ್ನು ನಿಯೋಜಿಸಲು ಶುರು ಮಾಡಿದ್ದು ಈ ವಾಹನವನ್ನು ವಾಣಿಜ್ಯಕವಾಗಿ ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಪ್ಯೂರ್ ಇವಿ, ಪ್ಯೂರ್ ಎನರ್ಜಿಯ ಎಲೆಕ್ಟ್ರಿಕ್ ವೆಹಿಕಲ್ ವಿಂಗ್ ಆಗಿದೆ. ಹೈದರಾಬಾದ್ ನ ಐಐಟಿ ಕ್ಯಾಂಪಸ್ ನಲ್ಲಿರುವ 18,000 ಚ.ಅಡಿ ಜಾಗದಲ್ಲಿ ತಲೆಯೆತ್ತಿದೆ. ಈ ಘಟಕವನ್ನು ಎಲೆಕ್ಟ್ರಿಕ್ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ.

ಇದರ ಜೊತೆಯಲ್ಲಿ ಹೈ ಪರ್ಫಾಮೆನ್ಸ್ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಸಹ ಕಂಪನಿಯು ತಯಾರಿಸುತ್ತದೆ. ಪ್ಯೂರ್ ಎನರ್ಜಿಯ ಸ್ಥಾಪಕರಾದ ನಿಶಾಂತ್ ಡೊಂಗರಿರವರ ಪ್ರಕಾರ, ಲಿಥಿಯಂ ಬ್ಯಾಟರಿ ಪ್ಯಾಕ್ ಅನ್ನು ನಾವು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ತಯಾರಿಸಿದ್ದೇವೆ. ಇದನ್ನು ದ್ವಿಚಕ್ರ ವಾಹನದಲ್ಲಿ ಅಳವಡಿಸಲು ಹೆಚ್ಚಿನ ಶ್ರಮ ಹಾಕಲಾಗಿದೆ.

ದ್ವಿ ಚಕ್ರವಾಹನಗಳಲ್ಲಿ ಅಳವಡಿಸಲು ಕ್ರಿಯಾಶೀಲವಾಗಿರುವ ಥರ್ಮಲ್ ಮ್ಯಾನೇಜ್ ಮೆಂಟ್ ಸಿಸ್ಟಂ, ವೆಹಿಕಲ್ ಏರೋ ಡೈನಾಮಿಕ್ಸ್ ಮತ್ತು ಕಡಿಮೆ ತೂಕ ಹೊಂದಿರುವ, ವೇಗವಾಗಿ ಚಾರ್ಜ್ ಆಗಬಲ್ಲ ಚಾರ್ಜರ್ ಗಳನ್ನು ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸುತ್ತಿದ್ದೇವೆ. ಇದರಿಂದ ನಾವು ಮುಂದಿನ ದಿನಗಳಲ್ಲಿ ಹೆಚ್ಚು ವೇಗವಾಗಿ ಚಲಿಸುವ ವಾಹನಗಳನ್ನು ಬಿಡುಗಡೆ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕಂಪನಿಯು ಬೇರೆ ಇವಿ ಸ್ಟಾರ್ಟ್ ಅಪ್ ಗಳ ಜೊತೆಯಲ್ಲಿ ಕೈ ಜೋಡಿಸಿ ಹೈ ವೋಲ್ಟೆಜಿನ ಲಿಥಿಯಂ ಬ್ಯಾಟರಿಗಳನ್ನು, ಮೂರು ಮತ್ತು ನಾಲ್ಕು ಚಕ್ರಗಳ ವಾಹನಗಳಿಗಾಗಿ, ಅಭಿವೃದ್ಧಿ ಪಡಿಸಲು ಮತ್ತು ಪೂರೈಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ಯೂರ್ ಇವಿಯ ಸಿಇಒ ರೋಹಿತ್ ವಡೇರಾರವರು ಮಾತನಾಡಿ, ಎಲೆಕ್ಟ್ರಿಕ್ ಬೈಕ್ ಮತ್ತು ದ್ವಿ ಚಕ್ರ ವಾಹನಗಳಿಗಾಗಿ ನಾವು ಆಟೋಮೋಟಿವ್ ರಿಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾದಿಂದ ಅನುಮತೆ ಪಡೆದಿದ್ದೇವೆ. ಕಂಪನಿಯು ಸ್ಪಾಟ್ ಟೆಸ್ಟ್ ಮಾಡುವುದಕ್ಕಾಗಿ ಮತ್ತು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ನಮ್ಮ ವಾಹನಗಳು ಸಾಂಪ್ರಾದಾಯಿಕ ಮಾದರಿಯ ವಾಹನಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದ್ದು, ಪ್ರತಿ ಕಿ.ಮೀಗೆ 5 ಪೈಸೆಗಿಂತ ಕಡಿಮೆ ಖರ್ಚಾಗಲಿದೆ. ನಾವು ಈ ಬಗ್ಗೆ ಕಾರ್ಯನಿರತರಾಗಿದ್ದು, ಈ ಆರ್ಥಿಕ ವರ್ಷದಲ್ಲಿ 10,000 ಕ್ಕಿಂತ ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

MOST READ: ಬಿಡುಗಡೆಗೆ ಕ್ಷಣಗಣನೆ- ಹೀರೋ ಟ್ವಿನ್ ಬೈಕ್‌ಗಳ ಖರೀದಿಗೆ ಬುಕ್ಕಿಂಗ್ ಆರಂಭ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ಯೂರ್ ಎನರ್ಜಿ, ಇವಿ ಸ್ಟಾರ್ಟ್ ಅಪ್ ಗಳಲ್ಲಿರುವ ಮತ್ತೊಂದು ಕಂಪನಿಯಾಗಿದೆ. ಮುಂದಿನ ತಿಂಗಳಲ್ಲಿ ತಮ್ಮ ವಾಹನವನ್ನು ಬಿಡುಗಡೆ ಮಾಡಲು ಚಿಂತಿಸಿದ್ದು, ನಾಲ್ಕು ವಿವಿಧ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಬಿಡುಗಡೆಗೊಳಿಸಿರುವ ಚಿತ್ರಗಳಿಂದ ಈ ವಾಹನಗಳ ವಿನ್ಯಾಸವು ಗಮನ ಸೆಳೆಯುತ್ತದೆ. ಇ ಪ್ಲೂಟೊ ವನ್ನು ಗಮನಿಸಿದರೆ ವೆಸ್ಪಾ ದಂತೆ ಕಾಣುತ್ತದೆ.

Most Read Articles

Kannada
English summary
IIT Hyderabad Based Start up PuREnergy Launches Two Wheelers — Going Commercial In May - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X