ಅಗ್ಗದ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಅಥೆರ್
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಸದ್ಯ 450 ಮತ್ತು 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಅಥೆರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.1.02 ಲಕ್ಷಕ್ಕೆ(340) ಮತ್ತು ರೂ.1.12 ಲಕ್ಷಕ್ಕೆ(450) ಮಾರಾಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರೂ. 70 ಸಾವಿರದಿಂದ ರೂ.80 ಸಾವಿರ ಬೆಲೆ ಅಂತರದಲ್ಲಿ ಮಧ್ಯಮ ಗಾತ್ರದ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಅಥೆರ್ ಎನರ್ಜಿ ಸಂಸ್ಥೆಯು ಮುಂದಿನ 2 ವರ್ಷಗಳ ಯೋಜನೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಸಿದ್ದಪಡಿಸುತ್ತಿರುವುದಾಗಿ ಹೇಳಿಕೊಂಡಿದೆ.

ಇನ್ನು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಮತ್ತು ಖರೀದಿಸುವ ಗ್ರಾಹಕರಿಗೂ ಕೂಡಾ ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದೆ.

ಇದರಲ್ಲಿ ಪ್ರಮುಖವಾಗಿ ಜಿಎಸ್‌ಟಿ ದರ ಇಳಿಕೆಯು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ವರದಾನವಾಗಿದ್ದು, ಅಥೆರ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ. ಈ ಹಿಂದೆ ಫೇಮ್ ಯೋಜನೆಯ ಮೂಲಕ ಸಬ್ಸಡಿ ಯೋಜನೆಯನ್ನು ಘೋಷಿಸಿದ್ದ ಕೇಂದ್ರ ಸರ್ಕಾರವು ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಭಾರೀ ಕಡಿತ ಮಾಡಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ನೀತಿ ಆಯೋಗದ ಶಿಫಾರಸ್ಸು ಮೇರೆಗೆ ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಕ್ ವಾಹನ ಖರೀದಿದಾರರಿಗೂ ಸಾಕಷ್ಟು ಸಹಕಾರಿಯಾಗಲಿದೆ. ಇದರಿಂದ ಅಥೆರ್ ಸ್ಕೂಟರ್ ಬೆಲೆಯು ಜಿಎಸ್‌ಟಿ ಬದಲಾವಣೆ ನಂತರ ರೂ. 1.13 ಲಕ್ಷ( ಎಸ್ 340) ಮತ್ತು 1.24 ಲಕ್ಷ( ಎಸ್ 450)ದಿಂದ ರೂ.1.02 ಲಕ್ಷ(ಎಸ್ 340) ಮತ್ತು ರೂ.1.12 ಲಕ್ಷ(ಎಸ್ 450)ಕ್ಕೆ ಇಳಿಕೆಯಾಗಿದೆ.

ಹೊಸ ಆದೇಶದಿಂದಾಗಿ ಅಗಸ್ಟ್ 1ರಿಂದಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಲಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಇದಕ್ಕೆ ಹರ್ಷ ವ್ಯಕ್ತಪಡಿಸಿವೆ. ಯಾಕೆಂದ್ರೆ ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ವಾಹನ ಬೆಲೆ ಕಡಿಮೆಯಾಗಿ ಮಾರಾಟ ಪ್ರಮಾಣವು ಹೆಚ್ಚಲಿದೆ.

ಜೊತೆಗೆ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲಿ ಗ್ರೀನ್ ಸೆಸ್ ಹೆಚ್ಚಾಗುವುದರಿಂದ ಎಲೆಕ್ಟ್ರಿಕ್ ವಾಹನಗಳಿಗೂ ಇದು ಪೂರಕವಾಗಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರು ತೆರಿಗೆ ವಿನಾಯ್ತಿ ಸಹ ಪಡೆದುಕೊಳ್ಳಬಹುದಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಿರುವುದು ಎಲೆಕ್ಟ್ರಿಕ್ ವಾಹನಗಳಿಗೆ ಇದು ಸುಗ್ಗಿ ಕಾಲವೇ ಸರಿ.
MOST READ: ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಫೇಮ್ 2 ಯೋಜನೆ ಅಡಿ ಸಬ್ಸಡಿ ಸೇರಿದಂತೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದಲ್ಲಿ ಹಣ ವಿನಿಯೋಗ ಮಾಡಲಾಗುತ್ತಿದ್ದು, ಇದೀಗ ಜಿಟಿಎಸ್ ತಗ್ಗಿಸಿರುವುದು ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಸಹಕಾರಿಯಾಗಿಲಿದೆ.
MOST READ: ಗ್ರಾಹಕರಿಗೆ ಉಟ ಕೊಡುವ ಧಾವಂತವಲ್ಲಿ ಈ ಡೆಲಿವರಿ ಬಾಯ್ ಮಾಡಿದ ತಪ್ಪುಗಳು ಎಷ್ಟು ಗೊತ್ತಾ?

ಈ ಮೂಲಕ 2030ರ ವೇಳೆಗೆ ಶೇ.100 ರಷ್ಟು ವಾಹನಗಳನ್ನು ರಸ್ತೆಗಿಳಿಸಬೇಕೆಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹೊಸ ಬಜೆಟ್ ಪೂರಕವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳಲ್ಲಿ ರೂ.8 ಸಾವಿರದಿಂದ ರೂ.12 ಸಾವಿರ ಮತ್ತು ಎಲೆಕ್ಟ್ರಿಕ್ ಕಾರುಗಳ ಬೆಲೆಯು ರೂ.15 ಲಕ್ಷ ಇದ್ದಲ್ಲಿ ರೂ.1.20 ಲಕ್ಷದಿಂದ ರೂ.1.50 ಲಕ್ಷ ಬೆಲೆ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ.


Click it and Unblock the Notifications