ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಕೈಗೆಟುಕುವ ಬೆಲೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ದೆಹಲಿ ಮೂಲದ ಅವಾನ್ ಮೋಟಾರ್ಸ್ ಸಹ ತನ್ನ ಬಹುನೀರಿಕ್ಷಿತ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಅಥೆರ್, ಹೀರೋ ಮೋಟೋಕಾರ್ಪ್, ಒಕಿನಾವ ಸಂಸ್ಥೆಗಳು ತನ್ನ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಅವಾನ್ ಮೋಟಾರ್ಸ್ ಸಹ ಅತಿ ಕಡಿಮೆ ಬೆಲೆಯಲ್ಲಿ ಜೆರೊ ಪ್ಲಸ್ ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 47,000 ಬೆಲೆ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ 48ವ್ಯಾಟ್, 28ಎಹೆಚ್ ಲೀಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನೊಂದು ವಿಶೇಷ ಅಂದ್ರೆ, ಅವಾನ್ ಜೆರೊ ಪ್ಲಸ್ ಸ್ಕೂಟರ್‌ಗಳಲ್ಲಿ ಜೋಡಿಸಲಾಗಿರುವ ಲೀಥಿಯಂ ಅಯಾನ್ ಬ್ಯಾಟರಿಯನ್ನು ತೆಗೆದು ಹಾಕಬಹುದಾದ ಸೌಲಭ್ಯವನ್ನು ಹೊಂದಿದ್ದು, ದೂರದ ಪ್ರಯಾಣದ ವೇಳೆಯು ಹೆಚ್ಚುವರಿ ಬ್ಯಾಟರಿ ಚಾರ್ಜಿಂಗ್ ಮಾಡಿಕೊಂಡು ಪ್ರಯಾಣಿಸಲು ಅನುಕೂಲಕವಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಹೀಗಾಗಿ ಈ ಸ್ಕೂಟರ್‌ನಲ್ಲಿ ಎರಡು ಬ್ಯಾಟರಿಗಳನ್ನು ನೀಡಲಾಗಿದ್ದು, ಸಿಂಗಲ್ ಚಾರ್ಜ್ ಬ್ಯಾಟರಿ ಮಾದರಿಯು ಪ್ರತಿ ಚಾರ್ಜ್‌ಗೆ 60ಕಿ.ಮಿ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದಲ್ಲಿ ಡ್ಯುಯಲ್ ಬ್ಯಾಟರಿ ಸೌಲಭ್ಯದ ಮೂಲಕ ಒಟ್ಟು 110 ಕಿ.ಮಿ ಮೈಲೇಜ್ ಗಿಟ್ಟಿಸಿಕೊಳ್ಳಬಹುದಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಜೊತೆಗೆ ಅವಾನ್ ಜೆರೊ ಪ್ಲಸ್ ಸ್ಕೂಟರ್ ಮಾದರಿಯು 62 ಕೆ.ಜಿ ತೂಕವಿದ್ದು, ಗಂಟೆಗೆ 45 ಕಿ.ಮಿ ವೇಗದಲ್ಲಿ ಚಲಿಸುವ ಗುಣಹೊಂದಿದೆ. ಹೀಗಾಗಿ ಹೊಸ ಸ್ಕೂಟರ್‌ನಲ್ಲಿ ಗರಿಷ್ಠ 150 ಕೆ.ಜಿ ಸಾಗಾಣಿಕೆಗೆ ಅವಕಾಶವಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಕ್ವಾಯ್ಲ್ ಸ್ಪಿಂಗ್ ಸಸ್ಫೆಷನ್ ಬಳಕೆ ಮಾಡಲಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಹೊಸ ಜೆರೊ ಪ್ಲಸ್ ಸ್ಕೂಟರ್‌ನಲ್ಲಿ ಸುರಕ್ಷೆತೆಗೆ ಹೆಚ್ಚಿನ ಗಮನಹರಿಸಿರುವ ಅವಾನ್ ಮೋಟಾರ್ಸ್ ಸಂಸ್ಥೆಯು ಮುಂಭಾದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಒದಗಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಕೂಟರ್ ಹಿಂಭಾದಲ್ಲಿ ಟಾಪ್ ಬಾಕ್ಸ್ ಸೇರಿದಂತೆ ರೆಡ್, ವೈಟ್ ಮತ್ತು ಬ್ಲೂ ಬಣ್ಣಗಳ ಆಯ್ಕೆ ನೀಡಿದೆ.

MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಈ ಬಗ್ಗೆ ಮಾತನಾಡಿರುವ ಅವಾನ್ ಮೋಟಾರ್ಸ್ ಸಂಸ್ಥೆಯ ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಪಂಕಜ್ ತಿವಾರಿಯವರು, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆಯಿದ್ದು, ಗ್ರಾಹಕರನ್ನು ಸೆಳೆಯುವಂತ ಉತ್ತಮ ಮಾದರಿಯ ಎಲೆಕ್ಟ್ರಿಕ್ ವಾಹನ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಅವಾನ್ ಮೋಟಾರ್ಸ್ ಸಂಸ್ಥೆಯು ಸಹ ಜೆರೊ ಪ್ಲಸ್ ಪರಿಚಯಿಸುವ ಮೂಲಕ ಹೊಸ ಪ್ರಯತ್ನಕ್ಕೆ ಯತ್ನಿಸಿದ್ದೇವೆ ಎಂದಿದ್ದಾರೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಒಟ್ಟಿನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಅವಾನ್ ಜೆರೊ ಪ್ಲಸ್ ಸ್ಕೂಟರ್ ಮಾದರಿಯು ಗ್ರಾಹಕರನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಅಥೆರ್ ನಿರ್ಮಾಣದ 340 ಮತ್ತು 450, ಒಕಿನವಾ ಪ್ರೈಸ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವ ಸಾಧ್ಯತೆಗಳಿವೆ.

MOST READ: ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಕೇಂದ್ರ ಸರ್ಕಾರ

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್

ಸದ್ಯ ಬೆಂಗಳೂರು ಮೂಲದ ಅಥೆರ್ ನಿರ್ಮಾಣದ 340 ಮತ್ತು 450 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ಆನ್ ರೋಡ್ ಪ್ರಕಾರ ರೂ.1.09 ಲಕ್ಷ ಮತ್ತು ರೂ.1.24 ಲಕ್ಷ ಬೆಲೆಗಳೊಂದಿಗೆ 340 ಮಾದರಿಯು 60 ಕಿ.ಮಿ ಮೈಲೇಜ್ ಹೊಂದಿದ್ದಲ್ಲಿ 450 ಮಾದರಿಯು 75 ಕಿ.ಮಿ ಮೈಲೇಜ್ ಸಾಮರ್ಥ್ಯದೊಂದಿಗೆ ಗಂಟೆಗೆ 80 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವುದು ಇವುಗಳ ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
English summary
Avan Xero+ Electric Scooter Launched In India — Priced At Rs 47,000. Read in Kannada.
Story first published: Monday, February 25, 2019, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X