ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಜನಪ್ರಿಯ ಡಿಸ್ಕವರ್ ಬೈಕ್ ಮತ್ತು ಚಾಲಕರಿಗೆ ಹೆಚ್ಚು ಸುರಕ್ಷತೆಯನ್ನು ನೀಡುವ ಅನುಸಾರ ಅವುಗಳಿಗೆ ಕಾಂಇ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿ ಬಿಡುಗಡೆಗೊಳಿಸಿದೆ. ಈ ನಿಟ್ಟಿನಲ್ಲಿ ಸಿಬಿಎಸ್ ಆಧಾರಿತ ಬಜಾಜ್ ಡಿಸ್ಕವರ್ 110 ಬೈಕ್ ಎಕ್ಸ್ ಶೋರುಂ ಪ್ರಕಾರ ರೂ. 52.273ಕ್ಕೆ ಮಾರಾಟಗೊಳ್ಳುತ್ತಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

ಕೇಂದ್ರ ಸರ್ಕಾರದ ಹೊಸ ಆದೇಶದ ಮೆರೆಗೆ 2019ರ ಏಪ್ರಿಲ್‍ನ ನಂತರ 125ಸಿಸಿ ಗಿಂತಲೂ ಕಡಿಮೆ ಸಾಮರ್ಥ್ಯವಿರುವ ವಾಹನಗಳು ಕಾಂಬಿ ಬ್ರೇಕಿಂಗ್ ಸಿಸ್ಟಂ ಮತ್ತು ಇನ್ನು 125ಸಿಸಿ ಗಿಂತಲೂ ಮೇಲ್ಪಟ್ಟ ವಾಹನಗಳು ಖಡ್ಡಾಯವಾಗಿ ಎಬಿಎಸ್ ಟೆಕ್ನಾಲಜಿಯನ್ನು ಪಡೆದಿರಲೇಬೇಕಾಗಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

ನಾವು ಕೆಲ ದಿನಗಳ ಮುಂದಷ್ಟೆ ಬಜಾಜ್ ಸಂಸ್ಥೆಯಲ್ಲಿನ 125ಸಿಸಿ ಮೇಲ್ಪಟ್ಟ ವಾಹನಗಳಿಗೆ ಎಬಿಎಸ್ ಅನ್ನು ನೀಡುರುವ ಬಗ್ಗೆ ಮಾಹಿತಿಯನ್ನು ನೀಡಿದೆವು. ಸಿಬಿಎಸ್ ಎಂಬ ಹೆಸರಿನಲ್ಲಿನ ಟೆಕ್ನಾಲಜಿಯನ್ನು ಬಜಾಜ್ ಸಂಸ್ಥೆಯು 'ಆಂಟಿ ಸ್ಕಿಡ್ ಬ್ರೇಕ್' ಎಂಬ ಹೆಸರನ್ನು ನೀಡಲಾಗಿದೆ. ಈ ಟೆಕ್ನಾಲಜಿಯನ್ನು ಮೊದಲಿಗೆ ಬಜಾಜ್ ಪ್ಲಾಟಿನಾನಲ್ಲಿ ನೀಡಲಾಗಿದ್ದು, ಇದೀಗ ಡಿಸ್ಕವರ್ 110 ಬೈಕಿಗೂ ಸಹ ನೀಡಲಾಗಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

ಎಂಜಿನ್ ಸಾಮರ್ಥ್ಯ

ಕೇವಲ ಸಿಬಿಎಸ್ ಟೆಕ್ನಾಲಜಿಯನ್ನು ಮಾತ್ರವೇ ಬಜಾಜ್ ಡಿಸ್ಕವರ್ 110 ಬೈಕಿನಲ್ಲಿ ಕಾಣಬಹುದಾಗಿದ್ದು, ವಿನ್ಯಾಸದಲ್ಲಿ ಅಥವಾ ತಾಂತ್ರಿಕತೆಯಲ್ಲಗಲಿ ಯಾವುದೇ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಜಾಜ್ ಡಿಸ್ಕವರ್ 110 ಬೈಕ್ 115.45ಸಿಸಿ, ಏರ್ ಕೂಲ್ಡ್ ಎಂಜಿನ್, ಸಿಂಗಲ್ ಸಿಲೆಂಡರ್ ಸಹಾಯದಿಂದ 8.6 ಬಿಹೆಚ್‍ಪಿ ಮತ್ತು 9.71 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಮತ್ತು ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

125ಸಿಸಿ ಗೊಂತಲೂ ಕಡಿಮೆ ಸಾಮರ್ಥ್ಯವನ್ನು ಪಡೆದುಕೊಂಡಿರುವ ಬಜಾಜ್ ಡಿಸ್ಕವರ್ 110 ಬೈಕ್‍ಗಳ ಎರಡೂ ಕಡೆ ಡ್ರಮ್ ಬ್ರೇಕ್ ಅನ್ನು ಆಳವಡಿಸಲಾಗಿದ್ದು, ಇದೀಗ ಹೊಸದಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಮತ್ತು ಮೈಲೇಜ್ ಪರವಾಗಿ ಕೂಡಾ ಈ ಬೈಕ್ ಉತ್ತಮ ಪ್ರದರ್ಷನವನ್ನು ನೀಡಲಿದ್ದು, ಪ್ರತೀ ಲೀಟರ್‍‍ಗೆ ಸುಮಾರು 82.4 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ 140 ಎಂಎಂ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. ಹಾಗು 17 ಇಂಚಿನ ಅಲಾಯ್ ವ್ಹೀಲ್ಸ್ ಮತ್ತು ಟ್ಯೂಬ್‍‍ಲೆಸ್ ಟೈರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

ಬಜಾಜ್ ಡಿಸ್ಕವರ್ 110 ಬೈಕ್ ಮಾರುಕಟ್ಟೆಯಲ್ಲಿರುವ ಹೀರೋ ಪ್ಯಾಶನ್ ಪ್ರೋ 110, ಟಿವಿಎಸ್ ವಿಕ್ಟರ್ 110 ಮತ್ತು ಹೋಂಡಾ ಸಿಡಿ110 ಡಿಮ್ ಡಿಎಲ್ಎಕ್ಸ್ ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ. ಸಿಬಿಎಸ್ ಆಧಾರಿತ ಬಜಾಜ್ ಡಿಸ್ಕ್ವರ್ ಬೈಕಿನ ಖರೀದಿಗಾಗಿ ಡೀಲರ್‍‍ಗಳು ಇನ್ನು ಎರಡೇ ವಾರಗಳಲ್ಲಿ ಬುಕ್ಕಿಂಗ್ ಅನ್ನು ಸ್ವೀಕರಿಸಲಾಗುತ್ತಿದ್ದು, ಶೀಘ್ರವೇ ಗ್ರಾಹಕರಿಗೆ ಡೆಲಿವರಿಯನು ಸಹ ನೀಡಲಾಗುವುದು.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಆಧಾರಿತ ಹೊಸ ಬಜಾಜ್ ಡಿಸ್ಕವರ್ 110 ಬೈಕ್

ಬಜಾಜ್ ಡಿಸ್ಕವರ್ 110 ಬೈಕ್‍ಗಳು ಮಾರುಕಟ್ಟೆಯಲ್ಲಿ ಮಾರಾಟದ ಪರವಾಗಿ ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದ್ದು, ಇನ್ನು ಸಿಬಿಎಸ್ ಅನ್ನು ಪಡೆ ನಂತರ ಕೂಡಾ ಅಷ್ಟೆ ಜನಪ್ರಿಯತೆಯನ್ನು ಪಡೆಯಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೆ ಬಜಾಜ್ ಸಂಸ್ಥೆಯು ತಮ್ಮ ಇನ್ನಿತರೆ ಬೈಕ್‍ಗಳಿಗೆ ಸಿಬಿಎಸ್ ಮತ್ತು ಎಬಿಎಸ್ ಅನ್ನು ಎಪ್ರಿಲ್ 1, 2019ರೊಳಗೆ ಅಳವಡಿಸುವ ಕಾರ್ಯದಲ್ಲಿದೆ.

Most Read Articles

Kannada
English summary
Bajaj Discover 110 Launched With CBS At Rs 52,273. Read In Kannada
Story first published: Saturday, February 23, 2019, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X