ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಬಹುತೇಕ ಬೈಕ್ ಉತ್ಸಾಹಿಗಳಿಗೆ ಬೈಕುಗಳಲ್ಲಿ ಸ್ಟಂಟ್ ಮಾಡುವುದೆಂದರೆ ಒಂದು ರೀತಿಯ ಉತ್ಸಾಹ. ಸ್ಟಂಟ್ ಎನ್ನುವುದು ಅನೇಕರಿಗೆ ಹವ್ಯಾಸವೂ ಹೌದು. ಜವಾಬ್ದಾರಿ ಹೊಂದಿರುವ ಬೈಕ್ ಸವಾರನು ಯಾವಾಗಲೂ ರಸ್ತೆ ನಿಯಮಗಳನ್ನು ಪಾಲಿಸುತ್ತಾನೆ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಸಾರ್ವಜನಿಕ ರಸ್ತೆಗಳಲ್ಲಿ ಯಾವ ರೀತಿ ವಾಹನ ಚಲಾಯಿಸಬೇಕೆಂಬ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಸ್ಟಂಟ್ ಮಾಡುವ ಹೆಚ್ಚಿನ ಸವಾರರು ರಸ್ತೆಯಲ್ಲಿರುವ ಇತರ ಸಾರ್ವಜನಿಕರ ವಿರುದ್ಧ ತಲೆಕೆಡಿಸಿಕೊಳ್ಳುವುದಿಲ್ಲ. ಬೈಕ್ ಕೈಗೆ ಸಿಕ್ಕಿದ ತಕ್ಷಣ ಖುಷಿಗಾಗಿ ಸ್ಟಂಟ್ ಮಾಡುತ್ತಾರೆ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಕೆಲವರು ಮಾಡುವ ಸ್ಟಂಟ್‍‍ನಿಂದಾಗಿ ಇಡೀ ಬೈಕ್ ಸವಾರರ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿರುವವರಿಂದ ತೊಂದರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ, ಬೆಂಗಳೂರು ಟ್ರಾಫಿಕ್ ಪೊಲೀಸರು ವ್ಹೀಲಿಂಗ್ ಮಾಡುವವರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಈ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 12 ಯುವಕರನ್ನು ಬಂಧಿಸಲಾಗಿದೆ. ಟ್ರಾಫಿಕ್ ಪೊಲೀಸರು ಸಿವಿಲ್ ಡ್ರೆಸ್‍‍ನಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 12 ಮಂದಿ ಬೈಕ್ ಸವಾರರನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಇದರ ಜೊತೆಗೆ ಕೆಟಿಎಂ, ಪಲ್ಸರ್, ಸ್ಕೂಟರ್ ಹಾಗೂ ಕೆಲವು ಟೂ ಸ್ಟ್ರೋಕ್ ಬೈಕ್ ಸೇರಿದಂತೆ 9 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರಿಂದ ಬೆಂಗಳೂರಿಗರು ಭಯಭೀತರಾಗಿದ್ದಾರೆ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಹಲವು ಬೈಕ್ ಸವಾರರು ತಮ್ಮ ಬೈಕುಗಳನ್ನು ವ್ಹೀಲಿಂಗ್ ಮಾಡುವ ಕಾರಣಕ್ಕಾಗಿಯೇ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹೊರ ತೆಗೆಯುತ್ತಾರೆ. ಪೊಲೀಸರು ಇಂತಹ ಬೈಕ್‌ ಸವಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಈ ಕಾರಣಕ್ಕಾಗಿಯೇ, ವ್ಹೀಲಿಂಗ್ ನಡೆಸುವವರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಯಿತು. ಮಫ್ತಿಯಲ್ಲಿದ್ದ ಪೊಲೀಸರು ಕತ್ತಲೆಯಾದ ನಂತರ ಸ್ಟಂಟರ್‌ಗಳು ಬರುವ ರಸ್ತೆಗಳಲ್ಲಿ ಕಾರ್ಯಾಚರಣೆಗಿಳಿದರು.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಪೊಲೀಸರು ಇನ್ನೂ ಹೆಚ್ಚಿನ ಸ್ಟಂಟರ್‌ಗಳನ್ನು ಬಂಧಿಸುವವರೆಗೆ ಹಾಗೂ ಅವರ ಬೈಕ್‌ಗಳನ್ನು ವಶಪಡಿಸಿಕೊಳ್ಳುವವರೆಗೂ ಈ ಕಾರ್ಯಾಚರಣೆಯನ್ನು ಮುಂದುವರೆಸಲು ಬಯಸಿದ್ದಾರೆ. ವಾಹನ ಸವಾರರಲ್ಲಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮಾಡಲು ಬೆಂಗಳೂರು ಸಂಚಾರ ಪೊಲೀಸರು ಸಾಕಷ್ಟು ಸಕ್ರಿಯರಾಗಿದ್ದಾರೆ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಕೆಲವು ತಿಂಗಳುಗಳ ಹಿಂದಷ್ಟೇ, ಬೆಂಗಳೂರು ಟ್ರಾಫಿಕ್ ಪೊಲೀಸರು ಕಾರು ಹಾಗೂ ಬೈಕುಗಳನ್ನು ಮಾರ್ಪಡಿಸುತ್ತಿದ್ದ ಮೆಕ್ಯಾನಿಕ್ ಹಾಗೂ ಗ್ಯಾರೇಜುಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಬಗ್ಗೆ ವರದಿಗಳಾಗಿದ್ದವು.

ಇನ್ನು ಈ ರೀತಿಯ ಅಪಾಯಕಾರಿ ವ್ಹೀಲಿಂಗ್ ಬಗ್ಗೆ ಹೇಳುವುದಾದರೆ, ವ್ಹೀಲಿಂಗ್ ಮಾಡುವವರು ತಮ್ಮ ಜೀವಕ್ಕೆ ಮಾತ್ರವಲ್ಲದೇ, ರಸ್ತೆಯಲ್ಲಿ ಓಡಾಡುವವರ ಜೀವಕ್ಕೂ ಸಂಚಕಾರ ತರುತ್ತಿದ್ದಾರೆ. ವ್ಹೀಲಿಂಗ್ ಮಾಡುವವರು ಹೆಲ್ಮೆಟ್ ಆಗಲಿ, ರೈಡಿಂಗ್ ಜಾಕೆಟ್ ಹಾಗೂ ಬೂಟ್‍‍ಗಳನ್ನಾಗಲೀ ಧರಿಸುತ್ತಿಲ್ಲ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಕೆಲ ದಿನಗಳ ಹಿಂದಷ್ಟೇ ಮುಂಬೈ ಪೊಲೀಸರು ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದ ಟಿಕ್ ಟಾಕ್ ಸ್ಟಾರ್ ವಿರುದ್ಧ ಕ್ರಮ ಕೈಗೊಂಡಿದ್ದರು. ವ್ಹೀಲಿಂಗ್ ಮಾಡುವುದು ತಪ್ಪು ಎಂದು ಹೇಳಲಾಗುವುದಿಲ್ಲ.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು

ಆದರೆ ಸಾರ್ವಜನಿಕ ರಸ್ತೆಗಳಿಗೆ ಬದಲಾಗಿ, ಮುಚ್ಚಿದ ರಸ್ತೆಗಳು, ನಿರ್ಜನ ತಾಣಗಳು ಹಾಗೂ ಸಂಚಾರಕ್ಕೆ ಮುಕ್ತವಾಗಿರದ ಇತರ ಸ್ಥಳಗಳಲ್ಲಿ ಮಾಡುವುದು ಒಳ್ಳೆಯದು. ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವುದರಿಂದ ಸವಾರನ ಜೊತೆಗೆ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ಬರಲಿದೆ. ಹೆಲ್ಮೆಟ್‍‍ನಂತಹ ಸುರಕ್ಷತಾ ಸಾಧನಗಳನ್ನು ಹೊಂದುವುದರಿಂದ ಅಪಘಾತವಾದಾಗ ಜೀವ ಉಳಿಯಲು ನೆರವಾಗಲಿದೆ.

Most Read Articles

Kannada
English summary
Bangalore police arrest 12 youths seize 9 bikes for performing stunts on public roads - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X