ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕ್ ಹಾಗೂ ಸ್ಕೂಟರ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍ಡೇಟ್‍‍ಗೊಳಿಸುತ್ತಿದೆ. ಹೀರೋ ಮೋಟೊಕಾರ್ಪ್ ಕಂಪನಿಯ ಸ್ಪ್ಲೆಂಡರ್ ಐಸ್ಮಾರ್ಟ್ 110 ಬೈಕ್, ಇಂಟರ್‍‍ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿಯಿಂದ ಬಿ‍ಎಸ್ 6 ಪ್ರಮಾಣಪತ್ರ ಪಡೆದ ಭಾರತದ ಮೊದಲ ದ್ವಿಚಕ್ರ ವಾಹನವಾಗಿದೆ.

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಬಿ‍ಎಸ್ 6 ಎಂಜಿನ್ ಹೊಂದಿರುವ ಹೀರೋ ಸ್ಪ್ಲೆಂಡರ್ ಅನ್ನು ರಾಜಸ್ತಾನದ ಜೈಪುರದಲ್ಲಿರುವ ಕಂಪನಿಯ ಆರ್ ಅಂಡ್ ಡಿ ಘಟಕದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಹೀರೋ ಮೋಟೊಕಾರ್ಪ್ ಈ ಬಿ‍ಎಸ್ 6 ಬೈಕ್ ಅನ್ನು ತರಬೇತಿಗಾಗಿ ಹಾಗೂ ಡೀಲರ್‍‍ಗಳಿಗೆ ಹೆಚ್ಚು ಪರಿಚಿತವಾಗಲಿ ಎಂಬ ಕಾರಣಕ್ಕಾಗಿ ಬಿಡುಗಡೆಗೂ ಮುನ್ನ ಮಾರಾಟಗಾರರಿಗೆ ಕಳುಹಿಸಿತ್ತು.

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಹೀರೋ ಮೋಟೊಕಾರ್ಪ್, ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಐ‍‍ಸ್ಮಾರ್ಟ್ ಬೈಕ್ ಅನ್ನು ಇಂದು ಬಿಡುಗಡೆಗೊಳಿಸಿದೆ. ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.64,900ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಸ್ಪ್ಲೆಂಡರ್ ಬೈಕಿಗಿಂತ ರೂ.7,470 ಹೆಚ್ಚು ಬೆಲೆಯನ್ನು ಹೊಂದಿದೆ. ಈ ಬೈಕ್ ಅನ್ನು ಡ್ರಮ್ ಹಾಗೂ ಡಿಸ್ಕ್ ಬ್ರೇಕ್‌ನ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಅಪ್‍‍ಡೇಟೆಡ್ ಮಾದರಿಯು ಒಂದೇ ರೀತಿಯ ಆಯಾಮಗಳನ್ನು ಹೊಂದಿರಲಿದೆ.

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಡಿಸ್ಕ್ ಬ್ರೇಕ್ ಮಾದರಿಯು 1 ಕೆ.ಜಿ ಹೆಚ್ಚು ತೂಕವನ್ನು ಹೊಂದಿರಲಿದ್ದು, 10 ಎಂಎಂ ಅಗಲವಾಗಿರಲಿದೆ. ಬಿಎಸ್ 6 ಸ್ಪ್ಲೆಂಡರ್ ಬೈಕಿನಲ್ಲಿ 113.2 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಇರಲಿದ್ದು, ಈ ಎಂಜಿನ್ 7,500 ಆರ್‌ಪಿಎಂನಲ್ಲಿ 9.15 ಬಿ‍‍‍‍ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಈ ಎಂಜಿನ್ ಹೊಸ ಡೈಮಂಡ್ ಫ್ರೇಂನಲ್ಲಿ ಕೂರಲಿದೆ. ಆರಾಮದಾಯಕವಾದ ಹಾಗೂ ಸ್ಥಿರವಾದ ಸವಾರಿಗಾಗಿ ಹೀರೋ ಮೋಟೊಕಾರ್ಪ್ ಈ ಬೈಕಿನಲ್ಲಿರುವ ಸಸ್ಪೆಂಷನ್ ಅನ್ನು 15 ಎಂಎಂ ಹಾಗೂ ವ್ಹೀಲ್‍‍ಬೇಸ್ ಅನ್ನು 36 ಎಂಎಂನಷ್ಟು ಹೆಚ್ಚಿಸಿದೆ.

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಹೊಸ ಸ್ಪ್ಲೆಂಡರ್ ಐ‍‍ಸ್ಮಾರ್ಟ್ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು 180 ಎಂಎಂನಷ್ಟು ಹೆಚ್ಚಿಸಲಾಗಿದೆ. ಹೀರೋ ಮೋಟೊಕಾರ್ಪ್ 799 ಎಂಎಂ ಸೀಟ್ ಹೈಟಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಹೊಸ ಬಿ‍ಎಸ್6 ಎಂಜಿನ್ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಹೊಂದಿರಲಿದೆ. ಇದರೊಂದಿಗೆ ಐ3 ಎಸ್ ಸ್ಟಾರ್ಟ್ ಸ್ಟಾಪ್ ಟೆಕ್ನಾಲಜಿ ಇರಲಿದೆ. ಇದು ಐಡಲ್ ಸ್ಟಾರ್ಟ್ ಹಾಗೂ ಸ್ಟಾಪ್ ಸಿಸ್ಟಂ ಆಗಿದ್ದು, ಹೆಚ್ಚು ಅವಧಿಯವರೆಗೆ ಬೈಕ್ ಅನ್ನು ಆಫ್ ಮಾಡದೇ ನಿಲ್ಲಿಸಿದ್ದರೆ ಈ ಸಿಸ್ಟಂ ಎಂಜಿನ್ ಅನ್ನು ಆಫ್ ಮಾಡುತ್ತದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಕ್ಲಚ್ ಅನ್ನು ಬಿಟ್ಟ ನಂತರ ಮತ್ತೆ ಸ್ಟಾರ್ಟ್ ಮಾಡಲಿದೆ. ಮುಂದಿನ 3-4 ವಾರಗಳಲ್ಲಿ ಬಿ‍ಎಸ್ 6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕುಗಳನ್ನು ಡೀಲರ್‍‍ಗಳಿಗೆ ಕಳುಹಿಸಲಾಗುವುದೆಂದು ಹೀರೋ ಮೋಟೊಕಾರ್ಪ್ ಕಂಪನಿಯು ತಿಳಿಸಿದೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಅದಾದ ನಂತರ ಬೈಕುಗಳ ವಿತರಣೆಯನ್ನು ಆರಂಭಿಸಲಾಗುವುದು. ಅಂದ ಹಾಗೆ ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಅದಕ್ಕೂ ಮುನ್ನ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು ಬಿಎಸ್ 6 ಎಂಜಿನ್‍‍ಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿವೆ.

ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ

ಅದರಂತೆ ಹೀರೋ ಮೋಟೊಕಾರ್ಪ್ ಸಹ ತನ್ನ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿದೆ. ಅದರ ಭಾಗವಾಗಿ ಈಗ ಕಂಪನಿಯ ಜನಪ್ರಿಯ ಬೈಕ್ ಆದ ಸ್ಲ್ಪೆಂಡರ್ ಅನ್ನು ಐ‍‍ಸ್ಮಾರ್ಟ್ ಹೆಸರಿನಲ್ಲಿ ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ.

Most Read Articles

Kannada
English summary
BS6 hero splendor ismart launched details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X