ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಡುಕಾಟಿ ಕಂಪನಿಯು 2019ರ ಸ್ಕ್ರ್ಯಾಂಬ್ಲರ್ ಸರಣಿಯ ಬೈಕ್ ಅನ್ನು 2019ರ ಇಐಸಿಎಂಎ ಮೋಟಾರ್ ಸೈಕಲ್ ಶೋನಲ್ಲಿ ಅನಾವರಣಗೊಳಿಸಿದೆ. ಡುಕಾಟಿ ಕಂಪನಿಯು ಸ್ಕ್ರ್ಯಾಂಬ್ಲರ್ ಸರಣಿಯ ಸ್ಕ್ರ್ಯಾಂಬ್ಲರ್ ಐಕಾನ್, ಸ್ಕ್ರ್ಯಾಂಬ್ಲರ್ ಕೆಫೆ ರೇಸರ್, ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ ಮತ್ತು ಸ್ಕ್ರ್ಯಾಂಬ್ಲರ್ ಫುಲ್ ಥ್ರಾಟಲ್ ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಡುಕಾಟಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಸರ್ಗಿ ಕಾನೊವಸ್ ರವರು ಮಾತನಾಡಿ ಸ್ಕ್ರ್ಯಾಂಬ್ಲರ್ ಸರಣಿಯ ಬೈಕು ಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಮತ್ತು ಅತಿ ಹೆಚ್ಚು ಮಾರಾಟವಾಗುವ ಬೈಕು ಗಳಲ್ಲಿ ಒಂದಾಗಿವೆ. ಸ್ಕ್ರ್ಯಾಂಬ್ಲರ್ ಬೈಕು ಗಳು ಆಕ್ಸೇಸಿಬಲ್ ಪವರ್ ವಿಷಯಕ್ಕೆ ಬಂದಾಗ ಮತ್ತು ರಸ್ತೆಯಲ್ಲಿನ ನಿಯಂತ್ರಣದ ವಿಷಯಕ್ಕೆ ಬಂದಾಗ ಯಾವಾಗಲೂ ಉತೃಷ್ಟ ಸೇವೆಯನ್ನು ನೀಡುತ್ತವೆ. ನಾವು ಈಗ ಪೂರ್ಣ ಸರಣಿಯನ್ನು ಹೆಚ್ಚು ಅಡ್ವಾನ್ಸ್ ಆಗಿ ಮತ್ತು ಕೆಪಾಬಲ್ ಆಗಿ ಮಾಡಿದ್ದೇವೆ. ಹೊಸ ಸರಣಿಯು ಹೊಸ ಸಂಸ್ಕೃತಿಯನ್ನು ಬರೆಯಲಿದೆ ಎಂದು ತಿಳಿಸಿದರು.

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಡುಕಾಟಿ ಸ್ಕ್ರ್ಯಾಂಬ್ಲರ್ ಕೇವಲ ಬೈಕ್ ಮಾತ್ರ ಆಗಿರದೇ ಒಂದು ಲೈಫ್ ಸ್ಟೈಲ್ ಆಗಿರಲಿದೆ. ಗುಣಮಟ್ಟದ ಅಪಾರೆಲ್ ಮತ್ತು ಆಕ್ಸೆಸರೀಸ್ ಗಳನ್ನು ಅಳವಡಿಸಲಾಗಿದೆ. ಇದು ಭಾರತದಲ್ಲಿ ನಾವು ಈ ವರ್ಷ ಬಿಡುಗಡೆ ಮಾಡುತ್ತಿರುವ ಮೊದಲ ಬೈಕ್ ಆಗಿದ್ದು, ಮುಂದೆ ಸ್ಕ್ರ್ಯಾಂಬ್ಲರ್ ಸರಣಿಯಲ್ಲಿ ಹೆಚ್ಚು ಬೈಕ್ ಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

2019ರ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಈಗಿರುವ ಮಾದರಿಗಳಿಗಿಂತ ಹೆಚ್ಚು ಸುಧಾರಿತವಾಗಿದೆ. ವಿನ್ಯಾಸವನ್ನು ಮಾತ್ರ ಬದಲಾವಣೆ ಮಾಡದೇ ಚಾಲನಾ ಅನುಭವವನ್ನೇ ಬದಲಾವಣೆ ಮಾಡಲಾಗಿದೆ. ಡುಕಾಟಿ ಸ್ಕ್ರ್ಯಾಂಬ್ಲರ್ ಸರಣಿಯ ವಾಹನವನ್ನು ಥೈಲ್ಯಾಂಡ್ ನಿಂದ ಕಂಪ್ಲಿಟ್ ಬಿಲ್ಟ್ ಯೂನಿಟ್ ಗಳಾಗಿ (ಸಿಬಿಯು) ಆಮದು ಮಾಡಿಕೊಳ್ಳಲಾಗಿದೆ.

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ನಲ್ಲಿ ಒಮ್ಮೆ ನೋಡಿದರೆ ಯಾವುದೇ ಬದಲಾವಣೆಗಳು ಕಾಣದೇ ಈಗಿರುವ ಬೈಕ್ ನಂತೇಯೆ ಕಾಣುವುದು. ಆದರೆ ಹತ್ತಿರದಿಂದ ಸೂಕ್ಷ್ಮವಾಗಿ ನೋಡಿದರೆ ಬದಲಾವಣೆಗಳು ಕಾಣುತ್ತವೆ. ಹೊಸ ಎಲ್ಇಡಿ - ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್‍ಎಲ್) ಹೆಡ್ ಲೈಟ್ ಯೂನಿಟ್ ನ ಒಳಗಿದ್ದು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನ ಜೊತೆಯಲ್ಲಿ ಫ್ಯುಯಲ್ ಗೇಜ್, ಸುಧಾರಿತ ಸ್ವಿಚ್ ಗೇರ್ ಗಳನ್ನು ಹೊಂದಿರುವ ಗೇರ್ ಇಂಡಿಕೇಟರ್, ಕ್ಲಚ್ ಅಸೆಂಬ್ಲಿ ಮತ್ತು ಅಡ್ಜಸ್ಟಬಲ್ ಲೀವರ್ ಗಳನ್ನು ಅಳವಡಿಸಲಾಗಿದೆ. ಸೀಟುಗಳು ಹೊಸ ವಿನ್ಯಾಸದಲ್ಲಿದ್ದು ಕಂಫರ್ಟಬಲ್ ಆಗಿವೆ.

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಹೊಸ ಮಾದರಿಯ ಸ್ಕ್ರ್ಯಾಂಬ್ಲರ್ ನಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಸಸ್ಪೆನ್ಶನ್. ಮೊದಲಿದ್ದ ಮಾಡೆಲ್ ಗಳಿಗಿಂತ ಸುಧಾರಿತವಾದ ಮತ್ತು ಸಾಫ್ಟ್ ರೈಡಿಂಗ್ ಗೆ ಅನುಕೂಲವಾದ ಗುಣಮಟ್ಟವನ್ನು ಇದರಲ್ಲಿ ಅಳವಡಿಸಲಾಗಿದೆ. ಡುಕಾಟಿ ಯ ಪ್ರಕಾರ ಈ ಸಾಫ್ಟ್ ಆಗಿರುವ ಸಸ್ಪೆನ್ಷನ್ ಹ್ಯಾಂಡಲ್ ಗೆ ಯಾವುದೇ ತೊಂದರೆಯಾಗುವುದಿಲ್ಲ. ಮತ್ತೊಂದು ದೊಡ್ಡ ಅಪ್ ಗ್ರೇಡ್ ಅಂದರೆ ಎಬಿಎಸ್ ಅನ್ನು ಕಾರ್ನರ್ ನಲ್ಲಿ ಅಳವಡಿಸಿರುವುದು.

MUST READ: ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಎಲ್ಲಾ ಮೆಕಾನಿಕಲ್ ಅಂಶಗಳು ಹಳೆ ಮಾದರಿಯಲ್ಲಿ ಇದ್ದಂತಯೇ ಇವೆ. ಈ ಮೋಟಾರ್ ಸೈಕಲ್ 803 ಸಿಸಿ ಎಲ್ ಟ್ವಿನ್ ಏರ್ ಕೂಲ್ ಎಂಜಿನ್ ಹೊಂದಿದ್ದು 73 ಬಿಹೆಚ್‍ಪಿ ಮತ್ತು 67 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಡುಕಾಟಿ ಸ್ಕ್ರ್ಯಾಂಬ್ಲರ್ ಪ್ರಪಂಚದಾದ್ಯಂತ ಡುಕಾಟಿಯ ಯಶಸ್ವಿ ಮಾಡೆಲ್ ಆಗಿದೆ. ಬಿಡುಗಡೆಯಾದಾಗಿನಿಂದ ಡುಕಾಟಿ 500 ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಮಾದರಿಯ ಬೈಕು ಗಳು ಈ ಸೆಗ್ ಮೆಂಟಿನಲ್ಲಿ ಟ್ರಯಂಫ್ ನ ಸ್ಕ್ರ್ಯಾಂಬ್ಲರ್ ಗಳಿಗೆ ಪೈಪೋಟಿ ನೀಡಲಿವೆ.

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಡುಕಾಟಿ ಸ್ಕ್ರ್ಯಾಂಬ್ಲರ್ ನ ಬೆಲೆಯನ್ನು ರೂ 7.89 ಲಕ್ಷಗಳೆಂದು ಮತ್ತು ಡುಕಾಟಿ ಸ್ಕ್ರ್ಯಾಂಬ್ಲರ್ ಕೆಫೆ ರೇಸರ್ ಬೆಲೆಯನ್ನು ರೂ 9.78 ಲಕ್ಷಗಳೆಂದು, ಡುಕಾಟಿ ಸ್ಕ್ರ್ಯಾಂಬ್ಲರ್ ಫುಲ್ ಥ್ರಾಟಲ್ ಬೆಲೆಯನ್ನು ರೂ 8.90 ಲಕ್ಷಗಳೆಂದು ಮತ್ತು ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ ನ ಬೆಲೆಯನ್ನು ರೂ 9.93 ಲಕ್ಷಗಳೆಂದು ನಿಗದಿಪಡಿಸಲಾಗಿದೆ. ಈ ಎಲ್ಲಾ ಬೆಲೆಗಳು ಭಾರತದಲ್ಲಿನ ಎಕ್ಸ್ ಶೋ ರೂಂ ದರಗಳಾಗಿರುತ್ತವೆ.

ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಡ್ರೈವ್‍ಸ್ಪಾಕ್ ಅಭಿಪ್ರಾಯ

ಸ್ಕ್ರ್ಯಾಂಬ್ಲರ್ ವಾಹನವನ್ನು ಯಾವಾಗಲೂ ವೇಗವಾಗಿ ಚಲಾಯಿಸಲು ಇರುವ ಮತ್ತು ಮಜಾ ಮಾಡಲು ಇರುವ ಬೈಕ್ ಗಳೆಂಬಂತೆ ನೋಡಲಾಗಿದೆ. ಹೊಸ ಸರಣಿಯ ಬೈಕು ಗಳು ಆಕರ್ಷಕ ವಿನ್ಯಾಸ ಹೊಂದಿದ್ದು, ಹೊಸದಾಗಿ ಅಳವಡಿಸಲಾಗಿರುವ ಅಪ್ ಗ್ರೇಡ್ ಗಳು ಮೋಟಾರ್ ಸೈಕಲ್ ಅನ್ನು ಅತ್ಯುತ್ತಮವಾಗಿಸಿವೆ.

Most Read Articles

Kannada
Read more on ಡುಕಾಟಿ ducati
English summary
Ducati Launches 2019 Scrambler Models In India — Prices Start At 7.89 Lakh (Ex-showroom) - Read in Kannada
Story first published: Friday, April 26, 2019, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X