ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಪಿಟಿ ಆಸ್ಟ್ರಾ ಹೋಂಡಾ ಮೋಟಾರ್ಸ್ (ಎಹೆಚ್ಎಂ) 2019ರ ಇಂಡೋನೇಷಿಯಾ ಇಂಟರ್ ನ್ಯಾಷನಲ್ ಮೋಟಾರ್ ಶೋ ನಲ್ಲಿ ತನ್ನ ಹೊಸ ಮಾದರಿ ಹೋಂಡಾ ಎಕ್ಸ್ - ಎಡಿವಿ ಅಡ್ವೆಂಚರ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಸ್ಕೂಟರ್ 745 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಸ್ಕೂಟರ್ ಅನ್ನು 2016ರಲ್ಲಿ ಯೂರೋಪಿಯನ್ ಮಾರುಕಟ್ಟೆಗೆಂದು ಬಿಡುಗಡೆಗೊಳಿಸಲಾಗಿತ್ತು.

ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಹೋಂಡಾ ಎಕ್ಸ್ - ಎಡಿವಿ ಸ್ಟೈಲಿಶ್ ಮತ್ತು ಒರಟಾದ ಬಾಡಿಯನ್ನು ಹೊಂದಿದ್ದು, ಆಫ್ ರೋಡ್ ಗಳಿಗೆ ಅನುಕೂಲವಾಗುವಂತಹ ಹೈ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹೋಂಡಾ ಈ ಸ್ಕೂಟರ್ ಅನ್ನು ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ತಯಾರಿಸಿದೆ. ಈ ಸ್ಕೂಟರ್ ಸೀಟಿನ ಕೆಳಗೆ 21 ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ಇದೆ. ಈ ಸ್ಕೂಟರ್ ನಲ್ಲಿ ಫೈವ್ ವೇ ಅಡ್ಜಸ್ಟಬಲ್ ವಿಂಡ್ ಸ್ಕ್ರೀನ್ ಸಹ ಇದೆ. ಹೋಂಡಾ ಎಕ್ಸ್ - ಎಡಿವಿ ಅಲ್ಯುಮಿನಿಯಂ ಹ್ಯಾಂಡಲ್ ಬಾರ್ ಗಳನ್ನು, ಹ್ಯಾಂಡ್ ಗಾರ್ಡ್ ಗಳನ್ನು, ಸಿಆರ್‍ಎಫ್ 450 ರಾಲಿ ಸ್ಟೈಲಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸೆಂಟರ್ ಸ್ಟಾಂಡ್ ಗಳನ್ನು ಹೊಂದಿದೆ.

ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ಸ್ಕೂಟರ್ ಮುಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್ ಮತ್ತು 15 ಇಂಚಿನ ವ್ಹೀಲ್ ಗಳನ್ನು ಹಿಂಭಾಗದಲ್ಲಿ ಹೊಂದಿದ್ದು, ಎರಡೂ ವ್ಹೀಲ್ ಗಳು ಆಫ್ ರೋಡಿಗೆ ಅನುಕೂಲವಾಗುವಂತಹ ನಾಬಿ ಟಯರ್ ಗಳನ್ನು ಹೊಂದಿವೆ.

ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

41 ಎಂಎಂ ಕಾಟ್ರಿಡ್ಜ್ ಟೈಪಿನ ಯುಎಸ್‍ಡಿ ಫೋರ್ಕಿನ ಸಸ್ಪೆಷನ್ ಇದ್ದು ರಿ-ಬೌಂಡ್ ಡ್ಯಾಂಪ್ ಮಾಡಿದರೆ, ಹಿಂಭಾಗದಲ್ಲಿರುವ ಸ್ಪ್ರಿಂಗ್, ಪ್ರಿಲೋಡ್ ಅಡ್ಜಸ್ಟ್ ಮಾಡುವ ಶಾಕ್ ಅಬ್ಸರ್ವರ್ ಹೊಂದಿದೆ. ಮುಂಭಾಗದ ಮತ್ತು ಹಿಂಭಾಗದ ಬ್ರೇಕ್ ಗಳನ್ನು ನಿಯಂತ್ರಿಸಲು ಡಿಸ್ಕ್ ಬ್ರೇಕ್ ಗಳಿವೆ. ಅವುಗಳು ಡ್ಯೂಯಲ್ ರೇಡಿಯಲ್ ಮೌಂಟ್ ನ 4 ಪಿಸ್ಟನ್ ಕ್ಯಾಲಿಪರ್ ಗಳನ್ನು ಹೊಂದಿವೆ.

ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಸ್ಟಾಂಡರ್ಡ್ ಮಾದರಿಯಲ್ಲಿ ಎಬಿಎಸ್ ಅನ್ನು ನೀಡಲಾಗುವುದು. ಹೋಂಡಾ ಎಕ್ಸ್ - ಎಡಿವಿ 745 ಸಿಸಿ ಲಿಕ್ವಿಡ್ ಕೂಲ್ ಎಸ್ಒಹೆಚ್‍ಸಿ 8 ವಾಲ್ವ್ ನ ಪ್ಯಾರೆಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಈ ಎಂಜಿನ್ 54 ಹೆಚ್‍ಪಿ ಪೀಕ್ ಪವರ್ ಅನ್ನು 6,250 ಆರ್‍‍ಪಿಎಂ ನಲ್ಲಿ ಮತ್ತು 68 ಎನ್ಎಂ ಟಾರ್ಕ್ ಅನ್ನು 4,750 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಹೋಂಡಾ ಎಕ್ಸ್ - ಎಡಿವಿ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ (ಡಿಸಿಟಿ) ಹೊಂದಿದ್ದು, ಇದನ್ನು ಸ್ವತಃ ಹೋಂಡಾ ಕಂಪನಿಯೇ ಅಭಿವೃದ್ಧಿ ಪಡಿಸಿದ್ದು, 2 ಆಟೋ ಮ್ಯಾಟಿಕ್ ಮೋಡ್ ಮತ್ತು ಮ್ಯಾನುವಲ್ ಟ್ರಾನ್ಸ್ ಮಿಷನ್ ಗಾಗಿ ಎಂಟಿ ಮೋಡ್ ಅನ್ನು ಹೊಂದಿದೆ.

ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನ ಬಲಭಾಗದಲ್ಲಿರುವ ಜಿ ಸ್ವಿಚ್ ಆಫ್ ರೋಡ್ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ. ಹೋಂಡಾ ಎಕ್ಸ್ - ಎಡಿವಿ ಯಲ್ಲಿ ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಅಳವಡಿಸಲಾಗಿದ್ದು, ಇಳಿಜಾರು ರಸ್ತೆಗಳಲ್ಲಿ ಅನುಕೂಲವಾಗುತ್ತದೆ. ಹೋಂಡಾ ತನ್ನ ರೋಮ್ ನಲ್ಲಿರುವ ರೀಸರ್ಚ್ ಮತ್ತು ಡೆವಲಪ್ ಮೆಂಟ್ ಘಟಕದಲ್ಲಿ ಹೋಂಡಾ ಎಕ್ಸ್ - ಎಡಿವಿ ಯನ್ನು ವಿನ್ಯಾಸಗೊಳಿಸಿದೆ. 17 ವೈಎಂಎಕ್ಸ್ - ಎಡಿವಿ ಯ ಲಾರ್ಜ್ ಪ್ರಾಜೆಕ್ಟ್ ಲೀಡರ್ ಕೆನಿಚಿ ಮಿಸಾಕಿ ರವರು ಮಾತನಾಡಿ ಹೋಂಡಾ ಎಕ್ಸ್ - ಎಡಿವಿನ ಡೆವಲಪ್ ಮೆಂಟ್ ಕಾನ್ಸೆಪ್ಟ್ ಗೋ ಹ್ಯಾವ್ ಫನ್ ಆಗಿದೆ. ನಾವು ಸ್ಟಾಂಡರ್ಡ್ ಫಿಟ್ ಮೆಂಟ್ ನಲ್ಲಿ ಅಡ್ವೆಂಚರ್ ಗಾಗಿಯೇ ಒಂದು ಮೋಟಾರ್ ಸೈಕಲ್ ಅನ್ನು ತಯಾರಿಸಲು ನಿರ್ಧರಿಸಿದ್ದೇವು. ಎಕ್ಸ್ - ಎಡಿವಿ ಗಾಡಿಯನ್ನುವೀಕ್ ಎಂಡ್ ಗಳ ಹೊರತಾಗಿ ಮನೆಯ ಡೈಲಿ ರೂಟೀನ್ ಗಾಗಿ ಸಿಟಿಯ ಸುತ್ತ ಮುತ್ತ ಚಲಾಯಿಸಲು, ವಿಭಿನ್ನ, ಹೊಸ ಸ್ಟೈಲ್ ನ, ಯುಟಿಲಿಟಿ ಮತ್ತು ಯುಸರ್ ಫ್ರೆಂಡ್ಲಿ ಫೀಚರ್ ಗಳನ್ನು ನೀಡಲು ಬಯಸಿದ್ದೇವು. ಅದರಂತೆ ಈ ಸ್ಕೂಟರ್ ಅನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.

MUST READ: ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಎಕ್ಸ್ - ಎಡಿವಿ ಯನ್ನು ಹೋಂಡಾ ಬೇರೆ ದೇಶದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಬಹುದೆಂಬ ಬಗ್ಗೆ ಖಚಿತತೆ ಇದ್ದರೂ, ದೇಶಿಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಬಹುದೆಂಬ ಬಗ್ಗೆ ಮಾಹಿತಿ ಇಲ್ಲ. ಹೋಂಡಾ ಎಕ್ಸ್- ಎಡಿವಿ ಸ್ಕೂಟರ್ - ಕ್ಯಾಂಡಿ ಕ್ರೋಮೋಸ್ಪಿಯರ್ ರೆಡ್, ಡಿಜಿಟಲ್ ಸಿಲ್ವರ್ ಮೆಟಾಲಿಕ್, ಮ್ಯಾಟ್ ಬುಲ್ಲೆಟ್ ಸಿಲ್ವರ್, ಪರ್ಲ್ ಗ್ಲೇರ್ ವೈಟ್ ಮತ್ತು ಗ್ರಾಂಡ್ ಪ್ರಿಕ್ಸ್ ರೆಡ್ - ಎಂಬ 5 ಬಣ್ಣಗಳಲ್ಲಿ ಲಭ್ಯವಿರಲಿದೆ.

ಅಡ್ವೆಂಚರ್ ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಹೊಸದಾಗಿ ಸ್ಕೂಟರ್ ಚಲಾಯಿಸುವವರಿಗೆ ಈ ಸ್ಕೂಟರ್ ತುಸು ಕಷ್ಟವಾಗಿರಲಿದ್ದರೆ, ಅಡ್ವೆಂಚರ್ ಇಷ್ಟ ಪಟ್ಟು ಲಾಂಗ್ ಡ್ರೈವ್ ಹೋಗುವವರಿಗೆ ಸುಂದರ ಅನುಭವ ನೀಡಲಿದೆ.

Most Read Articles

Kannada
Read more on ಹೋಂಡಾ honda
English summary
Honda Unveils X-ADV Adventure Scooter At IIMS — Go Have Fun! - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X