ಭಾರತದಲ್ಲಿ ಡುಕಾಟಿ ಪ್ಯಾನಿಗಾಲೆ ವಿ4 ಆರ್ ವಿತರಣೆ ಪ್ರಾರಂಭ

ಅಂತಾರಾಷ್ಟ್ರೀಯ ಬೈಕ್ ಪ್ರಿಯರ ಮನಗೆದ್ದ ಡುಕಾಟಿ ಪ್ಯಾನಿಗಾಲೆ ವಿ4 ಆರ್ ಭಾರತೀಯ ಬೈಕ್ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಭಾರತದಲ್ಲೂ ಡುಕಾಟಿ ಪ್ಯಾನಿಗಾಲೆ ವಿ4 ಆರ್ ವಿತರಣೆ ಆರಂಭಸಿದೆ. ದೇಶಿಯ ಮಾರುಕಟ್ಟೆಗೆ ಡುಕಾಟಿ ಇಂಡಿಯ ಭಾರತದಲ್ಲಿ ಡುಕಾಟಿ ಪ್ಯಾನಿಗಾಲೆ ವಿ4 ಆರ್ ಎರಡು ಬೈಕ್‍ಗಳನ್ನು ಈಗಾಗಲೇ ವಿತರಣೆ ಆರಂಭಗೊಂಡಿದೆ.

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಈ ಎರಡು ಬೈಕ್‍ಗಳು ಹೊಸ ಮಾಲೀಕರ ಸಾರಥ್ಯದಲ್ಲಿ ಬುದ್ದ ಇಂಟನ್ರ್ಯಾಷನಲ್ ಸಕ್ರ್ಯೂಟ್ ರೇಸ್‍ನಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಸಿದ್ಧಗೊಳ್ಳುತ್ತಿದೆ. ಡುಕಾಟಿ ಪ್ಯಾನಿಗಾಲೆ ಆವೃತ್ತಿಯ ಬೈಕ್‍ಗಳು ತುಂಬ ವಿಶೇಷವಾದದ್ದು, ಯಾಕೆ ಅಂದ್ರೆ ಉತ್ಪಾದಕರು ಹಾಗೇ ಇದನ್ನು ಖರಿದಿಸಿದ ಗ್ರಾಹಕರ ಮನಗೆದ್ದ ಬೈಕ್ ಇದಾಗಿದೆ. ಪ್ಯಾನಿಗಾಲೆ ಸ್ಪೋಟ್ಸ್ ಆವೃತಿಯನ್ನು 2011 ರಿಂದಲೇ ಪ್ರಾರಂಭಿಸಿದ್ದು. ಅಂದಿನಿಂದ ಇಲ್ಲಿಯವರೆಗೂ ರೇಸ್‍ಟ್ರ್ಯಾಕ್ ಹಾಗೂ ಪರ್ವತದಂತ ಕಠಿಣವಾದ ದಾರಿಯಲ್ಲೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಕಳೆದ 7 ವರ್ಷಗಳಿಂದ ಡುಕಾಟಿ ಪ್ಯಾನಿಗಾಲೆ ವಿ-ಟ್ವಿನ್ ಇಂಜಿನ್ ಮೂಲಕ ಉತ್ಪಾದನ ಗುಣವನ್ನು ಹೊಂದಿದ್ದು, ಡುಕಾಟಿ ಪ್ಯಾನಿಗಾಲೆ ಲುಕ್ ಆಕರ್ಷಕವಾಗಿದ್ದು, ಪವರ್ ಫುಲ್ ಸೌಂಡ್‍ನ್ನು ಕೂಡ ಹೊಂದಿದೆ. ಶಾರ್ಪ್‍ ಹಾಗೂ ಮನಮೋಹಕವಾದ ಹೆಡ್‍ಲ್ಯಾಂಪ್, ಡಿಆರ್‍ಎಲ್ ಸೆಟಪ್ ಮತ್ತು ಆಕರ್ಷಕವಾದ ವಿನ್ಯಾಸದ ಮೂಲಕ ಲುಕ್ ನಲ್ಲಿ ಮನಗೆದ್ದ ಬೈಕ್‍ಗಳಲ್ಲಿ ಇದು ಕೂಡ ಒಂದಾಗಿದೆ. 1,103ಸಿಸಿ ಹೊಂದಿದ್ದು, 90 ಡಿಗ್ರಿ ವಿ4 ಇಂಜಿನ್ ಗರಿಷ್ಠ 211 ಬಿಹೆಚ್‍ಪಿಯಲ್ಲಿ 13,000 ಆರ್‍‍‍ಪಿ‍ಎಂ ಮತ್ತು ಪೀಕ್ ಟಾರ್ಕ್ 124 ಎನ್‍ಎಂಲ್ಲಿ 10,000 ಆರ್‍‍ಬಿ‍ಎಂ ಉತ್ಪಾದಿಸುವ ಗುಣ ಹೊಂದಿದೆ.

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಶೀಘ್ರದಲ್ಲೇ ವಿಶ್ವದ ಫಾಸ್ಟೆಸ್ಟ್ ವಿತರಣೆಯ ಬೈಕ್‍ಗಳ ಸಾಲಿಗೆ ಸೇರಲಿದೆ. ಆದರೆ ರಸ್ತೆಯಲ್ಲಿ ಸಂಚಾರಿಸುವ ಪಾದಚಾರಿಗಳಿಗೆ ಇದರ ಸೌಂಡ್ ಕಿರಿಕಿರಿಯನ್ನು ಉಂಟುಮಾಡುವಂತಿದ್ದು, ಡುಕಾಟಿಯು ಇದರ ಎಕ್ಸ್ ಟ್ರೀಮ್ ಆವೃತಿಯನ್ನು ಹೊರತರಲು ನಿರ್ಧರಸಿದ್ದರು ಆದರೆ ಪ್ಯಾನಿಗಾಲೆ ತನ್ನ ನಿರ್ಧಾರ ಬದಲಿಸಿ ವಿ4 ಆರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಡುಕಾಟಿ ಪ್ಯಾನಿಗಾಲೆ ವಿ4 ಆರ್ ಬೈಕ್ ವಿಶ್ವ ಸೂಪರ್‍ ಬೈಕ್ ಚಾಂಪಿಯನ್ ಶಿಪ್‍‍ನ ವಿಶೇಷ ಆವೃತಿಯ ಗುಣಮಟ್ಟವನ್ನು ಹೊಂದಿದ್ದು, ಡುಕಾಟಿ ಬೈಕ್‍ಗಳು ಹಲವು ವರ್ಷಗಳಿಂದ ಸಕ್ರೀಯವಾಗಿ ವಿಶ್ವ ಸೂಪರ್ ಬೈಕ್ ಚಾಂಪಿಯನ್ ಶಿಪ್‍‍ನಲ್ಲಿ ಇತರರಿಗೆ ಪ್ರತಿಸ್ಪರ್ಧಿಯಾಗಿದ್ದಾರೆ. ವಿಶ್ವ ಸೂಪರ್‍ ಬೈಕ್ ಚಾಂಪಿಯನ್ ಶಿಪ್‍‍ನ ನಿಯಮದ ಪ್ರಕಾರ ಅದರಲ್ಲಿ ಭಾಗವಹಿಸುವ ಬೈಕ್‍ಗಳ ಆವೃತಿಯಲ್ಲಿ ಕೆಲವು ಬೈಕ್‍ಗಳಾದರು ರಸ್ತೆ ಸಂಚಾರಕ್ಕಾಗಿ ಮಾರಾಟ ವಾಗಿರಬೇಕು.

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಡುಕಾಟಿ ಪ್ಯಾನಿಗಲೆ ಬಹುತೇಕ ಬೈಕ್‍ಗಳು ರೇಸ್‍ಬೈಕ್ ಕೆಲವು ಮಾತ್ರ ಗ್ರಾಹಕರಿಗೆ ರಸ್ತೆ ಸಂಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ವಿಶ್ವ ಸೂಪರ್ ಬೈಕ್ ಚಾಂಪಿಯಾನ್ ಶಿಪ್‍‍ನ ಇನ್ನೊಂದು ನಿಯಮದ ಪ್ರಕಾರ ಸ್ಪರ್ಧೆಯಲ್ಲಿ ಭಾಗವಹೊಸುವ ಎಲ್ಲಾ ಬೈಕ್‍ಗಳ ಇಂಜಿನ್ 1,000ಸಿಸಿಯ ಒಳಗೆ ಇರಬೇಕು. ಪ್ಯಾನಿಗಾಲೆ ವಿ4 ಆರ್ ಬೈಕ್‍ನ ಇಂಜಿನ್ 998ಸಿಸಿ ಉತ್ಪಾದಿಸುವ ಗುಣ ಹೊಂದಿದ್ದು, ಆದರೆ ಇಂಜಿನ್ ಉತ್ಪಾದನೆ ಗುಣ ಸ್ಟ್ಯಾಂಡರ್ಡ್ ಇಂಜಿನ್‍ಗಿಂತ ಅಧಿಕವಾಗಿದೆ.

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಇಂಜಿನ್ 215 ಬಿಹೆಚ್‍ಪಿನಲ್ಲಿ 15,250 ಆರ್‍‍ಬಿ‍ಎಂ ಮತ್ತು 112 ಎನ್‍ಎಮ್‍ನಲ್ಲಿ 11,500 ಆರ್‍‍ಬಿ‍ಎಂ ಉತ್ಪಾದಿಸುವ ಗುಣದೊಂದಿಗೆ 6-ಸ್ಪೀಡ್ ಗೇರ್‍‍ಬಾಕ್ಸ್ ಹೊಂದಿದೆ. ಇದರ ವಿನ್ಯಾಸಗಳು ಮೋಟೋಜಿಪಿ ಸ್ಟೈಲ್, ತಾಂತ್ರಿಕವಾಗಿ ರೇಸ್‍ಗೆ ಸರಿದೂಗುವ ಗೇರ್‍‍ಬಾಕ್ಸ್, ಅಲ್ಯೂಮಿನಿಯಂ ಸ್ವಿಂಗ್ರಾಮ್ ಹೀಗೆ ಹಲವಾರು ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಪ್ಯಾನಿಗಾಲೆ ವಿ4 ಆರ್ ರೇಸ್‍ಟ್ರ್ಯಾಕ್‍ಗಳಲ್ಲಿ ವೇಗವಾಗಿ ಸಾಗಲು ಸಹಕಾರಿಯಾಗುವ ರೀತಿಯಲ್ಲಿ ಇದರ ವಿನ್ಯಾಸ ಹೊಂದಿದ್ದು, ಭಾರತದ ಮಾರುಕಟ್ಟೆಗೆ ವಿತರಸಿದ ಬಳಿಕವು ಅದೇ ವಿನ್ಯಾಸ ಮುಂದುವರೆಸುವ ಸಾಧ್ಯತೆಗಳಿವೆ. ಭಾರತದ 2 ಆವೃತ್ತಿಯನ್ನು ದೆಹಲಿಯ ಡೀಲರ್ ಮೂಲಕ ನಾರ್ತ್ ಸ್ಟಾರ್ ಅಟೋಮೊಟೀವ್‍ಗೆ ವಿತರಿಸಲಾಗಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಡುಕಾಟಿ ಶೀಘ್ರದಲ್ಲೇ ಬುದ್ದ ಇಂಟನ್ರ್ಯಾಷನಲ್ ಸಕ್ರ್ಯೂಟ್ ರೇಸ್‍ನಲ್ಲಿ ಪಾಲ್ಗೊಳ್ಳಲಿದೆ. ಡುಕಾಟಿ ಇಂಡಿಯದ ಮ್ಯಾನೇಜಿಂಗ್ ಡೈರಕ್ಟರ್ ಮಾತನಾಡಿ, ಭಾರತಕ್ಕೆ ಮೊದಲ ಎರಡು ವಿಭಾಗದ ಬೈಕ್‍ಗಳನ್ನು ವಿತರಣೆ ಮಾಡಲು ಹೆಮ್ಮಪಡುತ್ತೇವೆ, ಭಾರತದಲ್ಲೂ ಈ ಬ್ರಾಂಡ್ ಯಶಸ್ಸುಗಳಿಸುವ ನಿರೀಕ್ಷೇ ಹೊಂದಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಪ್ಯಾನಿಗಾಲೆ ವಿ4 ಆರ್ ಬೈಕ್ ಸವಾರನ ಬಯಕೆಯನ್ನು ಪೂರೈಸಲಿದ್ದು, ಭಾರತದ ರೇಸ್‍ಟ್ರ್ಯಾಕ್‍ನ ಪ್ರಮುಖ ಅಧ್ಯಯನದಲ್ಲಿ ಸೇರಿಕೊಳ್ಳಲಿದೆ. ಡುಕಾಟಿ ಕುಟಂಬಕ್ಕೆ ಸವಾರರನ್ನು ಸ್ವಾಗತಿಸುತ್ತೇವೆ ಹಾಗೂ ಭಾರತೀಯ ರೇಸ್‍ಟ್ರ್ಯಾಕ್‍ನಲ್ಲಿ ಪ್ರಾಬಲ್ಯ ಮೆರೆಯುವುದಕ್ಕೆ ಸಾಕ್ಷಿಯಾಗಲು ಉತ್ಸುಕರಾಗಿದ್ದೇವೆ.

ಭಾರತದಲ್ಲಿ ಶುರುವಾಯ್ತು ಡುಕಾಟಿ ಪ್ಯಾನಿಗಾಲೆ ವಿ4ಆರ್ ವಿತರಣೆ

ಡುಕಾಟಿ ಪ್ಯಾನಿಗಾಲೆ ವಿ4 ಆರ್ ಶಕ್ತಿಶಾಲಿ ಎಂಜೀನ್ ಹೊಂದಿದ್ದು, ಇದರ ಲುಕ್ ಕೂಡ ಆಕರ್ಷಕವಾಗಿದೆ. ಭಾರತೀಯ ರೇಸ್ ಪ್ರಿಯರಿಗೆ ಆಯ್ಕೆಯನ್ನು ಹೆಚ್ಚಿಸಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.51.8 ಲಕ್ಷ ಇದು ತುಸು ಅಧಿಕವಾಗಿದೆ. ಭಾರತ ರೇಸ್ ಟ್ರ್ಯಾಕ್‍ಗಳಲ್ಲಿ ಇದು ಎಷ್ಟರ ಮಟ್ಟಗೆ ಪ್ರತಿಸ್ಪರ್ಧೆಯನ್ನು ನೀಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

Most Read Articles

Kannada
Read more on ಡುಕಾಟಿ ducati
English summary
Deliveries Of The Ducati Panigale V4 R Begin In India - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more