Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಾಂತ್ರಿಕ ದೋಷ ನಿವಾರಣೆ- ಹಾರ್ಲೆ ಲೈವ್‌ವೈರ್ ಇವಿ ಬೈಕ್ ಉತ್ಪಾದನೆಗೆ ಮರುಚಾಲನೆ..!
ಕಳೆದ ವಾರವಷ್ಟೇ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಮಾದರಿಯಾದ ಲೈವ್‌ವೈರ್‌ನಲ್ಲಿ ಕೆಲವು ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ಹೊಸ ಬೈಕ್ ಉತ್ಪಾದನೆ ಸಂಪೂರ್ಣ ಬಂದ್ ಮಾಡಿತ್ತು. ಇದೀಗ ಹೊಸ ಬೈಕಿನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ಸಮಸ್ಯೆ ಬಗೆಹರಿದಿದ್ದು, ಬಂದ್ ಮಾಡಲಾಗಿದ್ದ ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗಿದೆ.

ಮಾಹಿತಿಗಳ ಪ್ರಕಾರ, ಕೇವಲ ಒಂದೇ ಯುನಿಟ್‌ನಲ್ಲಿ ಚಾರ್ಜಿಂಗ್ ಸಿಸ್ಟಂ ದೋಷ ಕಂಡುಬಂದಿದ್ದು, ಗ್ರಾಹಕರೊಬ್ಬರ ದೂರಿನ ಮೇರೆಗೆ ಹೊಸ ಲೈವ್‌ವೈರ್ ಬೈಕ್‌ಗಳ ಉತ್ಪಾದನೆಯನ್ನೇ ಸಂಪೂರ್ಣ ಮಾಡಿದ್ದ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಅತಿ ಕಡಿಮೆ ಅವಧಿಯಲ್ಲಿ ಹೊಸ ಬೈಕಿನ ಕುರಿತಾದ ತಾಂತ್ರಿಕ ಸಮಸ್ಯೆಗೆ ಮುಕ್ತಿ ನೀಡಿದೆ. ಗ್ರಾಹಕರ ದೂರು ಬಂದಾದ ಎಲ್ಲಾ ಬೈಕ್‌ಗಳಲ್ಲೂ ಇದೇ ಸಮಸ್ಯೆ ಇರಬಹುದು ಎಂದುಕೊಂಡಿದ್ದ ಹಾರ್ಲೆ ಸಂಸ್ಥೆಯು ಮಾರಾಟವಾದ ಬೈಕ್‌ಗಳಲ್ಲಿ ತಾಪಸಣೆ ನಡೆಸಿ ಒಂದೇ ಒಂದು ಯುನಿಟ್‌ನಲ್ಲಿ ಮಾತ್ರವೇ ಈ ರೀತಿಯ ಸಮಸ್ಯೆ ಉಂಟಾಗಿರುವುದನ್ನು ಪತ್ತೆಹಚ್ಚಿದೆ.

ಹೀಗಾಗಿ ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟವಾಗುತ್ತಿರುವ ಲೈವ್‌ವೈರ್ ಬೈಕ್‌ಗಳಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಉತ್ಕೃಷ್ಟ ಗುಣಮಟ್ಟ ಮತ್ತು ಗ್ರಾಹಕರ ವಿಶ್ವಾಸದೊಂದಿಗೆ ಬೈಕ್ ಉತ್ಪಾದನೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ.

ಇನ್ನು ಲೈವ್‌ವೈರ್ ಎಲೆಕ್ಟ್ರಿಕ್ ಸೂಪರ್ ಬೈಕ್ ಸದ್ಯ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಈ ಹಿನ್ನೆಲೆ ಬಿಡುಗಡೆಗೂ ಮುನ್ನ ಪ್ರದರ್ಶನಗೊಳಿಸಿ ಆಯ್ದ ಮೋಟಾರ್‌ಸ್ಪೋರ್ಟ್ ಗ್ರಾಹಕರಿಗೆ ಮಾತ್ರವೇ ಟೆಸ್ಟ್ ರೈಡ್ ಸೌಲಭ್ಯವನ್ನು ಕಲ್ಪಿಸುವ ಮೂಲಕ ಗ್ರಾಹಕರ ಅನುಭವ ಮತ್ತು ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದೆ.

ಹಲವು ವಿಶೇಷ ತಂತ್ರಜ್ಞಾನಗಳ ಪ್ರೇರಣೆ ಹೊಂದಿರುವ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಹಾರ್ಲೆ ಸಂಸ್ಥೆಯ ಜನಪ್ರಿಯ ಸ್ಪೋರ್ಟ್‌ಸ್ಟರ್ ಬೈಕಿನ ವಿನ್ಯಾಸದೊಂದಿಗೆ ಸಿದ್ದವಾಗಿದ್ದು, ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ಲೈಟ್, ಎಲ್ಇಡಿ ಲೈಟಿಂಗ್ಸ್, ಬ್ಲೂಟೂಥ್ ಕನೆಕ್ವಿವಿಟಿ, 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟರ್ನ್ ಇಂಡಿಕೇಟರ್ ಸೌಲಭ್ಯಗಳೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಎಲೆಕ್ಟ್ರಿಕ್ ಬೈಕ್ ಮಾದರಿಯಾದರೂ ಸಾಮಾನ್ಯ ಬೈಕಿನ ರೂಪವನ್ನೇ ಉಳಿಸಿಕೊಳ್ಳಲು ಪ್ರಯತ್ನಿಸಿರುವ ಹಾರ್ಲೆ ಸಂಸ್ಥೆಯು ಡಮ್ಮಿಯಾದ ಫ್ಯೂಲ್ ಟ್ಯಾಂಕ್ ವಿನ್ಯಾಸದಲ್ಲಿ ಬ್ಯಾಟರಿ ಚಾರ್ಜಿಂಗ್ ಸಾಕೆಟ್ ಜೋಡಣೆ ಮಾಡುವುದರೊಂದಿಗೆ ಎಕ್ಸ್ ಪೋಸ್ಡ್ ಫ್ರೇಮ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಸೀಟ್ ಸೆಟಪ್ ಸೇರಿಸಿದೆ.

ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಬೈಕ್ ಮಾದರಿಯು 15.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಸಾಂಪ್ರದಾಯಿಕ ಮಾದರಿಯ ಐಸಿ ಎಂಜಿನ್ ಬದಲಿಗೆ ನೇರವಾಗಿ ಎಲೆಕ್ಟ್ರಿಕ್ ಮೋಟರ್‌ಗೆ ಕನೆಕ್ಟ್ ಮಾಡಲಾಗಿದೆ. ಹೀಗಾಗಿ ಲೈವ್‌ವೈರ್‌ನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 103-ಬಿಹೆಚ್‍ಪಿ ಪವರ್ ಹಾಗೂ 116-ಎನ್‍ಎಂ ಟಾರ್ಕ್ ಉತ್ಪಾದಿಸಬಲ್ಲದು.

ಈ ಮೂಲಕ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಅದ್ಭುತವಾದ ಪರ್ಫಾಮೆನ್ಸ್ ಹೊಂದಿದ್ದು, ಕಂಪನಿಯ ಪ್ರಕಾರ, ಲೈವ್‌ವೈರ್ ಸುಮಾರು 3 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0-100 ಕಿ.ಮೀ ವೇಗವನ್ನು ಪಡೆಯುವುದಲ್ಲದೇ ಒಂದು ಬಾರಿ ಚಾರ್ಜ್ ಮಾಡಿದರೆ 235 ಕಿ.ಮೀ ವ್ಯಾಪ್ತಿಯವರೆಗೂ ಚಲಿಸಬಹುದು.

ಜೊತೆಗೆ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಸ ಬೈಕಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ. ಸಿಕ್ಸ್ ಆಕ್ಸಿಸ್‍ನ ಇನ್‍ಹರ್ಶಿಯಲ್ ಮ್ಯಾನೇಜ್‍ಮೆಂಟ್ ಯೂನಿಟ್(ಐಎಂಯು), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಡ್ರ್ಯಾಗ್ ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಮ್ (ಡಿಎಸ್‌ಸಿಎಸ್), ಕಾರ್ನರಿಂಗ್ ಎಬಿಎಸ್ ಹಾಗೂ ರಿಯರ್ ವ್ಹೀಲ್ ಲಿಫ್ಟ್ ಮಿಟಿಗೇಷನ್ ಸಿಸ್ಟಂನೊಂದಿಗೆ 17 ಇಂಚಿನ ಮೈಕೆಲಿನ್ ಸ್ಕಾರ್ಚರ್ ಟಯರ್ ಸೇರಿದಂತೆ ರೋಡ್, ಸ್ಪೋರ್ಟ್, ರೇನ್ ಹಾಗೂ ರೇಂಜ್ ರೈಡಿಂಗ್ ಮೋಡ್‍ಗಳನ್ನು ಸಹ ನೀಡಲಾಗಿದೆ.