ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಐಷಾರಾಮಿ ಕ್ರೂಸ್ ಬೈಕ್‌ ನಿರ್ಮಾಣ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಭಾರತದಲ್ಲಿ ವಿವಿಧ ಮಾದರಿಯ 15ಕ್ಕೂ ಬೈಕ್‌ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಪೈಕಿ ಒಂದಾಗಿರುವ ಸ್ಟ್ರೀಟ್ ರಾಡ್ 750 ಮಾರಾಟ ಕಳೆದ ಎರಡು ತಿಂಗಳಿನಿಂದ ನೆಲಕಚ್ಚಿದೆ.

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಹಾರ್ಲೆ ಸ್ಟ್ರೀಟ್ ರಾಡ್ 750 ಮಾರಾಟವು ರಾಯಲ್ ಎನ್‌ಫೀಲ್ಡ್ ಟ್ವಿನ್ ಬೈಕ್‌ಗಳ ಬಿಡುಗಡೆಯ ನಂತರ ನೆಲಕಚ್ಚಿದ್ದು, ಅತಿ ಕಡಿಮೆ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳತ್ತ ಮುಖ ಮಾಡಿರುವ ಐಷಾರಾಮಿ ಕ್ರೂಸ್ ಬೈಕ್ ಮಾಲೀಕರು ಭಾರತದಲ್ಲೇ ನಿರ್ಮಾಣವಾಗುವ ಬೈಕ್ ಮಾದರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಮೇಲಿನ ಅತಿಯಾದ ಆಮದು ಸುಂಕದಿಂದಾಗಿ ಗ್ರಾಹಕರು ಸ್ಟ್ರೀಟ್ ರಾಡ್ 750 ಸರಿಸಮನಾಗಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ ಖರೀದಿಗೆ ಮುಂದಾಗುತ್ತಿದ್ದು, ಕಳೆದ ಫೆಬ್ರುವರಿ ಮತ್ತು ಮಾರ್ಚ್ ಅವಧಿಯಲ್ಲಿ ಸ್ಟ್ರೀಟ್ ರಾಡ್ 750 ಒಂದೇ ಒಂದು ಬೈಕ್ ಕೂಡಾ ಮಾರಾಟವಾಗಿಲ್ಲ.

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಇನ್ನುಳಿದಂತೆ ಸ್ಟ್ರೀಟ್ 750 ಬೈಕ್ ಮಾರಾಟದಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಮಾರಾಟ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಬೆಲೆಯಲ್ಲಿ ತುಸು ದುಬಾರಿ ಎನ್ನಿಸುವ ಸ್ಟ್ರೀಟ್ ರಾಡ್ 750 ಮಾರಾಟವು ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರದ ಮುಂದೆ ಮಕಾಡೆ ಮಲಗಿದೆ.

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.51 ಲಕ್ಷ ಬೆಲೆ ಹೊಂದಿರುವ ಹಾರ್ಲೆ ಸ್ಟ್ರೀಟ್ ರಾಡ್ 750 ಬೈಕ್ ಮಾದರಿಯು 749ಸಿಸಿ ಎಂಜಿನ್‌ ಹೊಂದಿದ್ದು, ಅದೇ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.50 ಲಕ್ಷ ಮತ್ತು ರೂ. 2.65 ಲಕ್ಷ ಬೆಲೆ ಹೊಂದಿರುವ ಆರ್‌ಇ ಟ್ವಿನ್ ಬೈಕ್ 649 ಸಿಸಿ ಎಂಜಿನ್‌ನೊಂದಿಗೆ ಸ್ಟ್ರೀಟ್ ರಾಡ್ 750 ಬೈಕಿಗೆ ತೀವ್ರ ಪೈಪೋಟಿ ನೀಡಿವೆ.

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಇನ್ನು ಕ್ಲಾಸಿಕ್ ವಿನ್ಯಾಸದ ಮತ್ತು ಅಧಿಕ ಸಾಮರ್ಥ್ಯದ ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ ಮೂಲಕ ಮತ್ತೊಂದು ಹಂತದತ್ತ ಹೆಜ್ಜೆಯಿಡುತ್ತಿದೆ.

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಇಂಟರ್‍‍ಸೆಪ್ಟರ್ 650 ಬೈಕ್ ಮಾದರಿಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.50 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.65 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 300 ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿವೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಆವೃತ್ತಿಯು 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

 ಆರ್‌ಇ ಟ್ವಿನ್ ಬೈಕ್‌ಗಳ ಅಬ್ಬರ- ಮಕಾಡೆ ಮಲಗಿದ ಹಾರ್ಲೆ ಸ್ಟ್ರೀಟ್ ರಾಡ್ 750

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
English summary
Harley Davidson Street Rod 750 Sales Down to Zero. Read in Kannada.
Story first published: Monday, April 8, 2019, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X