Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೀರೋ ಎಕ್ಸ್‌ಪಲ್ಸ್ 200ಟಿ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು
ಅನೇಕ ಅಡೆ ತಡೆಗಳ ನಡುವೆ ಕೊನೆಗೂ ಹೀರೋ ಮೋಟೊಕಾರ್ಪ್ ತನ್ನ ಎಕ್ಸ್‌ಪಲ್ಸ್ 200 ಸರಣಿಯ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಗೊಳಿಸಿದೆ. ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಎರಡು ಮಾದರಿಗಳಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ. ಎಕ್ಸ್‌ಪಲ್ಸ್ 200 ಆಫ್ ರೋಡ್ ಮಾದರಿಯಾದಾಗಿದ್ದರೆ, ಎಕ್ಸ್‌ಪಲ್ಸ್ 200ಟಿ ಆನ್ ರೋಡ್ ಮತ್ತು ಟೂರಿಂಗ್ ಮಾದರಿಯಾದಾಗಿದೆ.

ಎಕ್ಸ್‌ಪಲ್ಸ್ 200ಟಿ ಕೈಗೆಟುಕುವ ದರದಲ್ಲಿ ಸಿಗಲಿದ್ದು, ಅದರ ಬಗ್ಗೆ ನೀವು ಕೆಲವೊಂದು ವಿಷಯಗಳನ್ನು ತಿಳಿಯಬೇಕು.
1. ಎಕ್ಸ್ ಟ್ರೀಮ್ 200ಆರ್ ನಲ್ಲಿರುವ ಫೀಚರ್ ಗಳನ್ನು ಹೊಂದಿದೆ.
ಹೀರೋ ಕಂಪನಿಯು ತನ್ನ 200 ಸಿಸಿ ಎಂಜಿನ್ ಗಳನ್ನು, ತನ್ನ ನಾಲ್ಕು ಮೋಟಾರ್ ಸೈಕಲ್ ಮಾದರಿಗಳಾದ - ಎಕ್ಸ್ ಟ್ರೀಮ್ 200 ಆರ್, ಎಕ್ಸ್ ಟ್ರೀಮ್ 200 ಎಸ್, ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಗಳಲ್ಲಿ ಅಳವಡಿಸಿದೆ. 199.6 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲಿಂಗ್ ನ ಈ ಎಂಜಿನ್, 18.4 ಬಿಹೆಚ್ ಪಿ ಪವರ್ ಮತ್ತು 17.2 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು. 5ಸ್ಪೀಡಿನ ಟ್ರಾನ್ಸ್ ಮಿಷನ್ ಹೊಂದಿದೆ.

2. ಎಂಜಿನ್ ನ ಹೊರಗೆ ವಿಭಿನ್ನತೆ
ಹೀರೋ ಎಕ್ಸ್‌ಪಲ್ಸ್ 200ಟಿ ಮತ್ತು ಎಕ್ಸ್‌ಪಲ್ಸ್ 200 ಒಂದೇ ಎಂಜಿನ್ ಹೊಂದಿದ್ದರೂ, ಅನೇಕ ವಿಷಯಗಳಲ್ಲಿ ವಿಭಿನ್ನತೆ ಹೊಂದಿವೆ. ಎಕ್ಸ್‌ಪಲ್ಸ್ 200 ಟಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಗಳನ್ನು ಮತ್ತು ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊ ಶಾಕ್ ಗಳನ್ನು ಹೊಂದಿದೆ.

ಎಕ್ಸ್‌ಪಲ್ಸ್ 200ಟಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ಎಕ್ಸ್‌ಪಲ್ಸ್ 200 ಮುಂಭಾಗದಲ್ಲಿ 21 ಇಂಚಿನ ಮತ್ತು ಹಿಂಭಾಗದಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಎಕ್ಸ್‌ಪಲ್ಸ್ 200ಟಿ ಮೋಟಾರ್ ಸೈಕಲ್ ಎಕ್ಸ್‌ಪಲ್ಸ್ 200 ಗಿಂತ ಐದು ಕೆ,ಜಿ ಯಷ್ಟು ಕಡಿಮೆ ತೂಕ ಹೊಂದಿದೆ.

3. ಹೆಚ್ಚು ಫೀಚರ್ ಗಳನ್ನು ಹೊಂದಿದೆ
ಎಕ್ಸ್‌ಪಲ್ಸ್ 200ಟಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ. ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸರಾಸರಿ ಸ್ಪೀಡ್, ಟೈಮ್ ಮತ್ತು ನ್ಯಾವಿಗೇಶನ್‍ಗಳ ಬಗೆಗಿನ ಮಾಹಿತಿಯನ್ನು ತೋರಿಸುತ್ತದೆ. ಈ ಮೋಟಾರ್ ಸೈಕಲ್ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಎಲ್ಇಡಿ ಲೈಟ್ ಗಳನ್ನು ಹೊಂದಿದ್ದು, ಸ್ಟಾಂಡರ್ಡ್ ಆಗಿ ಸಿಂಗಲ್ ಚಾನೆಲ್ ನ ಎಬಿಎಸ್ ಅಳವಡಿಸಲಾಗುವುದು.

4. ಎಕ್ಸ್‌ಪಲ್ಸ್ 200 ಗಿಂತ ವಿಭಿನ್ನ ಫೀಚರ್ ಗಳನ್ನು ಹೊಂದಿದೆ
ಎಕ್ಸ್‌ಪಲ್ಸ್ 200ಟಿ ಮತ್ತು ಎಕ್ಸ್ ಪಲ್ಸ್ 200 ನಡುವೆ ಎರಡು ವಿಭಿನ್ನ ಡಿಸೈನ್ ಗಳಿವೆ. ಮೊದಲನೇಯದಾಗಿ, ಎಕ್ಸ್‌ಪಲ್ಸ್ 200ಟಿ ಯಲ್ಲಿ ಅಗಲವಾದ ಹ್ಯಾಂಡಲ್ ಬಾರ್ ಮತ್ತು ರಿಬ್ಡ್ ಸೀಟುಗಳಿವೆ. ಎರಡನೇಯದಾಗಿ, ಎಕ್ಸಾಸ್ಟ್ ಸಿಸ್ಟಂ. ಎಕ್ಸ್‌ಪಲ್ಸ್ 200ಟಿ ಮೋಟಾರ್ ಸೈಕಲ್, ಎಕ್ಸ್‌ಪಲ್ಸ್ 200 ಗೆ ಹೋಲಿಸಿದರೆ ಸಾಂಪ್ರಾದಾಯಕವಾದ ಎಕ್ಸಾಸ್ಟ್ ಸಿಸ್ಟಮ್ ಹೊಂದಿದೆ. ಎಕ್ಸ್‌ಪಲ್ಸ್ 200 ಮೋಟಾರ್ ಸೈಕಲ್ ಹೈ ಮೌಂಟ್ ನ ಎಕ್ಸಾಸ್ಟ್ ಸಿಸ್ಟಮ್ ಹೊಂದಿದೆ.
MOST READ: ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮಹೀಂದ್ರಾ ಥಾರ್ ಸಿಗ್ನೇಚರ್

5. ಪೈಪೋಟಿ ಮತ್ತು ಪ್ರತಿ ಸ್ಪರ್ಧೆ
ದೂರ ಪಯಣಕ್ಕಾಗಿ 200 ಸಿಸಿ ಸೆಗ್ ಮೆಂಟಿನಲ್ಲಿ ಕಡಿಮೆ ಪ್ರಮಾಣದ ಮೋಟಾರ್ ಸೈಕಲ್ ಗಳಿವೆ, ಹೀರೋ ಎಕ್ಸ್‌ಪಲ್ಸ್ 200ಟಿ ಮೋಟಾರ್ ಸೈಕಲ್ ನ ಬೆಲೆಯಲ್ಲಿ ಬೇರೆ ಯಾವುದೇ ಬೈಕ್‍ಗಳಿಲ್ಲ. ಬಜಾಜ್ ಅವೆಂಜರ್ 220 ಮತ್ತು ಸುಜುಕಿ ಇನ್‍ಟ್ರೂಡರ್ ಬೈಕ್‍ಗಳು ಈ ರೇಂಜಿನಲ್ಲಿ ಸಿಗುತ್ತವೆಯಾದರೂ ಹೀರೋ ಎಕ್ಸ್‌ಪಲ್ಸ್ 200ಟಿ ಅವುಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.

ಹೀರೋ ಎಕ್ಸ್‌ಪಲ್ಸ್ ನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1.05 ಲಕ್ಷಗಳಾಗಿದೆ.